ಯಮುನಾ ನದಿಯಲ್ಲಿ ಸಿಕ್ಕ ಡಾಲ್ಫಿನ್ ಹಿಡಿದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್
ಯುಪಿಯ ಕೌಶಂಬಿಯಲ್ಲಿನ ನಸೀರ್‌ಪುರ ಗ್ರಾಮದ ನಾಲ್ವರು ಮೀನುಗಾರರು ಜುಲೈ 22 ರಂದು ಬೆಳಗ್ಗೆ ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಡಾಲ್ಫಿನ್ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ಇದನ್ನು ತಿಂದಿದ್ದಾರೆ ಎಂದು ಪಿಪ್ರಿ ಎಸ್‌ಎಚ್‌ಒ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ಕೌಶಂಬಿ (ಉತ್ತರ ಪ್ರದೇಶ) (ಜುಲೈ 25, 2023): ಉತ್ತರ ಪ್ರದೇಶದ ಯಮುನಾ ನದಿಯಲ್ಲಿ ಅಕ್ರಮವಾಗಿ ಡಾಲ್ಫಿನ್ ಹಿಡಿದು ತಿಂದ ಆರೋಪದಲ್ಲಿ ನಾಲ್ವರು ಮೀನುಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಬಳಿಕ ಈ ಬಗ್ಗೆ ಪೊಲೀಸರ ಗಮನಕ್ಕೆ ತಂದ ನಂತರ ಒಬ್ಬರು ಮೀನುಗಾರನನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.
ಯುಪಿಯ ಕೌಶಂಬಿಯಲ್ಲಿನ ನಸೀರ್‌ಪುರ ಗ್ರಾಮದ ನಾಲ್ವರು ಮೀನುಗಾರರು ಜುಲೈ 22 ರಂದು ಬೆಳಗ್ಗೆ ಯಮುನಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಡಾಲ್ಫಿನ್ ಬಲೆಯಲ್ಲಿ ಸಿಕ್ಕಿಬಿದ್ದಿದೆ ಎಂದು ಪಿಪ್ರಿ ಎಸ್‌ಎಚ್‌ಒ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಸೋಮವಾರ ಚೈಲ್ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಈ ಸಂಬಂಧ ದೂರು ನೀಡಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಅಬ್ಬಾ! ದೊಡ್ಡ ನರಿಯನ್ನೇ ಬೇಟೆಯಾಡಿ ಎತ್ತಿಕೊಂಡು ಹಾರಿಹೋದ ಹದ್ದು: ವಿಡಿಯೋ ವೈರಲ್
ಈ ಮೀನುಗಾರರು ನದಿಯಿಂದ ಡಾಲ್ಫಿನ್ ಅನ್ನು ಹೊರತಂದರು ಮತ್ತು ಅದನ್ನು ತಮ್ಮ ಭುಜದ ಮೇಲೆ ಮನೆಗೆ ಸಾಗಿಸಿದರು. ಅಲ್ಲಿ ಅವರು ಅದನ್ನು ಬೇಯಿಸಿ ತಿಂದಿದ್ದಾರೆ ಎಂದು ಶ್ರವಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಅರಣ್ಯ ರಕ್ಷಕರು ತಮ್ಮ ದೂರಿನಲ್ಲಿ, ಕೆಲವು ದಾರಿಹೋಕ ಮೀನುಗಾರರು ಡಾಲ್ಫಿನ್ ಅನ್ನು ಸಾಗಿಸುತ್ತಿರುವಾಗ ಇದನ್ನು ಚಿತ್ರೀಕರಿಸಿದ್ದಾರೆ ಎಂದೂ ಎಸ್‌ಎಚ್‌ಒ ಹೇಳಿದ್ದಾರೆ.
ಅರಣ್ಯ ರಕ್ಷಕರ ದೂರಿನ ಆಧಾರದ ಮೇಲೆ ರಂಜಿತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈಗಾಗಲೇ ಆರೋಪಿ ರಂಜಿತ್ ಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹಾಗೆ, ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ಎಸ್‌ಎಚ್‌ಒ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ 6 ಪಥ ಸುರಂಗಕ್ಕೆ ಪ್ರಧಾನಿ ಮೋದಿ ಶಂಕು, ವನ್ಯಜೀವಿಗಳಿಗೂ ಇಲ್ಲ ಕುತ್ತು!
ಸಾಮಾನ್ಯವಾಗಿ ಜನರು ಮತ್ತು ನಿರ್ದಿಷ್ಟವಾಗಿ ಅರಣ್ಯ ಅಧಿಕಾರಿಗಳಿಗೆ ಈ ಸಮುದ್ರ ಪ್ರಾಣಿ ಡಾಲ್ಫಿನ್‌ಗಳ ಬಗ್ಗೆ ಏನೂ ತಿಳಿದಿಲ್ಲ ಎಂಬುದು ಆಶ್ಚರ್ಯಕರ ವಿಚಾರ. 3 ಸಾಮಾನ್ಯ ಡಾಲ್ಫಿನ್‌ಗಳನ್ನು ಕೊಂದಿದ್ದಕ್ಕಾಗಿ ಕ್ಯಾಲಿಕಟ್‌ನ ಬೇಪೋರ್ ಬೀಚ್‌ನ ಮೀನುಗಾರರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದಾಗ, ಡಾಲ್ಫಿನ್‌ಗಳು ಕಾಡು ಪ್ರಾಣಿಗಳು ಎಂದು ಜಿಲ್ಲಾ ಅರಣ್ಯಾಧಿಕಾರಿ ಸೇರಿದಂತೆ ಅರಣ್ಯ ಅಧಿಕಾರಿಗಳಿಗೆ ಮನವರಿಕೆ ಮಾಡುವುದು ಕಷ್ಟಕರವಾಗಿತ್ತು. ಅವುಗಳನ್ನು ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಶೆಡ್ಯೂಲ್ 1 ರಲ್ಲಿ ಸೇರಿಸಲಾಗಿದೆ ಮತ್ತು ಡಾಲ್ಫಿನ್‌ಗಳನ್ನು ಕೊಲ್ಲುವುದು ಅಥವಾ ಅವುಗಳ ಮಾಂಸವನ್ನು ತಿಂದರೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 5,000 ರೂ. ದಂಡವನ್ನೂ ವಿಧಿಸಲಾಗುತ್ತದೆ. ವರ್ಲ್ಡ್ ಕನ್ಸರ್ವೇಶನ್ ಯೂನಿಯನ್ (ಐಯುಸಿಎನ್) ಕೂಡ 1996 ರಲ್ಲಿ ಡಾಲ್ಫಿನ್‌ಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದವೆಂದು ಘೋಷಿಸಿದೆ.
ಇದನ್ನೂ ಓದಿ: ವಿಷಕಾರಿ ಹಾವಿಂದ ಮಾಲೀಕರ ಕುಟುಂಬ ಬಚಾವ್ ಮಾಡಿದ ಜೋಡಿ ಬೆಕ್ಕು..!