ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ, ಮರ್ಡರ್ ಆರೋಪಿಗಳ ಸುಳಿವು ನೀಡಿದ ಪೊಲೀಸ್ ನಾಯಿ!

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಪೊಲೀಸ್ ಶ್ವಾನ ರ‍್ಯಾಂಬೊ.

Old age Man murdered and 4 arrested in Gadag Police dog solved case gow

ಗದಗ(ಅ.25): ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಪೊಲೀಸ್ ಶ್ವಾನ ರ‍್ಯಾಂಬೊ. ದೀಪಾವಳಿ‌ ದಿನ ಸೋಮವಾರ ದಿನಾಂಕ 24 ರಂದು ಈರಪ್ಪ ಸೂರಪ್ಪನವರ್ ಅನ್ನೊರ ಕೊಲೆ ನಡೆದಿತ್ತು. ಆರೋಪಿಗಳು ಈರಪ್ಪನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ರು. ಪ್ರಕರಣ ಸಂಬಂಧ ತನಿಖೆ ನಡೆದಿದ ಶಿರಹಟ್ಟಿ ಪೊಲೀಸರು, ಹೊಸಳ್ಳಿ ಗ್ರಾಮದ ಮಾರ್ಕಂಡ ಬಂಡಿವಡ್ಡರ್, ಮಲ್ಲೇಶ್ ಬಂಡಿವಡ್ಡರ್, ಹುಚ್ಚಪ್ಪ ಬಂಡಿವಡ್ಡರ್, ದೇವಕ್ಕ ಎಂಬುವವರನ್ನ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಈರಪ್ಪ ಸೂರಪ್ಪನವರ್ ಮುಂಡರಗಿ ತಾಲೂಕಿನ ಡಂಬಳ ಮೂಲದವರಾಗಿದ್ದು, ಹೊಸಳ್ಳಿಯಲ್ಲಿ ಮೋಟರ್ ವೈಡಿಂಗ್ ಕೆಲಸ ಮಾಡ್ಕೊಂಡಿದ್ದ. ಕಳೆದ 20 ವರ್ಷದಿಂದ ಹೊಸಳ್ಳಿ ಗ್ರಾಮದಲ್ಲೇ ಉದ್ಯೋಗ ಮಾಡ್ಕೊಂಡು ವಾಸವಿದ್ದ ಈರಪ್ಪನಿಗೆ ಅದೇ ಗ್ರಾಮದ ದೇವಕ್ಕ ಅನ್ನೋರ ಜೊತೆ ಸಲುಗೆ ಬೆಳದಿತ್ತು. ದೇವಕ್ಕ ಅವರಿಂದ ದೂರ ಇರುವಂತೆ ಸಹೋದರ ಮಾರ್ಕಂಡ, ಈರಪ್ಪನಿಗೆ ಹೇಳಿದ್ದ. ಇದೇ ವಿಷಯವಾಗಿ ದಿನಾಂಕ 24 ನೇ ತಾರೀಕು ಬೆಳಗ್ಗೆ ಮಾರ್ಕಂಡ, ಈರಪ್ಪ ಮಧ್ಯ ಜಗಳ ನಡೆದಿತ್ತು. ಆ ಕ್ಷಣಕ್ಕೆ ಸುಮ್ಮನಾಗಿದ್ದ ಮಾರ್ಕಂಡ, ಸಂಜೆ ವೈಡಿಂಗ್ ಶೆಡ್ ಬಳಿ ಮಲಗಿದ್ದ ಈರಪ್ಪನ ತಲೆ ಮೇಲೆ ಕಲ್ಲು ಹಾಕಿ‌ಕೊಲೆ ಮಾಡಿದ್ದ.. ಮಾರ್ಕಂಡನಿಗೆ ಮಲ್ಲೇಶ, ಹುಚ್ಚಪ್ಪ ಸಾಥ್ ನೀಡಿದ್ರು.

ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವು, ಡೆತ್ ನೋಟ್

ಕೊಲೆ ಆರೋಪಿಗಳ ಸುಳಿವು ಕೊಟ್ಟ ರ‍್ಯಾಂಬೊ:
ಕೊಲೆ ನಡೆದ ಸ್ಥಳಕ್ಕೆ ಡಿವೈಎಸ್ ಪಿ‌ ಶಿವಾನಂದ ಪವಾಡಶೆಟ್ಟಿ, ಸಿಪಿಐ ವಿಕಾಸ್ ಲಮಾಣಿ ವಿಸಿಟ್ ಮಾಡಿದ್ರು.  ಶ್ವಾನ ದಳದ ರ‍್ಯಾಂಬೊವನ್ನ ಕರೆತಂದು ಸ್ಥಳದ ಪರಿಶೀಲನೆ ನಡೆಸಲಾಯ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಈರಪ್ಪ ಸುತ್ತ ರೌಂಡ್ ಹೊಡೆದಿದ್ದ ರ‍್ಯಾಂಬೊ ರಕ್ತದ ಕಲೆ ಹಾಗೂ ಬಟ್ಟೆಯ ವಾಸನೆ ಹಿಡಿದು ಆರೋಪಿಗಳ ಮನೆ ಬಳಿ ಹೋಗಿತ್ತು. ಅಲ್ಲಿಂದ ಆರೋಪಿ ಮಾರ್ಕಂಡ ಹಾಗೂ ತಂಡದ ಹುಡುಕಾಟದಲ್ಲಿ ಪೊಲೀಸರು ನಿರತರಾದ್ರು. ಜೆಸ್ಟ್ 24 ಗಂಟೆಯಲ್ಲಿ‌ ಆರೋಪಿಗಳನ್ನ ಪತ್ತೆಹಚ್ಚಲಾಗಿದೆ. ಆರೋಪಿಗಳ ಪತ್ತೆಯಲ್ಲಿ ರ‍್ಯಾಂಬೊ ಪ್ರಮುಖ ಪಾತ್ರ ಬಹಿದಿದ್ದು, ವ್ಯಾಪಾಕ ಪ್ರಶಂಸೆಗೆ ಪಾತ್ರವಾಗಿದೆ. 

 ಯುವತಿಯ ಚುಡಾಯಿಸಿದ್ದಕ್ಕೆ ಕಪಾಳ ಮೋಕ್ಷ, ಸೇಡು ತೀರಿಸಲು ಬೈಕ್‌ಗೆ ಬೆಂಕಿ ಹಚ್ಚಿ ರಂಪಾಟ!

ಕಪ್ಪತಗುಡ್ಡದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳು ಲಾಕ್!
ಕೊಲೆ ಮಾಡಿ ನಂತ್ರ ಶಿರಹಟ್ಟಿ ಪ್ಯಾಪ್ತಿಯ ಕಪ್ಪತ ಗುಡ್ಡದ ಅರಣ್ಯದಲ್ಲಿ ಮಾರ್ಕಂಡ, ಮಲ್ಲೇಶ್, ಹುಚ್ಚಪ್ಪ, ದೇವಕ್ಕ ತಲೆ ಮರೆಸಿಕೊಂಡಿದ್ರು ರ‍್ಯಾಂಬೊ ನೀಡಿದ ಸುಳಿವಿನೊಂದಿಗೆ ತಲೆ ಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನ ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಗೆ ಸಹಾಯವಾದ ಪೊಲೀಸ್ ಶ್ವಾನ ರ‍್ಯಾಂಬೊ ಕೆಲಸಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

Latest Videos
Follow Us:
Download App:
  • android
  • ios