ಯುವತಿಯ ಚುಡಾಯಿಸಿದ್ದಕ್ಕೆ ಕಪಾಳ ಮೋಕ್ಷ, ಸೇಡು ತೀರಿಸಲು ಬೈಕ್‌ಗೆ ಬೆಂಕಿ ಹಚ್ಚಿ ರಂಪಾಟ!
ಯುವತಿಯ ಚುಡಾಯಿಸಿದ ಕಾರಣಕ್ಕೆ ಡೆಲಿವರಿ ಬಾಯ್‌ಗೆ ಪೊಲೀಸ್ ಕಪಾಳಕ್ಕೆ ಭಾರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಡೆಲಿವರಿ ಬಾಯ್ ಮರುದಿನ ಸೇಡು ತೀರಿಸಿಕೊಂಡಿದ್ದಾರೆ.
ನವದೆಹಲಿ(ಅ.25): ಪೊಲೀಸ್ ಕಪಾಳಕ್ಕೆ ಭಾರಿಸಿದ ಕಾರಣವನ್ನಿಟ್ಟುಕೊಂಡು ಸೇಡು ತೀರಿಸಸಲು ಪ್ಲಾನ್ ಮಾಡಿದ ಡೆಲಿವರಿ ಬಾಯ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆನ್‌ಲೈನ್ ಫುಡ್ ಡೆಲಿವರಿ ಬಾಯ್ ದೆಹಲಿಯ ಖಾನ್ ಮಾರ್ಕೆಟ್ ಬಳಿ ಆರ್ಡರ್ ಪ್ಯಾಕ್ ಪಡೆಯಲು ಆಗಮಿಸಿದ್ದಾನೆ. ಈ ವೇಳೆ ಯುವತಿಯನ್ನು ಚುಡಾಯಿಸಿದ್ದಾನೆ. ಯುವತಿ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್, ಡೆಲಿವರಿ ಬಾಯ್ ಕಪಾಳಕ್ಕೆ ಎರಡು ಬಾರಿಸಿ ಬುದ್ದಿ ಹೇಳಿದ್ದಾನೆ. ಇನ್ನೊಂದು ಸಾರಿ ಈ ರೀತಿ ವರ್ತನೆ ತೋರಿದರೆ ಜೈಲುಗಟ್ಟುವುದಾಗಿ ಬೆದರಿಸಿದ್ದಾರೆ. ಅಲ್ಲಿಗೆ ಪ್ರಕರಣ ಸುಖಾಂತ್ಯ ಎಂದು ಪೊಲೀಸರು ಸುಮ್ಮನಾದರು. ಆದರೆ ಮರು ದಿನ ಅದೇ ಸ್ಥಳಕ್ಕೆ ಆಗಮಿಸಿದ ಡೆಲಿವರಿ ಬಾಯ್ ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾನೆ. ಈ ವೇಳೆ ಪೊಲೀಸರು ಡೆಲಿವರಿ ಬಾಯ್ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಬೈಕ್‌ಗೆ ಬೆಂಕಿ ಹಚ್ಚಿ ಎಸ್ಕೇಪ್ ಆಗಲು ಮುಂದಾದ ಡೆಲಿವರಿ ಬಾಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ಜೋಮ್ಯಾಟೋದಲ್ಲಿ ಡೆಲಿವರಿ(Food Delivery Boy) ಮಾಡುತ್ತಿರುವ 23 ವರ್ಷದ ನದೀಮ್ ದೆಹಲಿಯ ಖಾನ್ ಮಾರ್ಕೆಟ್(Delhi Khan Market) ಬಳಿ ಇರುವ ರೆಸ್ಟೋರೆಂಟ್‌ನಿಂದ ಆರ್ಡರ್ ಪ್ಯಾಕ್(Online Order) ಪಡೆಯಲು ಆಗಮಿಸಿದ್ದಾನೆ. ಬಳಿಕ ಆರ್ಡರ್ ತಡವಾದ ಕಾರಣ ಅಲ್ಲೆ ನಿಂತಿದ್ದಾನೆ. ಇದೇ ಸಂದರ್ಭದಲ್ಲಿ ರೆಸ್ಟೋರೆಂಟ್‌ಗೆ ಆಗಮಿಸಿದ ಯುವತಿಯನ್ನು(Women) ಚುಡಾಯಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಪಕ್ಕದಲ್ಲೇ ಇರುವ ಪೊಲೀಸ್ ಚೌಕಿಯಲ್ಲಿ(Police) ಮಾಹಿತಿ ನೀಡಿದ್ದಾಳೆ. ಡೆಲಿವರಿ ಬಾಯ್ ಚುಡಾಯಿಸಿರುವುದಾಗಿ ಹೇಳಿದ್ದಾಳೆ. ಯಾವುದೇ ದೂರು ದಾಖಲಾಗಿಲ್ಲ. ಯುವತಿಯಿಂದ ಮಾಹಿತಿ ಪಡೆದ ಪೊಲೀಸ್ ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ.
