ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವು, ಡೆತ್ ನೋಟ್ ನಲ್ಲಿ ಮಹಿಳೆ ಬಗ್ಗೆ ಉಲ್ಲೇಖ!

ಮಾಗಡಿ ತಾಲೂಕು ಸೋಲೂರು ಹೋಬಳಿ ಕಂಚುಗಲ ಬಂಡೇಮಠದ ಪೀಠಾ​ಧ್ಯ​ಕ್ಷ​ರಾ​ದ ಶ್ರೀ ಬಸವಲಿಂಗ ಸ್ವಾಮೀಜಿ (45) ಅವರ ಮೃತದೇಹ ನೇಣು ಬಿಗಿದ ಸ್ಥಿತಿ​ಯಲ್ಲಿ ಸೋಮವಾರ ಪತ್ತೆ​ಯಾ​ಗಿತ್ತು. ಇದೀಗ ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಡೆತ್ ನೋಟ್ ವಿವರಣೆ ಇಲ್ಲಿದೆ.

Kanchugal Bandemutt Basavalinga Swamiji  death note found gow

ರಾಮನಗರ (ಅ.25): ಮಾಗಡಿ ತಾಲೂಕು ಸೋಲೂರು ಹೋಬಳಿ ಕಂಚುಗಲ ಬಂಡೇಮಠದ ಪೀಠಾ​ಧ್ಯ​ಕ್ಷ​ರಾ​ದ ಶ್ರೀ ಬಸವಲಿಂಗ ಸ್ವಾಮೀಜಿ (45) ಅವರ ಮೃತದೇಹ ನೇಣು ಬಿಗಿದ ಸ್ಥಿತಿ​ಯಲ್ಲಿ ಸೋಮವಾರ ಪತ್ತೆ​ಯಾ​ಗಿತ್ತು. ಇದೀಗ ಮೃತದೇಹದ ಬಳಿ ಮೂರು ಪುಟಗಳ ಡೆತ್‌ನೋಟ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರೆದಿದ್ದಾರೆ, ಮೂರು ಪುಟ ಪೊಲೀಸರಿಗೂ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ.  ಡೆತ್‌ನೋಟ್‌ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿತ್ತು. ಕೂಡ ಕೇಳಿಬರುತ್ತಿದೆ. ಸ್ವಾಮೀಜಿ ಬರೆದಿರುವ ಡೆತ್ ನೋಟ್ ನ ಮೊದಲ ಪುಟ ಲಭ್ಯವಾಗಿದ್ದು ಬಹಳಷ್ಟು ವಿಷಯಗಳ ಪ್ರಸ್ತಾಪ ಮಾಡಿದ್ದಾರೆ. ಮಹಿಳೆ ಪೋನ್ ಮಾಡುತ್ತಿದ್ದರು. ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬುದಾಗಿ ಉಲ್ಲೇಖವಾಗಿದೆ. ಮುಂದಿನ ಪುಟಗಳಲ್ಲಿ ಬಹಳಷ್ಟು ಸಾವಿನ ಸತ್ಯ ಗೋಚರವಾಗಲಿದೆ ಎನ್ನಲಾಗಿದೆ. ಸಿದ್ದಗಂಗಾ ಮಠದ ಶಾಖಾ ಮಠ, ರಾಮನಗರ ಜಿಲ್ಲೆಯಲ್ಲೇ ದೊಡ್ಡ ಮಠದ ಸ್ವಾಮೀಜಿ ಈ ರೀತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವುದು ಭಕ್ತರಲ್ಲಿ ಹಲವು ಅನುಮಾನ, ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಸಂಜೆ  ವೇಳೆಗೆ ಮಠದ ಹಿರಿಯ ಶ್ರೀ ಶಿವರುದ್ರ ಸ್ವಾಮೀಜಿರವರ ಗದ್ದುಗೆ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರ​ವೇ​ರಿ​ಸ​ಲಾ​ಗಿದೆ.

ಸಿಕ್ಕಿರುವ ಡೆತ್ ನೋಟ್ ವಿವರಣೆ ಇಲ್ಲಿದೆ: ಸಿದ್ದಗಂಗೆಯ ಪೂಜ್ಯರಿಗೆ ನನ್ನ ಸಾಷ್ಟಾಂಗ ಪ್ರಾಣಾಮಗಳು ಹಾಗೂ ಶ್ರೀ ಮಠದ ಎಲ್ಲಾ ಭಕ್ತರಿಗೆ ನನ್ನ ಕೊನೆಯ ಶರಣ ಶರಣಾರ್ಥಿಗಳು. ಪೂಜ್ಯರಲ್ಲಿ ಹಾಗೂ ಮಠದ ಭಕ್ತರಲ್ಲಿ ನನ್ನ ಕೊನೆಯ ನಿವೇದನೆ ಏನೆದಂರೆ, ನಾನು ಈ ಮಠದ ಉತ್ತಾರಾಧಿಕಾರಿಯಾಗಿ 25ವರ್ಷಗಳು ಹೇಗೆ ಇದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಷ್ಟು ದಿನ ನಾನು ಈ ಮಠದ ಒಬ್ಬ ನಿಷ್ಠಾವಂತ ಸೇವಕನಾಗಿ ಪ್ರಮಾಣಿಕನಾಗಿ ಶ್ರದ್ದೆಯಿಂದ ಮಠದ ಕೆಲಸ ಮಾಡಿದ್ದೆನೆ. ಸಿದ್ದಗಂಗಾ ಶ್ರೀಗಳ ಪ್ರೀತಿ ಪಾತ್ರನಾಗಿ ಸೇವೆ ಮಾಡುತ್ತ ಬಂದಿದ್ದೇನೆ.

