Asianet Suvarna News Asianet Suvarna News

ವಾಟ್ಸಾಪ್‌ ನಲ್ಲಿ ಬಾಯ್ ಫ್ರೆಂಡ್ ಬ್ಲಾಕ್ ಮಾಡಿದ್ದಕ್ಕೆ ಯುವತಿ ಆತ್ಮಹತ್ಯೆ

  • ಗೆಳೆಯನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ
  • ವಾಟ್ಸಾಪ್‌ನಲ್ಲಿ ಬ್ಯಾಕ್ ಮಾಡಿದ್ದಕ್ಕೆ ವಾಗ್ವಾದ
  • ಮಹಾರಾಷ್ಟ್ರದ ಮುಂಬೈನಲ್ಲಿ ಘಟನೆ
Mumbai Woman Dies By Suicide After Boyfriend Blocks Her On WhatsApp akb
Author
Mumbai, First Published May 19, 2022, 12:26 PM IST

ಮುಂಬೈ: ವಾಟ್ಸಾಪ್‌ನಲ್ಲಿ(WhatsApp) ಗೆಳೆಯ ಬ್ಲಾಕ್ ಮಾಡಿಬಿಟ್ಟ ಎಂದು ನೊಂದು 20ರ ಹರೆಯದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಇಬ್ಬರು ಪರಸ್ಪರ ಜಗಳವಾಡಿಕೊಂಡಿದ್ದು, ಇದಾದ ಬಳಿಕ ಯುವಕ ಆಕೆಯ ಸಂಖ್ಯೆಯನ್ನು ವಾಟ್ಸಾಪ್‌ನಲ್ಲಿ ಬ್ಯಾಕ್‌ ಮಾಡಿದ್ದ. ಇದಾದ ಬಳಿಕ ಯುವತಿ ಮುಂಬೈನ ಉಪನಗರದ ದಹಿಸರ್‌ನ ರೈಲ್ವೆ ಹಳಿಗಳ ಪಕ್ಕದಲ್ಲಿರುವ ತನ್ನ ಗೆಳೆಯನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ತನ್ನ ದುಪ್ಪಟ್ಟದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಮೃತ ಯುವತಿಯನ್ನು ಪ್ರಣಾಲಿ ಲೋಕರೆ (Pranali Lokare) ಎಂದು ಗುರುತಿಸಲಾಗಿದೆ. 

ಮೃತ ಯುವತಿ ಹಾಗೂ ಆಕೆಯ 27 ವರ್ಷದ ಗೆಳೆಯ ಕಳೆದ ಆರು ತಿಂಗಳಿಂದ ಪರಸ್ಪರ ತಿಳಿದಿದ್ದರು. ಭಾನುವಾರ (ಮೇ.15) ರಾತ್ರಿ ಇಬ್ಬರೂ ಒಬ್ಬರ ಮದುವೆಗೆ ಹಾಜರಾಗಿದ್ದರು. ನಂತರ ಯುವತಿ ರಾತ್ರಿಯಿಡೀ ಆತ ಇದ್ದಲ್ಲಿಯೇ ತಾನೂ ಇರಬೇಕೆಂದು ಬಯಸಿದ್ದಳು. ಅಲ್ಲದೇ ಹುಡುಗನ ನಿವಾಸದಲ್ಲೇ ಇರಲು ಬಯಸಿದ್ದಳು. ಆದರೆ ಇದಕ್ಕೆ ಒಪ್ಪದ ಆತ ಆಕೆಯನ್ನು ಮನೆಗೆ ಹೋಗುವಂತೆ ಹೇಳಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ಹೇಳಿದ್ದಾರೆ. ಇದಾದ ಬಳಿಕ ಹೊರಟು ಹೋದ ಆಕೆ ಮತ್ತೆ ಆತನಿಗೆ ಕರೆ ಮಾಡಿ ಆತನಿದ್ದಲ್ಲಿಗೆ ತಾನು ಬರವುದಾಗಿ ಹೇಳಲು ಶುರು ಮಾಡಿದ್ದಾಳೆ. ಆದರೆ ಆ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ಹಲವಾರು ಮಾದಕ ವ್ಯಸನಿಗಳು ತಿರುಗಾಡುತ್ತಿರುತ್ತಾರೆ. ಹಾಗಾಗಿ ಈ ರೀತಿ ಆಡದಂತೆ ಹೇಳಿದ ಯುವಕ ನಂತರ ಆಕೆಯನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾನೆ. 

ಬ್ರೇಕ್ ಅಪ್ ಆದ ಬಳಿಕ ಮುಂದೇನು ? ಚಿಂತಿಸಬೇಡಿ, ಇಲ್ಲಿದೆ ಟಿಪ್ಸ್

ಇದಾದ ನಂತರವೂ ಯುವತಿ ರಾತ್ರಿಯೇ ಯುವಕನಿದ್ದಲ್ಲಿಗೆ ಹೋಗಿದ್ದು, ಅವಳನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದು ಏಕೆ ಎಂದು ಆತನನ್ನು ಪ್ರಶ್ನಿಸಲು ಶುರು ಮಾಡಿದ್ದಾಳೆ. ನಂತರ ಆಕೆ ಯುವಕ ಏನು ಮಾಡಿದನೋ ತಿಳಿದಿಲ್ಲ. ಆತನ ನಿವಾಸದಲ್ಲೇ ಆಕೆ ತನ್ನ ದುಪ್ಪಟ್ಟದಿಂದಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಗೆಳೆಯ ಬೆಳಗೆದ್ದು ನೋಡಿದಾಗ ಯುವತಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಆಘಾತಕ್ಕೊಳಗಾಗಿದ್ದಾನೆ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ಬೋರಿವಲಿ (Borivali) ಘಟಕದ ಸರ್ಕಾರಿ ರೈಲ್ವೆ ಪೊಲೀಸ್‌  ಪೊಲೀಸರು (ಜಿಆರ್‌ಪಿ) ಅಸಹಜ ಸಾವಿನ ಪ್ರಕರಣ (ಎಡಿಆರ್) (accidental death report)ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಕಂಡುಬಂದಿಲ್ಲ.

