Asianet Suvarna News Asianet Suvarna News

ಬೆಂಗಳೂರಿಗರೇ ಎಚ್ಚರ, ಮಕ್ಕಳ ಕಿಡ್ನಾಪ್‌ ಕೇಸ್‌ಗಳಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ ಉದ್ಯಾನನಗರಿ!

ದೇಶದಲ್ಲಿ ಮಕ್ಕಳ ಕಿಡ್ನಾಪಿಂಗ್‌ ಕೇಸ್‌ಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ ಎಂದು 2022ರ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ ತನ್ನ ಅಧಿಕೃತ ವರದಿಯಲ್ಲಿ ತಿಳಿಸಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು 922 ಅಧಿಕೃತ ಕೇಸ್‌ಗಳು ದಾಖಲಾಗಿದೆ.

NCRB Report Bengaluru in Third Place metropolitan Cities Reported The Highest Number of Child Kidnappings in India san
Author
First Published Dec 5, 2023, 12:45 PM IST

ಬೆಂಗಳೂರು (ಡಿ.5): ದಿನದಿಂದ ದಿನಕ್ಕೆ ಬೆಂಗಳೂರು ಅಪರಾಧಗಳ ತಾಣವಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಎನ್‌ಸಿಆರ್‌ಬಿ ವರದಿ ಬಂದಿದೆ. ಮಕ್ಕಳ ಕಿಡ್ನಾಪಿಂಗ್‌ ಕೇಸ್‌ಗಳಲ್ಲಿ ಬೆಂಗಳೂರು ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ (ಎನ್‌ಸಿಆರ್‌ಬಿ) ವಿಭಾಗ ತನ್ನ ವರದಿಯಲ್ಲಿ ತಿಳಿಸಿದೆ. ಪ್ರತಿ ವರ್ಷ ಎನ್‌ಸಿಆರ್‌ಬಿ ಈ ಕುರಿತಾದ ವಿವರಗಳನ್ನು ನೀಡುತ್ತದೆ. 2022ರಲ್ಲಿ ದೇಶದಲ್ಲಿ ನಡೆದ ಅಪರಾಧಗಳ ಪ್ರಮಾಣದ 546 ಪುಟಗಳ ವರದಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ಮಕ್ಕಳ ಕಿಡ್ನಾಪಿಂಗ್‌ ಕೇಸ್‌ನಲ್ಲಿ ಬೆಂಗಳೂರು 922 ಕೇಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿ ನವದೆಹಲಿ 5590 ಕೇಸ್‌ಗಳೊಂದಿಗೆ ಅಗ್ರಸ್ಥಾನದ ಕುಖ್ಯಾತಿ ಪಡೆದುಕೊಂಡಿದ್ದರೆ, 1176 ಕೇಸ್‌ಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದೆ. ಬೆಂಗಳುರು 922 ಕೇಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆ ಬಳಿಕ ಪುಣೆ (676) ಹಾಗೂ ಇಂದೋರ್‌ (671) ನಗರಗಳಿವೆ.  ಜೈಪುರ (575), ನಾಗ್ಪುರ (472), ಕೋಲ್ಕತ್ತಾ (396) ಕ್ರಮವಾಗಿ 6, 7 ಹಾಗೂ 8ನೇ ಸ್ಥಾನದಲ್ಲಿದೆ.  ಉಳಿದಂತೆ ದೇಶದ ಇತರ ನಗರಗಳಾದ ಸೂರತ್‌ (279), ಅಹಮದಾಬಾದ್‌ (242), ಕಾನ್ಪುರ (158), ಹೈದರಾಬಾದ್‌ (140) ಹಾಗೂ ಲಖನೌ (101) ನಂತರದ ಸ್ಥಾನದಲ್ಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (NCRB) 2022 ರ ವಾರ್ಷಿಕ ವರದಿಯ ಪ್ರಕಾರ, ಸತತ ಮೂರು ವರ್ಷಗಳ ಕಾಲ, ರಾಜಸ್ಥಾನ ಮತ್ತು ಮಹಾರಾಷ್ಟ್ರಗಳು ರಾಜ್ಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿದೆ. ಇದು ಭಾರತದಲ್ಲಿ ಒಟ್ಟಾರೆ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶೇಕಡಾ 10.5 ರಷ್ಟು ಏರಿಕೆಯನ್ನು ತೋರಿಸುತ್ತದೆ. 

021ರಲ್ಲಿ ಭಾರತದಲ್ಲಿ ಒಟ್ಟು 29,272 ಕೊಲೆ, ಉತ್ತರ ಪ್ರದೇಶ ನಂ.1

ಮಹಾರಾಷ್ಟ್ರದಲ್ಲಿ, 2022ರಲ್ಲಿ ವರದಿಯಾದ ಭ್ರಷ್ಟಾಚಾರ ಪ್ರಕರಣಗಳ ಸಂಖ್ಯೆ 773. 2021ರಲ್ಲಿ ಈ ಪ್ರಕರಣಗಳ ಸಂಖ್ಯೆ 749 ಇದ್ದರೆ, 2020ರಲ್ಲಿ ಇದರ ಪ್ರಮಾಣ 664 ಆಗಿತ್ತು. ಅದೇ ರಿತಿ ರಾಜಸ್ಥಾನದಲ್ಲಿ 2022ರಲ್ಲಿ 511 ಕೇಸ್‌ಗಳು ದಾಖಲಾಗಿದ್ದರೆ, 2021ರಲ್ಲಿ 501 ಹಾಗೂ 2020ರಲ್ಲಿ 363 ಕೇಸ್‌ಗಳು ದಾಖಲಾಗಿದ್ದವು. ಒಟ್ಟಾರೆಯಾಗಿ, ಕಳೆದ ವರ್ಷ ಭಾರತದಲ್ಲಿ 4,139 ಭ್ರಷ್ಟಾಚಾರ ಪ್ರಕರಣಗಳು ವರದಿಯಾಗಿವೆ. ಮಾಹಿತಿಯ ಪ್ರಕಾರ, ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು (2,883 ಪ್ರಕರಣಗಳು) ಟ್ರ್ಯಾಪ್ ಪ್ರಕರಣಗಳಾಗಿದೆ. ಇದರ ನಂತರ ಕ್ರಿಮಿನಲ್ ದುಷ್ಕೃತ್ಯದ ಪ್ರಕರಣಗಳು (547 ಪ್ರಕರಣಗಳು) ಮತ್ತು ಆದಾಯ ಮೀರಿ ಆಸ್ತಿ ಗಳಿಕೆಯನ್ನು ಒಳಗೊಂಡ ಪ್ರಕರಣಗಳು (372) ನಂತರದ ಸ್ಥಾನದಲ್ಲಿದೆ.

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ!

NCRB Report Bengaluru in Third Place metropolitan Cities Reported The Highest Number of Child Kidnappings in India san

Follow Us:
Download App:
  • android
  • ios