ಬಾತ್ರೂಂನಲ್ಲಿ ಮೃತದೇಹ, ಮೊಬೈಲ್ ಸ್ವಿಚ್ಆಫ್, ಗಗನಸಖಿ ಹತ್ಯೆ ಹಿಂದಿನ ಸೀಕ್ರೆಟ್ ಬಹಿರಂಗ!
ಮುಂಬೈನ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ 24ರ ಹರೆಯದ ಗಗನಸಖಿ ರೂಪಾಲ್ ಒಗ್ರೆ ಕುರಿತು ತನಿಖೆ ಚುರುಕುಗೊಂಡಿದೆ. ಸಿಸಿಟಿವಿ ಸೇರಿದಂತೆ ಹಲವು ದಾಖಲೆಗಳು ಹತ್ಯೆಯ ಹಿಂದಿನ ಸೀಕ್ರೆಟ್ ಬಯಲು ಮಾಡುತ್ತಿದೆ.
ಹಲವು ಕನಸು ಕಟ್ಟಿಕೊಂಡು ಮುಂಬೈ ನಗರಕ್ಕೆ ಬಂದಿದ್ದ ರೂಪಾಲ್ ಒಗ್ರೆ, ಗಗನಸಖಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ತರಬೇತಿ ಅವಧಿಯಲ್ಲಿದ್ದ ರೂಪಾಲ್ ಒಗ್ರೆ ಏಕಾಏಕಿ ಹತ್ಯೆಯಾಗಿದ್ದಳು.
ರೂಪಾಲ್ ಒಗ್ರೆ ತನ್ನ ಸಂಬಂಧಿ ಐಶ್ವರ್ಯ ಜೊತೆ ಅಂಧೇರಿಯ ಮನೆಯಲ್ಲಿ ವಾಸವಿದ್ದಳು. ಐಶ್ವರ್ಯ ರಜಾ ಪಡೆದು ಊರಿಗೆ ತೆರಳಿದಾಗ ರೂಪಾಲ್ ಹತ್ಯೆಯಾಗಿದೆ.
ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ರೂಪಾಲ್ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ಗೆ ಆಗಮಿಸಿದ ವಿಸಿಟರ್ಸ್ಗಳನ್ನು ವಿಚಾರಣೆ ನಡೆಸಿದ್ದಾರೆ. 35 ಮಂದಿ ಹತ್ಯೆ ದಿನ ವಿವಿಧ ಕಾರಣಗಳಿಗೆ ಅಪಾರ್ಟ್ಗೆ ಆಗಮಿಸಿದ್ದಾರೆ.
ಈ ಪೈಕಿ 35 ಮಂದಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ಈ 35 ಮಂದಿ ಮೇಲ್ನೊಟಕ್ಕೆ ಕೃತ್ಯದಲ್ಲಿ ಭಾಗಿಯಾಗಿಲ್ಲ ಅನ್ನೋದ ಪೊಲೀಸರಿಗೆ ಮನದಟ್ಟಾಗಿದೆ.
ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ ಪೊಲೀಸರು ಫ್ಲ್ಯಾಟ್ ಸ್ವಚ್ಚಗೊಳಿಸುವ ಸಿಬ್ಬಂದಿ ವಿಕ್ರಮ್ ಮೇಲೆ ಅನುಮಾನ ಬಂದಿದೆ. ಕಾರಣ ರೂಪಾಲ್ ಒಗ್ರೆ ಫ್ಲ್ಯಾಟ್ಗೆ ತೆರಳಿರುವ ದೃಶ್ಯ ಲಭ್ಯವಾಗಿದೆ.
1 ಗಂಟೆ ಬಳಿಕ ವಿಕ್ರಮ್ ಫ್ಲ್ಯಾಟ್ನಿಂದ ಹೊರಬಂದಿದ್ದಾನೆ. ಈತನ ಬಂಧಿಸಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ವಿಕ್ರಮ್ ಕೈ ಹಾಗೂ ದೇಹದ ಕೆಲ ಭಾಗದಲ್ಲಿ ಗಾಯದ ಗುರುತುಗಳಿವೆ.
ಮೃತದೇಹ ಬಾತ್ರೂಂನಲ್ಲಿ ಪತ್ತೆಯಾಗಿದೆ. ಆದರೆ ಕೋಣೆಯಲ್ಲಿ ರಕ್ತ ಹರಡಿದೆ. ಇನ್ನು ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಫೋನ್ ಸ್ವೀಕರಿಸಿದ ಕಾರಣ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ.
ಊರಿನಲ್ಲಿದ್ದ ರೂಪಾಲ್ ಸಂಬಂಧಿ ಐಶ್ವರ್ಯ ಸೂಚನೆಯಂತೆ ಗೆಳೆಯನೊಬ್ಬ ರೂಪಾಲ್ ಮನೆಗೆ ತೆರಳಿ ಸೆಕ್ಯೂರಿಟಿ ಕರೆದು ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.