ಯಾವತ್ತು ಈ ಮಠದ ಅಧರ್ಮವನ್ನು (ಹಣ) ನನ್ನ  ವಯಕ್ತಿಕ ಜೀವನಕ್ಕೆ ನನ್ನ ಬಂದುಗಳಿಗೆ ಅಗಲಿ, ಮಠಗಳಿಗಾಗಲಿ ಕೊಟ್ಟಿಲ್ಲ, ಖರ್ಚು ಮಾಡಿಲ್ಲ. ಎಲ್ಲವನ್ನು ಮಠದ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಅಷ್ಟೇ ಪ್ರಮಾಣಿಕವಾಗಿ ಬದುಕಿದ್ದೇನೆ. ಆದರೆ ಈಗ ತುಂಬ ಮನಸ್ಸಿಗೆ ನೋವಾಗಲು ಸಂಗತಿ ಎಂದರೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ವಿಚಾರಗಳನ್ನು ನನ್ನ ಮೇಲೆ ಹೊರಿಸಿ ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ನನ್ನ ಇಪ್ಪತ್ತೈದು ವರ್ಷದ ಪೂರ್ತಿ ಇಂತಹ ಕಷ್ಟಗಳ ಮಧ್ಯೆ ನಾನು ಬಂದಿದ್ದೇನೆ. ಆದರೆ ಎಲ್ಲಾ ನೋವುಗಳನ್ನು ಸಹಿಸಿ ಸಿದ್ದಗಂಗಾ ಪೂಜ್ಯರ ದರ್ಶನದಿಂದ ಮುಕ್ತಿಯಾಗುತ್ತಿತ್ತು. ಪೂಜ್ಯರು ಎಷ್ಟು ಸಾರಿ ಧರ್ಮ ತುಂಬಿ ಸಿದ್ದಿಸಿದ್ದಾರೆ. ಎಲ್ಲವನ್ನು ಮರೆತು ನನ್ನ ಕೆಲಸಗಳ ಕಡೆ ಗಮನ ಕೊಡುತ್ತಿದ್ದೆ.

ಶ್ರೀ ಕಂಚುಗಲ್ ಬಂಡೇಮಠದ ಬಸವಲಿಂಗ ಸ್ವಾಮೀಜಿ ನೇಣಿಗೆ ಶರಣು

ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟಗಳು ಬೇರೆಯ ರೂಪಗಳು ಪಡೆದಿರುತ್ತದೆ. ನನಗೆ ಗೊತ್ತಿಲ್ಲದ ವ್ಯಕ್ತಿಗಳು ಪೋನ್ ಮಾಡುವುದು, ಪರಿಚಯ ಮಾಡಿಕೊಳ್ಳಲು ಯತ್ನಿಸುವುದು ಇದು ನಿರಂತರವಾಗಿ ಆಗಿದೆ. ಆದರೂ ನಾನು ಈ ಎಲ್ಲಾ ಸಂಕೋಲೆಗಳಿಗೆ ಸಿಗದೆ ಇಷ್ಟು ದಿನ ಎಚ್ಚರವಾಗಿ ಇದ್ದೆ. ಆದರೆ ಶತ್ರುಗಳ ನಿರಂತರ ಪ್ರಯತ್ನದಿಂದ ನನಗೆ ಕೊನೆಗೂ ತೊಂದರೆಯಾಗಿದೆ. ಆರೇಳು ತಿಂಗಳ ಹಿಂದೆ ಗೊತ್ತಿಲ್ಲದ ಮಹಿಳೆ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿಸುವುದು ಯಾರು ಅಂತ ಕೇಳದೆ...." ಇಲ್ಲಿಗೆ ಮೊದಲ ಪುಟ ಮುಕ್ತಾಯವಾಗಿದ್ದು ಮುಂದಿನ ಪುಟದಲ್ಲಿ ಬಹಳಷ್ಟು ವಿಷಯ ಹಾಗೂ ಕೆಲ ವ್ಯಕ್ತಿಗಳ ಹೆಸರು ಉಲ್ಲೇಖವಾಗಿರುವ ಮಾತುಗಳು ಕೇಳಿ ಬಂದಿದ್ದು ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ  ಹೊರಬರಬೇಕಿದೆ.

 

 Swamiji Found Dead : ನೇಣು ಬಿಗಿದ ಸ್ಥಿತಿಯಲ್ಲಿ  ಚಿಲುಮೆ ಮಠದ ಸ್ವಾಮೀಜಿ, ಅನುಮಾನಗಳು ಅನೇಕ

3 ತಿಂಗಳ ಹಿಂದೆ ಕಡಲೆ ಮಠದ ಸ್ವಾಮೀಜಿ ಕೂಡ ಇದೇ ರೀತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ರು. ನಿನ್ನೆ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ (ಸೋಮವಾರ) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಡೆತ್‌ನೋಟ್ ಕೂಡಾ ಸಿಕ್ಕಿದೆ. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶ್ರೀಗಳು, ಶ್ರೀಮಠದಲ್ಲೇ ವೇದ, ಉಪನಿಷತ್, ವಿದ್ವತ್ ವ್ಯಾಸಂಗ ಮಾಡಿದ್ದರು.

Latest Videos
Follow Us:
Download App:
  • android
  • ios