ಮಕ್ಕಳೆಂದರೆ ನಿಮ್ಮ ಕನಸುಗಳನ್ನು ನನಸು ಮಾಡುವ ಯಂತ್ರಗಳಲ್ಲ. ಮನೆಯಲ್ಲಿ ಅಪ್ಪ-ಅಮ್ಮನ ಜಗಳನ್ನು ನೋಡಿಕೊಂಡು ಸಹಿಸಿಕೊಳ್ಳುವ ವಿಗ್ರಹವಲ್ಲ. ಅವರಿಗೆ ಪೋಷಕರಾಗಿ ಬೊಗಸೆಯಷ್ಟು ಪ್ರೀತಿ, ಎಡವಿಬಿದ್ದಾಗ ಕೊಂಚ ಆತ್ಮಸ್ಥೈರ್ಯ  ಕೊಡಿ. ಇಲ್ಲವೆಂದರೆ ಈ ಲೇಖನಾಳಂತೆ ಮಕ್ಕಳೇ ಮರಣಶಾಸನ ಬರೆದುಕೊಳ್ಳುವುದು ಗ್ಯಾರಂಟಿ!

ವರದಿ: ಪ್ರಜ್ವಲ್ ನಿಟ್ಟೂರು, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಜ.1): ಮಕ್ಕಳೆಂದರೆ ನಿಮ್ಮ ಕನಸುಗಳನ್ನು ನನಸು ಮಾಡುವ ಯಂತ್ರಗಳಲ್ಲ. ಮನೆಯಲ್ಲಿ ಅಪ್ಪ-ಅಮ್ಮನ ಜಗಳನ್ನು ನೋಡಿಕೊಂಡು ಸಹಿಸಿಕೊಳ್ಳುವ ವಿಗ್ರಹವಲ್ಲ. ಅವರಿಗೆ ಪೋಷಕರಾಗಿ ಬೊಗಸೆಯಷ್ಟು ಪ್ರೀತಿ, ಎಡವಿಬಿದ್ದಾಗ ಕೊಂಚ ಆತ್ಮಸ್ಥೈರ್ಯ ಕೊಡಿ. ಇಲ್ಲವೆಂದರೆ ಈ ಲೇಖನಾಳಂತೆ ಮಕ್ಕಳೇ ತುಂಬಾ ಚಿಕ್ಕ ವಯಸ್ಸಿಗೆ ಮರಣಶಾಸನ ಬರೆದುಕೊಳ್ಳುವುದು ಗ್ಯಾರಂಟಿ!

ಅಕೆಗಿನ್ನೂ 17 ವರ್ಷ ಬಾಳಿ ಬದುಕ ಬೇಕಾದ ವಯಸ್ಸು.ಸುಂದರವಾದ ಜೀವನ ಕಣ್ಮುಂದೆ ಇತ್ತು.. ಅದ್ರೂ ಪ್ರಾಣ ತೆಗೆದುಕೊಳ್ಳುವ ನಿರ್ಧಾರ ಮಾಡಿ ಬಿಟ್ಟಿದ್ಳು. ಅಷ್ಟಕ್ಕೂ ಅಕೆ ಅತ್ಮ*ಹತ್ಯೆ ಮಾಡಿಕೊಳ್ಳಲು ಕಾರಣ ಕೇಳಿದ್ರೆ ನಿಜಕ್ಕೂ ಬೇಜಾರು ಅನಿಸುತ್ತೆ.. ತಂದೆ ತಾಯಿಯ ಪ್ರೀತಿ ಮಕ್ಕಳಿಗೆ ಎಷ್ಟು ಮುಖ್ಯ ಅನ್ನೋದಕ್ಕೆ ಎಷ್ಟು ಮುಖ್ಯ ಅಲ್ವಾ.

ಹೌದು ಈ ಪೋಟೋದಲ್ಲಿ ಕಾಣ್ತಿರುವ ಹುಡುಗಿ ಹೆಸರು ಲೇಖನಾ ಇನ್ನೂ ಜಸ್ಟ್ 17 ವರ್ಷ ಅಷ್ಟೇ.. ನಿನ್ನೆ ಮಧ್ಯಾಹ್ನದ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದ ಬಾಡಿಗೆ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾಳೆ.

