ಸೆಪ್ಟೆಂಬರ್ 3 ರಂದು ಮುಂಬೈನ ಮರೋಲ್ ಫ್ಲಾಟ್‌ನಲ್ಲಿ ಗಗನಸಖಿ ರೂಪಾಲ್ ಓಗ್ರೆ ಅವರನ್ನು ಹತ್ಯೆಗೈದ 40 ವರ್ಷದ ಆರೋಪಿ ಪೊಲೀಸ್‌ ವಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಬೈ (ಸೆ.9): ಗಗನಖಿಯ ಕತ್ತು ಸೀಳಿ ಕೊಲೆ ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವಿಕ್ರಂ ಅಥ್ವಾಲ್‌ ಗುರುವಾರ ತಡರಾತ್ರಿ ಅಂಧೇರಿ ಪೊಲೀಸ್‌ ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆ.3ರಂದು ಇಲ್ಲಿನ ಮರೋಲ್‌ ಅಪಾರ್ಚ್‌ಮೆಂಟ್‌ನಲ್ಲಿ ಗಗನಸಖಿಯ ಕೊಲೆ ಪ್ರಕರಣದಲ್ಲಿ ವಿಕ್ರಂ ಪ್ರಮುಖ ಆರೋಪಿಯಾಗಿದ್ದರು. ಹಾಗಾಗಿ ವಿಕ್ರಂರನ್ನು ವಿಚಾರಣೆಗೆಂದು ಪೊಲೀಸರು ತಮ್ಮ ವಶದಲ್ಲಿ ಇರಿಸಿದ್ದರು. ಈತನ ಬಂಧನ ಸೆ.8ರಂದು ಮುಕ್ತಾಯಗೊಳ್ಳುವುದರಿಂದ ಶುಕ್ರವಾರ ನ್ಯಾಯಾಲಯದ ಎದುರು ಪೊಲೀಸರು ಹಾಜರು ಪಡಿಸಬೇಕಿತ್ತು. ಆದರೆ ಅಷ್ಟರಲ್ಲಿ ವಿಕ್ರಂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನಿಗೆ ಮಡದಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಪೊಲೀಸರ ಪ್ರಕಾರ, ಅತ್ವಾಲ್ ಬೆಳಿಗ್ಗೆ ಲಾಕ್-ಅಪ್‌ನೊಳಗೆ ಶೌಚಾಲಯಕ್ಕೆ ಹೋಗಿದ್ದ ಮತ್ತು ಬಹಳ ಸಮಯದವರೆಗೆ ಹೊರಗೆ ಬರಲಿಲ್ಲ. ಸಿಬ್ಬಂದಿ ನಂತರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಬಾಗಿಲು ಒಡೆದು ನೋಡಿದಾಗ ಅವನು ತನ್ನ ಸ್ವಂತ ಪ್ಯಾಂಟ್ ಬಳಸಿ ಪೈಪ್‌ಗೆ ಬಿಗಿದು ನೇಣು ಹಾಕಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ಗಗನಸಖಿ ಶವ ಪತ್ತೆ ಕೇಸ್‌ಗೆ ಟ್ವಿಸ್ಟ್‌: ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಸೀಳಿ ಬರ್ಬರ ಹತ್ಯೆ!

ರೂಪಾಲ್ ಹತ್ಯೆಗೆ ಸಂಬಂಧಿಸಿದಂತೆ ಪೊವೈ ಪೊಲೀಸರು ಸೆಪ್ಟೆಂಬರ್ 4 ರಂದು ಅತ್ವಾಲ್ ಅವರನ್ನು ಬಂಧಿಸಿದ್ದರು ಮತ್ತು ರಾತ್ರಿಯಲ್ಲಿ ಅಂಧೇರಿಯ ಲಾಕ್-ಅಪ್‌ನಲ್ಲಿ ಇರಿಸಲಾಗಿತ್ತು. ಎಲ್ಲಾ ಬಂಧಿತ ಆರೋಪಿಗಳನ್ನು ಅವರ ಬಂಧನದ ಅವಧಿಯಲ್ಲಿ ರಾತ್ರಿಯಿಡೀ ಪೊಲೀಸ್ ಲಾಕಪ್‌ಗಳಲ್ಲಿ ಇರಿಸಲಾಗುತ್ತದೆ.

ಬಾತ್‌ರೂಂನಲ್ಲಿ ಮೃತದೇಹ, ಮೊಬೈಲ್ ಸ್ವಿಚ್ಆಫ್, ಗಗನಸಖಿ ಹತ್ಯೆ ಹಿಂದಿನ ಸೀಕ್ರೆಟ್ ಬಹಿರಂಗ!

ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯಲ್ಲಿ ಗಗನಸಖಿಯಾಗಿ ತರಬೇತಿ ಪಡೆಯುತ್ತಿದ್ದ ರೂಪಾಲ್‌ ಓಗ್ರೆ (24) ಎಂಬ ಯುವತಿಯನ್ನು ಆಕೆ ವಾಸವಿದ್ದ ಅಪಾರ್ಚ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಮುಂಬೈಯಲ್ಲಿ ನಡೆದಿತ್ತು. ಛತ್ತೀಸ್‌ಗಢದ ಮೂಲದ ರೂಪಾಲ್‌ ತಾವು ವಾಸವಿದ್ದ ಅಪಾರ್ಚ್‌ಮೆಂಟ್‌ನಲ್ಲಿ ಭಾನುವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು ಆರೋಪಿ ವಿಕ್ರಮ್‌ ಅಥ್ವಾಲ್‌ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಬಳಿಕ ನಗರದ ಪೋವೈಯಲ್ಲಿರುವ ತನ್ನ ಮನೆಗೆ ಹೋಗಿದ್ದ ಆರೋಪಿ ವಿಕ್ರಮ್‌ನನ್ನು ಪೊಲೀಸರು ಅಲ್ಲಿಂದಲೇ ಬಂಧಿಸಿದ್ದರು. ಇನ್ನು ಆರೋಪಿ, ರೂಪಾಲ್‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಶಂಕಿಸಲಾಗಿತ್ತು, ಈ ಬಗ್ಗೆ ತನಿಖೆ ಕೂಡ ನಡೆಸಲಾಗುತ್ತಿತ್ತು.