Asianet Suvarna News Asianet Suvarna News

ಲೈವ್ ಸ್ಟ್ರೀಮಿಂಗ್‌ನಲ್ಲಿ ಎಲ್ಲವನ್ನೂ ತೋರಿಸ್ತಿದ್ದ ಜೋಡಿಗಳಿಗೆ ಸಂಕಟ!

* ಆನ್ ಲೈನ್ ಆಪ್ ಮೂಲಕ ಲೈವ್ ನಲ್ಲಿ ಸೆಕ್ಸ್
* ಮುಂಬೈನ ಜೋಡಿಗೆ ಇದೀಗ ಕಾನೂನು ಸಂಕಷ್ಟ
*  ದೊಡ್ಡ ಜಾಲದ ಬೆನ್ನು ಬಿದ್ದ ಮುಂಬೈ ಪೊಲೀಸರು
* ಯುವತಿಯರನ್ನು ಬಳಸಿಕೊಳ್ಳುತ್ತಿರುವ ಜಾಲ

Mumbai Couple attracts police action for live-streaming sexual acts to paid subscribers mah
Author
Bengaluru, First Published Oct 31, 2021, 7:52 PM IST
  • Facebook
  • Twitter
  • Whatsapp

ಮುಂಬೈ( ಅ. 31)  ಲೈವ್ ಸ್ಟ್ರೀಮಿಂಗ್ ನಲ್ಲಿ(Live) ಲೈಂಗಿಕ ಕ್ರಿಯೆನ್ನು ತೋರಿಸಿದ  ಜೋಡಿಗೆ ಕಾನೂನು ಸಂಕಷ್ಟ ಎದುರಾಗಿದೆ. ಮುಂಬೈನ (Mumbai)ಮೀರಾ ರೋಡ್ ಪ್ರದೇಶದ ದಂಪತಿ (Couple) ಆಪ್ ಒಂದನ್ನು ಮಾಡಿಕೊಂಡು ಹಣ ಪಾವತಿಸಿದ ಚಂದಾದಾರರ ಮುಂದೆ  ಬೆತ್ತಲೆಯಾಗಿ ಎಲ್ಲವನ್ನು ತೋರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ಲೈವ್ ಸೆಕ್ಸ್ ರಾಕೆಟ್ ನ (Sex Racket) ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದರು. ಅದಾದ ಮೇಲೆ ಒಂದೊಂದೆ ಪ್ರಕರಣಗಳು ಬೆಳಕಿಗೆ ಬರತೊಡಗಿದವು.   ಹೆಸರಾಂತ ಗಾಯಕ ಅಶ್ಲೀಲ  ಜಾಹೀರಾತೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ತಕ್ಷಣ ದೂರು ನೀಡಿದ್ದರು. ಇದನ್ನು ಬೆನ್ನು ಬಿದ್ದ ಪೊಲೀಸರಿಗೆ ದೊಡ್ಡ ಜಾಲ ಸಿಕ್ಕಿದೆ.

ಬೆತ್ತಲೆ ಸೀನ್ ಏಳು ಸಾರಿ ಶೂಟ್ ಮಾಡಿದ್ದರಂತೆ!

ಏನಿದು ಜಾಲ: ಜೋಡಿಗಳು ಆನ್ ಲೈನ್ ಆಪ್ ಗಳ ಜತೆ ಒಪ್ಪಂದಕ್ಕೆ ಸಹಿ ಮಾಡಿಕೊಳ್ಳುತ್ತಾರೆ. ಲೈವ್ ಆಗಿ ಲೈಂಗಿಕ ಕ್ರಿಯೆ  ತೋರಿಸಲಾಗುತ್ತದೆ ಎಂಬುದು ಇಲ್ಲಿನ ಪ್ರಮುಖ ಅಂಶ. ಯುವತಿಯರು ಸಹ  ಇಂಥ ಒಪ್ಪಂದಗಳಿಗೆ ಸಹಿ ಮಾಡಿ ಲೈವ್ ನಲ್ಲಿ ಹಸ್ತಮೈಥುನ ಮಾಡಿಕೊಂಡ  ಪ್ರಕರಣಗಳು ಇವೆ. ವೀಕ್ಷಕರಿಂದ ತಿಂಗಳ ಲೆಕ್ಕದಲ್ಲಿ ಚಂದಾ ವಸೂಲಿ ಮಾಡಲಾಗುತ್ತದೆ.

ಒಬ್ಬ ಸೆಲೆಬ್ರಿಟಿ ಸಹ  ಆನ್ ಲೈನ್ ಸಂಸ್ಥೆ ಒಂದರ ಜತೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದ್ದರು.   ಹಣ ಪಾವತಿಸುವ ಚಂದಾದಾರರಿಗೆ ಲೈವ್  ಆಗಿ ಲೈಂಗಿಕ ಚಟುವಟಿಕೆಯನ್ನು ಸ್ಟ್ರೀಮ್ ಮಾಡಿ ತೋರಿಸಿದ ಆರೋಪ ಬಂದಿತ್ತು.  ಮುಂಬೈ ಹೊರವಲಯದ ಅಪಾರ್ಟ್ ಮೆಂಟ್ ಗಳಲ್ಲಿ ಈ ರೀತಿಯ ಚಟುವಟಿಕೆ  ನಿರಂತರವಾಗಿ ನಡೆಯುತ್ತಿದೆ ಎಂಬ ದೂರುಗಳು ನಿರಂತರವಾಗಿ ದಾಖಲಾದ ನಂತರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ರಾಜ್ ಕುಂದ್ರಾ ಪ್ರಕರಣ;  ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ.. ಜತೆಗೆ ಇನ್ನಿತರ ಕಾರಣಗಳಿಂದ ಯುವತಿಯರನ್ನು ಬಳಸಿಕೊಂಡು ಅಶ್ಲೀಲ ಚಿತ್ರ ತಯಾರಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮೇಲೂ ಕೇಳಿಬಂದಿತ್ತು. ಪ್ರಕರಣದಲ್ಲಿ ಅವರ ಬಂಧನವೂ ಆಗಿತ್ತು.

 

Follow Us:
Download App:
  • android
  • ios