ಪ್ರೀತಿ (Love) ಮಾಡಿರೋರು ಮತ್ತು ಮಾಡ್ತಾ ಇರೋರು ಪ್ರೀತಿ ಬಗ್ಗೆ ಏನೆನೋ ಹೇಳ್ತಾರೆ. ಈ ಪ್ರೀತಿಯಲ್ಲಿ ಬಿದ್ದ ಜನರು ಏನೇನೋ ಹೇಳ್ತಾರೆ ಅಲ್ವ? ಪ್ರೀತಿಸೋರು ಪರಸ್ಪರ ಜೊತೆಯಾಗಿ ಬದುಕಲು ಮತ್ತು ಸಾಯವ ಪ್ರಾಮಿಸ್ (Promise)  ಮಾಡ್ತಾರೆ. ಸಾಯುವವರೆಗೂ ಈ ರಿಲೇಷನ್ಶಿಪ್ (Relationship) ಹೀಗೆಯೇ ಅಮರವಾಗಿರುತ್ತೆ ಎಂದು ಒಬ್ಬರಿಗೊಬ್ಬರು ಭರವಸೆ ನೀಡುತ್ತಾರೆ. ಆದರೆ ಇಷ್ಟೇಲ್ಲಾ ಆದ ಬಳಿ ಅನೇಕ ಬಾರಿ  ಸಂಗಾತಿಯೇ ಮೋಸ ಮಾಡುತ್ತಾರೆ. ಅನೇಕ ಬಾರಿ, ಜಗತ್ತಿಗೆ ಪರ್ಫೆಕ್ಟ್ ಆಗಿ ಕಾಣೋ ಜೋಡಿಗಳು ಪರಸ್ಪರ ಮೋಸ ಮಾಡುತ್ತಿರುತ್ತಾರೆ. 

ಮಧ್ಯರಾತ್ರಿ ಕರೆಸಿ ಕೊಂದಿದ್ದ ಮುಖಂಡ : ಪ್ರಿಯಕರನ ಅಗಲಿಕೆಯಿಂದ ಬಾಲಕಿ ಸೂಸೈಡ್

ಅದು ಬಾಯ್‌ಫ್ರೆಂಡ್ ಆಗಿರಲಿ-ಗರ್ಲ್‌ಫ್ರೆಂಡ್ ಆಗಿರಲಿ ಅಥವಾ ಗಂಡ ಮತ್ತು ಹೆಂಡತಿಯಾಗಿರಲಿ, ಒಂದು ಸಮಯದಲ್ಲಿ ಪ್ರೀತಿಸಿದ ಅನೇಕ ಜೋಡಿಗಳು ಸಮಯ ಮತ್ತು ಸಂದರ್ಭಗಳ ಬದಲಾದ ಹಾಗೇ  ಅವರು ಬೇರೊಬ್ಬರನ್ನು ಬಯಸಲು ಪ್ರಾರಂಭಿಸುತ್ತಾರೆ. ಅಂದ್ರೆ ಅವರು ಬೇರೊಬ್ಬರನ್ನು ಇಷ್ಟಪಡಲು ಪ್ರಾರಂಭಿಸುತ್ತಾರೆ, ಇದು ಬ್ರೇಕ್ ಅಪ್(Breakup) ಅಥವಾ ಡಿವೋರ್ಸ್ ಗೆ ಕಾರಣವಾಗುತ್ತೆ.

ಬ್ರೇಕ್ ಅಪ್ ನ ಆಘಾತದಿಂದ ನೀವು ಹೊರ ಬರೋದು ಮುಖ್ಯ. ಅದಕ್ಕಾಗಿ ನೀವು ಮೋಸ ಹೋದಾಗ ನೀವು ಮೋಸ ಮಾಡಿಲ್ಲ, ನಿಮ್ಮ ಸಂಗಾತಿಯೇ ಮೋಸ ಮಾಡಿರುವುದು ಎಂದು ಯೋಚಿಸುವ ಮೂಲಕ ಆಘಾತದಿಂದ ಹೊರಬರಬೇಕು. ಜೀವನವು ಯಾವತ್ತೂ ಒಂದು ಸಂಬಂಧದೊಂದಿಗೆ (Relationship) ಕೊನೆಗೊಳ್ಳುವುದಿಲ್ಲ. ಇದು ನಿಮ್ಮ ಜೀವನ ಅದನ್ನು ಸುಂದರವಾಗಿಸೋದು ನಿಮ್ಮ ಕೈಯಲ್ಲೇ ಇದೆ ಅನ್ನೋದನ್ನು ನೀವು ತಿಳಿದುಕೊಂಡರೆ ಉತ್ತಮ. .
 

Follow Us:
Download App:
  • android
  • ios