ಪಟಾಕಿ ಹೊಡೆಯಬೇಡಿ ಎಂದಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕ
ಈ ವೇಳೆ ಡೆಲಿವರಿ ಬಾಯ್ ಅಲ್ಲೆ ನಿಂತಿರುವುದನ್ನು ಪೊಲಲೀಸರು ಗಮನಿಸಿದ್ದಾರೆ. ಅದೇ ದಾರಿಯಲ್ಲಿ ಹೋಗುತ್ತಿರುವ ಯುವತಿಯನ್ನು ಗುರಾಯಿಸುವುದನ್ನು ಪೊಲೀಸರು ಗಮನಿಸಿದ್ದಾರೆ. ಡೆಲಿವರಿ ಬಾಯ್ ಬಳಿ ಬಂದ ಪೊಲೀಸ್ ಕಪಾಳಕ್ಕೆ ಎರಡು ಬಾರಿಸಿದ್ದಾರೆ. ಯುವತಿಯರನ್ನು ಚುಡಾಯಿಸುವುದು, ಕಮೆಂಟ್ ಪಾಸ್ ಮಾಡಿದರೆ ಒದ್ದು ಜೈಲಿಗೆ ಹಾಕುವುದಾಗಿ ಪೊಲೀಸ್ ಎಚ್ಚರಿಸಿದ್ದಾರೆ.
ಪೊಲೀಸ್ ಕಪಾಳಮೋಕ್ಷದಿಂದ ಆಕ್ರೋಶಗೊಂಡ ಡೆಲಿವರಿ ಬಾಯ್ ನದೀಮ್ ಮರುದಿನ ಅದೇ ಸ್ಥಳಕ್ಕೆ ಆಗಮಿಸಿದ್ದಾನೆ. ಬಳಿಕ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾನೆ. ಇಷ್ಟೇ ಅಲ್ಲ ಜನನಿಬಿಡಿ ಖಾನ್ ಮಾರ್ಕೆಟ್‌ನಲ್ಲಿ ತನ್ನ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಪೊಲೀಸರು ಆತನ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇತ್ತ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ ನದೀಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಆದರೆ ಬೈಕ್ ಬಹುತೇಕ ಸುಟ್ಟು ಭಸ್ಮವಾಗಿದೆ.
Bengaluru: ಡಿವೈಡರ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬೈಕ್ ಸವಾರ ಭೀಕರ ಅಂತ್ಯ
ನದೀಮ್ ವಶಕ್ಕೆ ಪಡೆಯಲು ಮುಂದಾದ ಪೊಲೀಸರ ಮೇಲೆ ಕಲ್ಲು ತೂರಾಟವನ್ನೂ ನಡೆಸಿದ್ದಾನೆ. ಇದರಿಂದ ಕೆಲ ಪೊಲೀಸರು ಗಾಯಗೊಂಡಿದ್ದಾರೆ. ಮಾರ್ಕೆಟ್‌ನಲ್ಲಿ ಅತೀ ದೊಡ್ಡ ಡ್ರಾಮಾ ಬಳಿಕ ನದೀಮ್‌ನನ್ನು ಪೊಲೀಸರು ಬಂಧಿಸಿದ್ದಾರೆ.