ಮಾನಸಿಕವಾಗಿ ನೊಂದಿದ್ದ ಲೇಖನಾ

ಮಂಡ್ಯದ ನಾಗಮಂಗಲ ಮೂಲದವರಾಗಿದ್ದ ಲೇಖನಾ ತಂದೆ ತಾಯಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ರು. ಅದ್ರೆ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಪ್ರತಿದಿನ ಜಗಳ. ಹಾಗಾಗಿ ಇಬ್ಬರು ಬೇರಾಗುವ ನಿರ್ಧಾರ ಮಾಡಿದ್ದರು. ಸುಮಾರು ನಾಲ್ಕೖದು ವರ್ಷಗಳಿಂದ ಇಬ್ಬರು ಕೂಡ ಬೇರೆ ಬೇರೆಯಾಗಿ ಬದುಕುತ್ತಿದ್ದರು. ಲೇಖನಾ ತನ್ನ ತಾಯಿ ಜೊತೆಗಿದ್ರು. 10ನೇ ತರಗತಿ ಫೇಲಾಗಿದ್ದ ಲೇಖನಾ ಮನೆಯಲ್ಲೇ ಇದ್ಲೂ ಒಂದು ಕಡೆ ವಿದ್ಯಾಭ್ಯಾಸ ಇಲ್ಲ, ಇನ್ನೊಂದು ಕಡೆ ತಂದೆ ತಾಯಿ ಜಗಳ ನೋಡಿ ಮಾನಸಿಕವಾಗಿ ನೊಂದು ಹೋಗಿದ್ದಳು. 

ಮೊದಲು ಶ್ರೀನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಲೇಖನಾ ತಾಯಿ ಕೇವಲ 1 ತಿಂಗಳ ಹಿಂದೆ ಇಲ್ಲಿಗೆ ಬಾಡಿಗೆಗೆ ಬಂದಿದ್ದರು. ಖಾಸಗಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಲೇಖನ ತಾಯಿ ನಿನ್ನೆ ಕೂಡ ಕೆಲಸಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ಲೇಖನಾ ಅತ್ಮ*ಹತ್ಯೆಗೆ ಶರಣಾಗಿದ್ದಾಳೆ. ತಾಯಿ ಊಟಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಸಾವಿಗೂ ಮುನ್ನ ಲೇಖನಾ ಬರೆದಿಟ್ಟಿರುವ ಡೆತ್ ನೋಟ್ ನಿಜಕ್ಕೂ ಕರಳು ಹಿಂಡುತ್ತೆ. ತಂದೆ ತಾಯಿ‌ ಕೌಟುಂಬಿಕ ಕಲಹದಿಂದ ದೂರವಾಗಿದ್ದರು. ತಂದೆ ಬೇರೆ ಕಡೆ ವಾಸವಿದ್ರು. ನನಗೆ ತಂದೆ-ತಾಯಿ‌ ಪ್ರೀತಿ ಸಿಕ್ತಾಯಿಲ್ಲ. ನಾನು ಒಂಟಿ ಎಂಬ ಭಾವನೆ ಕಾಡ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ಈ ವಿಚಾರಗಳಿಂದ ಮಾನಸಿಕವಾಗಿ ಕುಗ್ಗಿದ್ದ ಲೇಖನಾ ನಿನ್ನೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ನೂರಾರು ಕನಸು ಹೊತ್ತಿದ್ದ ಜೀವ ಅವೆಲ್ಲ ನನಸಾಗಿಸುವ ಪ್ರಯತ್ನ ಮಾಡದೇ ಇಹಲೋಕ ತ್ಯಜಿಸಿದ್ದು ಮಾತ್ರ ದುರಂತ.

ತಂದೆ ತಾಯಿಯ ಜಗಳದಲ್ಲಿ ಕೂಸು ಬಡವಾಯ್ತು ಅಂದ್ಹಾಗೆ ಇಲ್ಲಿ ಲೇಖನಾ ಜೀವವನ್ನೆ ಕಳೆದುಕೊಂಡಿದ್ದಾಳೆ. ಇನ್ನಾದ್ರು ಪೋಷಕರು ತಮ್ಮ ಜಗಳದಲ್ಲಿ ಮಕ್ಕಳನ್ನ ನಿರ್ಲಕ್ಷಿಸದೇ ಅವರಿಗೆ ಬೇಕಾದ ಪ್ರೀತಿ ಕೊಟ್ರೆ ಈ ರೀತಿಯ ದುರಂತ ಘಟನೆಗಳು ನಡೆಯೋದಿಲ್ಲ ಎನ್ನುವ ನಂಬಿಕೆ ನಮ್ಮದು