ಆನ್‌ಲೈನ್ ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತೀರಾ ಹಾಗಿದ್ರೆ ಕೊಂಚ ಎಚ್ಚರ ವಹಿಸಿದೋದು ಒಳ್ಳೆಯದು. ಸೈಬರ್​ ಚೋರರು ಸುಲಭವಾಗಿ ಹಣ ಮಾಡಲು ಹೊಸ ದಾರಿ ಹುಡುಕಿಕೊಂಡಿದ್ದಾರೆ.

ವರದಿ: ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜು.4) :  ನಿಮ್ಮ ಖಾತೆಯಲ್ಲಿನ ಹಣ ಎಗರಿಸಲು ಸೈಬರ್​ ಚೋರರು ಹೊಸ ದಾರಿ ಹುಡುಕಿಕೊಂಡಿದ್ದಾರೆ. ಒಂದು ಕ್ಷಣ ಯಾಮಾರಿದ್ರೆ ನಿಮ್ಮ ಹಣ ಕಳ್ಳರ ಪಾಲಾಗೋದು ಗ್ಯಾರಂಟಿ. Online ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತೀರಾ ಹಾಗಿದ್ರೆ ಕೊಂಚ ಎಚ್ಚರ ವಹಿಸಿದೋದು ಒಳ್ಳೆಯದು. ಸೈಬರ್​ ಚೋರರು ಸುಲಭವಾಗಿ ಹಣ ಮಾಡಲು ಹೊಸ ದಾರಿ ಹುಡುಕಿಕೊಂಡಿದ್ದಾರೆ.

 ಈ ಹಿಂದೆ ಗಿಫ್ಟ್ ಬಂದಿದೆ, ಲಾಟರಿ ಹೊಡೆದಿದೆ, ಕೆಲಸ ಕೊಡಿಸ್ತಿವಿ ಅನ್ನೋ ನೆಪದಲ್ಲಿ ಜನರ ಜೇಬಿಗೆ ಕತ್ತರಿ ಹಾಕ್ತಿದ್ರು. ಆದರೆ ಈಗ ಕೆಲ ದಿನಗಳಿಂದ ಸೈಬರ್ ಚೋರರು ಜನರಿಗೆ ಟೋಪಿ ಹಾಕೋಕೆ ಹೊಸ ವಿಷಯ ಹುಡುಕಿಕೊಂಡಿದ್ದಾರೆ. ಹೌದು, ಅಪರಿಚಿತ ವ್ಯಕ್ತಿಗಳು ಜನರಿಗೆ ಬೆಸ್ಕಾಂ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿ ಹಣ ಕೇಳುತಿದ್ದಾರೆ.

BENGALURU; ಕಪಾಳಕ್ಕೆ ಹೊಡೆದ ಶಿಕ್ಷಕ, ವಿದ್ಯಾರ್ಥಿ ICUಗೆ ಅಡ್ಮಿಟ್!

ಬೆಸ್ಕಾಂಗೆ ಕೂಡಲೇ ಕರೆಂಟ್​ ಬಿಲ್​ ಪಾವತಿಸ ಬೇಕು, ಇಲ್ಲವಾದ್ರೆ ಬೆಸ್ಕಾಂ ಕೊಟ್ಟಿರುವ ಲೈನ್ ಕನೆಕ್ಷನ್ ಕಟ್ ಆಗುತ್ತೆ ಅಂತ ಬೆದರಿಸೋಕೆ ಶುರು ಮಾಡ್ತಾರೆ. ಕನೆಕ್ಷನ್​ ಕಟ್​ ಮಾಡ್ತೀವಿ ಅಂತ ಭಯ ಹುಟ್ಟಿಸಿ, ತಕ್ಷಣದಲ್ಲೇ ಹಣ ಕಟ್ಟುವ ಪರಿಸ್ಥಿತಿ ನಿರ್ಮಾಣ ಮಾಡ್ತಾರೆ. ಹಣ ಕಟ್ಟುತ್ತಿದ್ದಂತೆಯೇ ಕ್ಷಣ ಮಾತ್ರದಲ್ಲಿ ಆರೋಪಿಗಳು ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಪರಾರಿಯಾಗ್ತಾರೆ.

ಮೊದಲಿಗೆ 20 ರೂಪಾಯಿ ಹಣ ಕಳುಹಿಸುವಂತೆ ಕೇಳ್ತಾರೆ. ನೆಟ್​ ಬ್ಯಾಂಕಿಂಗ್​ ಮೂಲಕ ಹಣ ಕೊಟ್ರೆ, ಮುಗೀತು. ನಿಮ್ಮ ಖಾತೆಯಿಂದ ಹಣ ಮಾಯವಾಗುತ್ತೆ. ಅದಕ್ಕೆ ನಿಮಗೆ ಓಟಿಪಿ ಸಹ ಬರೋದಿಲ್ಲ. ಸೈಬರ್​ ಚೋರರು ಕರೆ ಮಾಡಿದಾಗ ಕೆಲವರಿಗೆ ವೆಬ್​ ಸೈಟ್​ ಲಿಂಕ್​ ಕಳುಹಿಸಿದ್ರೆ, ಮತ್ತೆ ಕೆಲವರಿಗೆ Any Bill App ಡೌನ್​ಲೋಡ್​ ಮಾಡುವಂತೆ ಹೇಳ್ತಾರೆ.

ಮತ್ತೆ ಡ್ರಗ್ಸ್‌ ಮಾರಾಟ: ಬಿಡುಗಡೆಯಾಗಿದ್ದ ಪೆಡ್ಲರ್‌ ಮರಳಿ ಜೈಲಿಗೆ

ಇವುಗಳ ಮೂಲಕ ಅವರ ಮೊಬೈಲ್​ಗೆ ಆ್ಯಕ್ಸೆಕ್​ ಪಡೆದು ಹಣ ಎಗರಿಸ್ತಾರೆ. ಹೀಗೆ ಇಲ್ಲಿಯವರೆಗೆ 10 ಮಂದಿಗೂ ಹೆಚ್ಚಿನವರಿಗೆ ವಂಚನೆ ಮಾಡಿದ್ದಾರಂತೆ. ಆಗ್ನೇಯ ವಿಭಾಗದಲ್ಲೇ ಇಬ್ಬರಿಂದ 75 ಸಾವಿರ ಪಡೆದು ಆರೋಪಿಗಳು ವಂಚಿಸಿದ್ದಾರೆ. ಬೆಂಗಳೂರಿನ ಸೆನ್​ ಪೊಲೀಸ್​ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟಾರೆ ನಗರದಲ್ಲಿ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡ್ತಿದ್ದಾರೆ ಈ ಸೈಬರ್​ ಚೋರರು.

ಇನ್ನೂ ಈ ಸಂಬಂಧ ಬೆಸ್ಕಾಂ ಅಧಿಕಾರಿಗಳನ್ನು ಈ ಕುರಿತಾಗಿ ವಿಚಾರಿಸಿದಾಗ ಅವರು, ನಮ್ಮ ಸಿಬ್ಬಂದಿಗಳು ಈ ರೀತಿ ಬಿಲ್​ ಪೇಮೆಂಟ್​ಗಾಗಿ ಯಾರಿಗೂ ಕರೆಗಳನ್ನು ಮಾಡುವುದಾಗಲಿ, ಸಂದೇಶಗಳನ್ನು ಕಳುಹಿಸುವುದಾಗಿ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಈ ವಂಚನೆ ಕುರಿತಾಗಿ ಅರಿವು ಮೂಡಿಸುತ್ತಿರುವುದಾಗಿ ಹೇಳುತ್ತಿದ್ದಾರೆ.