ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಯುವತಿಯನ್ನು ಏಳು ವರ್ಷಗಳಿಂದಲೂ ನಿರಂತರ ಹಿಂಬಾಲಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆ: ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಯುವತಿಯನ್ನು ಏಳು ವರ್ಷಗಳಿಂದಲೂ ನಿರಂತರ ಹಿಂಬಾಲಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹಾಗೂ ಯುವತಿ 2014 ರಲ್ಲಿ ಒಂದೇ ಕಾಲೇಜಿನಲ್ಲಿ ಓದಿದ್ದರು. ಆಗಿನಿಂದಲೂ ಆತ ಆಕೆಯನ್ನು ಹಿಂಬಾಲಿಸುತ್ತಿದ್ದು ಈ ಬಗ್ಗೆ ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು 27 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಆರೋಪಿ 2014 ರಲ್ಲಿ ಲೋನಾವಾಲಾದ (Lonavala) ಕಾಲೇಜಿನಲ್ಲಿ ತನ್ನೊಂದಿಗೆ ಓದಿದ್ದು ಅಲ್ಲಿಂದ ತನ್ನಂತೆಯೇ ಪದವಿ ಪಡೆದಿದ್ದ ಎಂದು ದೂರುದಾರ ಯುವತಿ (Girl) ಪೊಲೀಸರಿಗೆ ತಿಳಿಸಿದ್ದಾರೆ. ಪ್ರಾರಂಭದಿಂದಲೂ ಆಕೆಯ ಸ್ನೇಹ ಗಳಿಸಲು ಈ ಯುವಕ ಪ್ರಯತ್ನಿಸಿದ್ದ. ಆದರೆ ಈಕೆ ಆತನ ಸ್ನೇಹವನ್ನು ನಿರ್ಲಕ್ಷಿಸಿದ್ದಳು. ಆದರೆ ಕಾಲೇಜಿನ ನಂತರವೂ ಈಕೆಯ ಸಾಮೀಪ್ಯಕ್ಕಾಗಿ ಹಂಬಲಿಸುತ್ತಿದ್ದ ಆತ ಆಕೆಯನ್ನು ನಿರಂತರ ಹಿಂಬಾಲಿಸಲು ಶುರು ಮಾಡಿದ್ದ.
ಉಡುಪಿ: ಬಟ್ಟೆ ಖರೀದಿಗೆ ಅಂಗಡಿಗೆ ಬಂದ ಮಾಲಕಿಯ ತಬ್ಕೊಂಡ!
ಈ ವಾರದ ಆರಂಭದಲ್ಲಿ, ಆರೋಪಿ ಕಾಲೇಜಿನಲ್ಲಿ ತನ್ನ ಸಹಪಾಠಿಯಾಗಿದ್ದ ದೂರುದಾರ ಯುವತಿಯನ್ನು ಆಕೆ ಕೆಲಸ ಮಾಡುತ್ತಿದ್ದ ಸ್ಥಳದವರೆಗೂ ಎರಡೆರಡು ಬಾರಿ ಹಿಂಬಾಲಿಸಿ ಬಂದಿದ್ದಲ್ಲದೇ ಅವಳನ್ನು ಬಲವಂತವಾಗಿ ತಬ್ಬಿಕೊಂಡ ನಂತರ ಆಕೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಹೀಗಾಗಿ ಜೂನ್ 1 ರಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕಾಲೇಜಿನಲ್ಲೇ ಯುವತಿಯ ಸ್ನೇಹ (friendship) ಬಯಸಿದ್ದ ಆತ ಆಕೆ ನಿರ್ಲಕ್ಷಿಸಿದ್ದರೂ ಪದವಿ ಮುಗಿದ ನಂತರ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ್ದ. ಕೇವಲ ಹಿಂಬಾಲಿಸಿದ್ದಲ್ಲದೇ ಎರಡು ಬಾರಿ ಮಹಾರಾಷ್ಟ್ರದ ಇನ್ನೊಂದು ಜಿಲ್ಲೆಯಲ್ಲಿರುವ ಅವಳಿದ್ದ ಬಂಗಲೆಗೆ ಹೋಗಿದ್ದ. ಈ ಬಗ್ಗೆ ಯುವತಿ ಆತನಿಗೆ ಕಟ್ಟುನಿಟ್ಟಾದ ಎಚ್ಚರಿಕೆ (warning) ನೀಡಿದ ನಂತರ ಅವನು ಅವಳನ್ನು ಹಿಂಬಾಲಿಸುವುದನ್ನು ನಿಲ್ಲಿಸಿದ್ದ ನಂತರ ಯುವತಿ ತಮ್ಮ ನಿವಾಸದಿಂದ ಹೊರಬಂದು ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಳು.
