ಅಸ್ಸಾಂನ ಗೋಲಾಘಾಟ್ ಪಟ್ಟಣದಲ್ಲಿರುವ ತನ್ನ ಅತ್ತೆ - ಮಾವನ ಮನೆಯಲ್ಲಿ ಜಗಳವಾಡಿದ ನಂತರ ವ್ಯಕ್ತಿ ಮೂವರನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ನವದೆಹಲಿ (ಜುಲೈ 25, 2023) : ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಕೌಟುಂಬಿಕ ಸಮಸ್ಯೆಗೆ ಬೇಸತ್ತ ಆರೋಪಿ ತನ್ನ ಪತ್ನಿಯನ್ನು ಕೊಚ್ಚಿ ಕೊಂದಿದ್ದಾನೆ. ಹೆಂಡತಿ ಮಾತ್ರವಲ್ಲದೆ ಆರೋಪಿಯ ಅತ್ತೆ - ಮಾವನನ್ನು ಸಹ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಕೊಲೆ ಮಾಡಿದ ನಂತರ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಅಸ್ಸಾಂನ ಗೋಲಾಘಾಟ್ ಪಟ್ಟಣದ ಹಿಂದಿ ಸ್ಕೂಲ್ ರಸ್ತೆಯಲ್ಲಿರುವ ತನ್ನ ಅತ್ತೆ - ಮಾವನ ಮನೆಯಲ್ಲಿ ಜಗಳವಾಡಿದ ನಂತರ ವ್ಯಕ್ತಿ ಮೂವರನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ. "ಆರೋಪಿಯು ಈ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲಿನಲ್ಲಿದ್ದನು. ಬಿಡುಗಡೆಯಾದ ನಂತರ ಅವನು ಅತ್ತೆ - ಮಾವನ ಮನೆಗೆ ಹೋಗಿ ಮತ್ತೆ ಜಗಳವಾಡಿದನು. ನಂತರ, ತನ್ನ ಹೆಂಡತಿ ಮತ್ತು ಅತ್ತೆ - ಮಾವನನ್ನು ಕೊಂದಿದ್ದಾನೆ" ಎಂದು ಅಧಿಕಾರಿ ಹೇಳಿದರು.
ಇದನ್ನು ಓದಿ: ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್: ಕಾಂಗ್ರೆಸ್ ಶಾಸಕ ಗೋಪಾಲ್ ಕಾಂಡಾ ಖುಲಾಸೆಗೊಳಿಸಿದ ಕೋರ್ಟ್
ಅಪರಾಧ ಎಸಗಿದ ನಂತರ ಆರೋಪಿಯು ತನ್ನ 9 ತಿಂಗಳ ಮಗುವಿನೊಂದಿಗೆ ಗೋಲಾಘಾಟ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದೂ ಅವರು ಹೇಳಿದರು. ಮೃತರನ್ನು ಸಂಘಮಿತ್ರ ಘೋಷ್ ಮತ್ತು ಆಕೆಯ ಪೋಷಕರು ಸಂಜಿಬ್ ಘೋಷ್ ಹಾಗೂ ಜುನು ಘೋಷ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. "ಕಾಜಿರಂಗ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿರುವ ಮಹಿಳೆಯ ಕಿರಿಯ ಸಹೋದರಿ ದಾಳಿಯ ಸಮಯದಲ್ಲಿ ಕುಟುಂಬದೊಂದಿಗೆ ವಿಡಿಯೋ ಕಾಲ್‌ನಲ್ಲಿದ್ದರು" ಎಂದೂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಾನಸಿಕ ಆರೋಗ್ಯ ಚಿಕಿತ್ಸೆ ಪಡೆದು ಮನೆಗೆ ವಾಪಸ್, ಸ್ವಾಗತಿಸಿದ ಅಜ್ಜ-ಅಜ್ಜಿಯನ್ನೇ ಹತ್ಯೆಗೈದ ಮೊಮ್ಮಗ!
ಪೋಷಕರು ವಿಚ್ಚೇದನ, ತಾಯಿ ಬೇರೊಬ್ಬರನ್ನು ಮದುವೆಯಾಗಿ ದೂರ ಸರಿದಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಕೇರಳದ ತ್ರಿಶೂರ್ ಜಿಲ್ಲೆಯ ಅಕ್ಮಲ್ ತೀವ್ರವಾಗಿ ನೊಂದಿದ್ದ. ಅಷ್ಟೇ ಅಲ್ಲದೆ, ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದ. ಹೀಗಾಗಿ ಆಸ್ಪತ್ರೆಯಲ್ಲಿ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲ ತಿಂಗಳು ಚಿಕಿತ್ಸೆ ಪಡೆದ ಅಕ್ಮಲ್ ಚೇತರಿಸಿಕೊಂಡಿದ್ದ, ಸ್ವಭಾವದಲ್ಲಿ ಬದಲಾವಣೆಯಾಗಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಎಂಗೇಜ್‌ಮೆಂಟ್ ಬಳಿಕ ಭಾವಿ ಪತಿ ಜತೆ ಪಾರ್ಟಿ: 100 ಅಡಿ ಕಡಿದಾದ ಪ್ರಪಾತಕ್ಕೆ ಜಾರಿಬಿದ್ದು ಮಹಿಳೆ ಸಾವು
ಈ ಹಿನ್ನೆಲೆ, ತಾನು ಮನೆಗೆ ಮರಳುತ್ತೇನೆ. ಭವಿಷ್ಯ ರೂಪಿಸಿಕೊಳ್ಳುತ್ತೇನೆ ಎಂದು ಆಸ್ಪತ್ರೆ ವೈದ್ಯರಿಗೆ ಹೇಳಿದ್ದ. ಈತನ ವರ್ತನೆ, ನಡತೆ ಬದಲಾದ ಕಾರಣ ವೈದ್ಯರು ಅಕ್ಮಲ್‌ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರು. ಮನೆಗೆ ಮರಳಿದ ಮೊಮ್ಮಗನನ್ನು ಅಜ್ಜ-ಅಜ್ಜಿ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಆದರೆ ಸ್ವಾಾಗತ ಕೋರಿದ ಮರುಕ್ಷಣದಲ್ಲೇ ಅಜ್ಜ-ಅಜ್ಜಿಯನ್ನೇ ಹೈತ್ಯಗೈದು ಮಂಗಳೂರಿಗೆ ಪರಾರಿಯಾಗಿದ್ದ. ನಂತರ, ಮಂಗಳೂರು ಪೊಲೀಸರು ಅಕ್ಮಲ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕೇರಳದ ಘಟನೆ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದವನ ಕತೆಯಾಗಿದ್ರೆ ಅಸ್ಸಾಂನದ್ದು ಕೌಟುಂಬಿಕ ಸಮಸ್ಯೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಜೈಲಿಂದ ಬಂದ ತಕ್ಷಣ ಹೆಂಡತಿ ಜತೆಗೆ ಆಕೆಯ ಅಪ್ಪ - ಅಮ್ಮನನ್ನೂ ಸಹ ಕೊಲೆ ಮಾಡಿದ್ದಾನೆ ಆರೋಪಿ. ಇದರಿಂದ 9 ತಿಂಗಳ ಮಗುವಿನ ಭವಿಷ್ಯ ಕತ್ತಲಾಗಿದ್ದು, ಬೆಳಕು ನೀಡುವವರಾರೋ ಗೊತ್ತಿಲ್ಲ.
ಇದನ್ನೂ ಓದಿ: ಯಮುನಾ ನದಿಯಲ್ಲಿ ಸಿಕ್ಕ ಡಾಲ್ಫಿನ್ ಹಿಡಿದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್