ಜೆಡಿಎಸ್ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ಕಿರುಕುಳ, ಸೂರಜ್ ರೇವಣ್ಣ ವಿರುದ್ಧ ದೂರು!
ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ವಿರುದ್ದ ಸಲಿಂಗ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಹಾಸನ (ಜೂ.21): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಇದ್ದು, ಇದರ ಬೆನ್ನಲ್ಲೇ ವಿಧಾನ ಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ವಿರುದ್ದ ಸಲಿಂಗ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಮಾಜಿ ಸಚಿವ ಹೆಚ್ ಡಿ ರೇವಣ್ಣ ಹಿರಿಯ ಪುತ್ರ ತಮ್ಮದೇ ಪಕ್ಷದ ಕಾರ್ಯಕರ್ತ, ಯುವಕನೋರ್ವನಿಗೆ ಸಲಿಂಗ ಲೈಂಗಿಕ ದೌರ್ಜನ್ಯ ನಡೆಸಿರೋ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಜೂನ್ 16ರಂದು ಕೃತ್ಯ ನಡೆದಿದೆ ಎನ್ನಲಾಗಿದೆ.
ಕಿರಿಯ ಮಗ ಪ್ರಜ್ಚಲ್ ವಿರುದ್ದ ಅತ್ಯಾಚಾರ ಆರೋಪದ ಬೆನ್ನಲ್ಲೇ ಮತ್ತೋರ್ವ ಪುತ್ರನ ವಿರುದ್ಧವೂ ಗಂಭೀರ ಆರೋಪ ಕೇಳಿಬಂದಿದೆ. ಸಲಿಂಗ ಲೈಂಗಿಕತೆಯ ಆರೋಪದಲ್ಲಿ ಹಾಸನ ಜಿಲ್ಲೆ ಅರಕಲಗೂಡು ಮೂಲದ ಜೆಡಿಎಸ್ ಕಾರ್ಯಕರ್ತನಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಕೇಳಿಬಂದಿದೆ. ತನ್ನ ಮೇಲೆ ಸೂರಜ್ ರೇವಣ್ಣ ದೌರ್ಜನ್ಯ ನಡೆಸಿರುವ ಬಗ್ಗೆ ಡಿಜಿ ಮತ್ತು ಐಜಿ ಗೆ ಸಂತ್ರಸ್ಥ ದೂರು ನೀಡಿದ್ದಾನೆ. ಬಲವಂತವಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂಬ ಬಗ್ಗೆ ದೂರು ದಾಖಲಾಗಿದೆ.
ಖ್ಯಾತ ಬಾಲಿವುಡ್ ಗಾಯಕನ ಜಮೀನು ಕಬಳಿಸಿದ ಆರೋಪ, ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು
ಜೂನ್ 16 ರ ರಾತ್ರಿ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ಸೂರಜ್ ರೇವಣ್ಣ ತೋಟದ ಮನೆಯಲ್ಲಿ ದೌರ್ಜನ್ಯ ನಡೆಸಿರೊ ಬಗ್ಗೆ ಆರೋಪಿಸಲಾಗಿದೆ. ಈ ವಿಲಕ್ಷಣ ಆರೋಪದಿಂದ ಮತ್ತೆ ರೇವಣ್ಣ ಕುಟುಂಬ ಮುಜುಗರಕ್ಕೀಡಾಗಿದೆ.
ತೋಟದ ಮನೆಗೆ ಕರೆಸಿಕೊಂಡು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿರೊ ಆರೋಪ ಇದೆ. ಸಿಎಂ, ಗೃಹ ಸಚಿವರು, ಡಿಜಿ ಮತ್ತು ಐಜಿಪಿ ಹಾಗೂ ಹಾಸನ ಎಸ್ಪಿಗೆ ದೂರು ನೀಡಿದ್ದಾರೆ. ಸದ್ಯ ಹಾಸನ ಜಿಲ್ಲೆಯಲ್ಲಿ ಈ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಬೆಂಗಳೂರಿಗೆ ತೆರಳಿ ಸಂತ್ರಸ್ಥ ದೂರು ನೀಡಿದ್ದಾನೆ.