Sexual Harassment : ಗಂಡನೊಂದಿಗೆ ಶಾಪಿಂಗ್‌ಗೆ ತೆರಳಿದ ಮಹಿಳೆ ಮೇಲೆ ಕೈ ಹಾಕಿದ ಕಿರಾತಕ!
ಆದರೆ ಆರೋಪಿಯು ಆಕೆ ಬಾಡಿಗೆಗಿದ್ದ ಸ್ಥಳ ಮತ್ತು ಕೆಲಸದ ಸ್ಥಳವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಲ್ಲದೇ ಮತ್ತೆ ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದ ಎಂದು ಯುವತಿ ಹೇಳಿದ್ದಾರೆ. ಮೇ 22 ರಂದು, ಆರೋಪಿ ಮುಂಬೈನ (Mumbai) ಖಾರ್‌ನಲ್ಲಿರುವ ಯುವತಿಯ ಕಚೇರಿಗೆ ಹೋಗಿ ಆಕೆಯೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದ. ಅವಳು ಅವನನ್ನು ಹೊರಡುವಂತೆ ಕೇಳಿಕೊಂಡರೂ, ಅವನು ಸಂಜೆಯವರೆಗೂ ಅಲ್ಲಿಯೇ ಕಾದು ಅವಳು ಮನೆಗೆ ಹಿಂದಿರುಗುತ್ತಿದ್ದಾಗ ಅವಳನ್ನು ಸಂಪರ್ಕಿಸಿದನು ಎಂದು ದೂರುದಾರರು ತಿಳಿಸಿದ್ದಾರೆ.
ಇದರಿಂದ ಗಾಬರಿಗೊಂಡ ಮಹಿಳೆ ಆಟೋರಿಕ್ಷಾ (autoriksha) ಹತ್ತಿ ತನ್ನ ಮನೆಗೆ ಹೋದಳು ಹೇಳಿದರು, ಆದರೆ ಆರೋಪಿ ಮೇ 30 ರಂದು ಮತ್ತೆ ಕಚೇರಿಯಲ್ಲಿ ಅವಳನ್ನು ಭೇಟಿಯಾಗಲು ಪ್ರಯತ್ನಿಸಿದ ಅಲ್ಲದೇ ಈ ಸಮಯದಲ್ಲಿ ಆತ ಅವಳ ಕೈ ಹಿಡಿದು ತಬ್ಬಿಕೊಂಡ. ಕೂಡಲೇ ಯುವತಿ ತನ್ನ ಸ್ನೇಹಿತನಿಗೆ ಕರೆ ಮಾಡಿದ್ದು, ಬಳಿಕ ಖಾರ್ ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಆರೋಪಿ ವಿರುದ್ಎಧ ಫ್‌ಐಆರ್ ದಾಖಲಿಸಿದ್ದಾರೆ.
ಈ ಮಧ್ಯೆ ಆರೋಪಿ ಖಾರ್ ರೈಲು ನಿಲ್ದಾಣದಲ್ಲಿ (Railway station) ಇದ್ದಾನೆ ಎಂಬ ಸುಳಿವಿನ ಮೇರೆಗೆ ಪೊಲೀಸರು ಜೂನ್ 1 ರಂದು ಅವನನ್ನು ಬಂಧಿಸಿದ್ದಾರೆ. ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 2 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಮತ್ತು ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.