ಸಂತ್ರಸ್ಥ ಯುವಕನ ವಿರುದ್ಧ ಸೂರಜ್ ರೇವಣ್ಣ ಕಡೆಯಿಂದ ದೂರು: ಸಂತ್ರಸ್ತ ಯುವಕನ ವಿರುದ್ಧ ಸೂರಜ್ ರೇವಣ್ಣ ಕಡೆಯಿಂದ ಕೂಡ ದೂರು ದಾಖಲಾಗಿದೆ. ಹೊಳೆನರಸೀಪುರ ಠಾಣೆಗೆ ಸೂರಜ್ ಆಪ್ತ ಶಿವಕುಮಾರ್ ದೂರು ನೀಡಿದ್ದು, ಇದು ಸುಳ್ಳು ಆರೋಪ, ಬ್ಲಾಕ್ಮೇಲ್ ಆರೋಪದಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಎಂಎಲ್ಸಿ ಸೂರಜ್ ರೇವಣ್ಣ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳ ಆರೋಪ ಮಾಡಲಾಗುತ್ತಿದ್ದು, 5 ಕೋಟಿ ಹಣ ನೀಡಲು ಸೂರಜ್ ರೇವಣ್ಣಗೆ ಬೆದರಿಕೆ ಹಾಕಲಾಗಿದೆ. ಹಣ ಕೊಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುವ ಬ್ಲಾಕ್ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಾಸನ ಸ್ಥಳ ಮಹಜರು ವೇಳೆ ಒಂದೇ ಒಂದು ಅವಕಾಶ ಮಾಡಿ ಕೊಡಿ ಎಂದು ಪೊಲೀಸರ ಬಳಿ ಬೇಡಿಕೆ ಇಟ್ಟ ಪ್ರಜ್ವಲ್ ರೇವಣ್ಣ!
ಅರಕಲಗೂಡಿನ ಯುವಕನೋರ್ವ ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಸೂರಜ್ ಅವರ ಪಿಎ ಶಿವಕುಮಾರ್ ಗೆ ಕರೆ ಮಾಡಿದ್ದ ಅದಕ್ಕೆ ಶಿವಕುಮಾರ್ ನೀನೇ ಸೂರಜ್ ರೇವಣ್ಣರನ್ನ ಭೇಟಿ ಮಾಡು ಎಂದಿದ್ದ. ಹೀಗಾಗಿ ಜೂ.16ರಂದು ಕೆಲಸ ಕೇಳಲು ಸೂರಜ್ ರೇವಣ್ಣ ಗನ್ನಿಕಡದ ತೋಟದ ಮನೆಗೆ ಹೋಗಿದ್ದ. ಕೆಲಸ ಕೇಳಿ ವಾಪಸ್ಸು ಬಂದ ಬಳಿಕ ಸೂರಜ್ ಗೆ ಬ್ಲಾಕ್ ಮೇಲ್ ಮಾಡಲಾಗಿದೆ. ಹಣಕ್ಕೆ ಬೇಡಿಕೆ ಇಡಲಾಗಿದೆ. ಸೂರಜ್‌ನಿಂದ ಹಣ ಕೊಡಿಸದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ ಎಂದು ಯುವಕ ಬೆದರಿಕೆ ಹಾಕಿದ್ದಾನೆ. ಬೆದರಿಕೆ ಬಂದ ನಂತರ ದೂರು ನೀಡುವಂತೆ ಸೂರಜ್ ತನ್ನ ಪಿಎ ಶಿವಕುಮಾರ್ ಗೆ ತಿಳಿಸಿದ ಹಿನ್ನೆಲೆ ದೂರು ನೀಡಲಾಗಿದೆ.
ಸೆಕ್ಷನ್ 384, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ಠಾಣೆ ಪೊಲೀಸರು, ಈ ಪ್ರಕರಣದಲ್ಲಿ ಮಾಜಿ ಸಚಿವ ಎಚ್ಡಿ ರೇವಣ್ಣ ಕುಟುಂಬಕ್ಕೆ ಮತ್ತೊಂದು ಕಂಟಕ ಎದುರಾಗಿದೆ.