ಶಿವಮೊಗ್ಗ: ಕೌಟುಂಬಿಕ ಕಲಹ: ತನ್ನಿಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ
ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಮದಲ್ಲಿ ನಡೆದ ಘಟನೆ
ತಾಯಿ ಜ್ಯೋತಿ (25), ಮಕ್ಕಳಾದ ಸಾನ್ವಿ (3), ಕುಶಾಲ್ (1) ಮೃತರು
ಫಾರೆಸ್ಟ್ ವಾಚರ್ ಶಿವಮೂರ್ತಿ ಎಂಬುವವರ ಪತ್ನಿ ಜ್ಯೋತಿ
ಶಿವಮೊಗ್ಗ (ಮೇ. 15): ಕೌಟುಂಬಿಕ ಕಲಹ ಹಿನ್ನೆಲೆ ತನ್ನಿಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಚೋರಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಜ್ಯೋತಿ (25), ಮಕ್ಕಳಾದ ಸಾನ್ವಿ (3), ಕುಶಾಲ್ (1) ಮೃತರು. ಮನೆಯಲ್ಲಿ ತನ್ನಿಬ್ಬರು ಮಕ್ಕಳಿಗೆ ವೇಲ್‌ನಿಂದ ನೇಣು ಬಿಗಿದು, ತಾಯಿ ಜ್ಯೋತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಸಿ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಜ್ಯೋತಿ ಹಾಗೂ ಶಿವಮೂರ್ತಿ ಮದುವೆಯಾಗಿ ಐದು ವರ್ಷ ಆಗಿತ್ತು. ಜ್ಯೋತಿ ಪತಿ ಶಿವಮೂರ್ತಿ ಫಾರೆಸ್ಟ್ ವಾಚರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಶಿಕ್ಷಣ ಸಚಿವರ ಸೊಸೆ ನೇಣಿಗೆ ಶರಣು, 1 ದಿನದ ಹಿಂದಷ್ಟೇ ತವರು ಮನೆಯಿಂದ ಮರಳಿದ್ದರು!
ಗಂಡನ ಕಾಟ ತಾಳದೆ ಮಹಿಳೆ ಆತ್ಮಹತ್ಯೆ: ಗಂಡನ ಕಿರುಕುಳ ತಾಳಲಾರದೇ ಹೆಂಡ್ತಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಆರ್.ಟಿ.ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. ಶಾಜಿಮಾ ಬಾನು ಎಂಬಾಕೆಯೇ ಮೃತಪಟ್ಟ(Death) ದುರ್ದೈವಿಯಾಗಿದ್ದಾಳೆ.
ನಗರದ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಇಮ್ರಾನ್ ಹಾಗೂ ಶಾಜಿಯಾ ಬಾನು 10 ವರ್ಷದ ಹಿಂದೆ ಮದುವೆಯಾಗಿ(Marriage) ಸುಖವಾಗಿ ಸಂಸಾರ ನಡೆಸ್ತಿದ್ರು. ಈ ದಂಪತಿಗೆ ಮುದ್ದಾದ ಮೂರು ಮಕ್ಕಳಿವೆ. ಶಾಜಿಯಾ ಬಾನು ತಂದೆ ಇರುವವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು.
ಆದ್ರೆ ಅವರ ಮರಣದ ನಂತರ ಶಾಜಿಯಾ-ಇಮ್ರಾನ್ ದಾಂಪತ್ಯದಲ್ಲಿ ಬಿರುಕುಂಟಾಗಿತ್ತು. ಮಾವನ ಅಗಲಿಕೆ ನಂತರ ಇಮ್ರಾನ್ ವರ್ತನೆಯಲ್ಲಿ ತುಂಬಾ ಬದಲಾವಣೆಯಾಗಿತ್ತು. ಮಡದಿ ಶಾಜಿಯಾಗೆ ಕಾಟ ಕೊಡೋಕೆ ಆರಂಭಿಸಿದ್ದ ಅಂತ ಆರೋಪ ಮಾಡ್ತಾರೆ ಶಾಜಿಯಾ ಸಂಬಂಧಿಕರು.
ಗಂಡ ಇಮ್ರಾನ್ ನೀನು ನನಗೆ ತಕ್ಕ ಹೆಂಡತಿಯಲ್ಲ. ಸುಂದರವಾಗಿಲ್ಲ. ಕಪ್ಪಗಿದ್ದೀಯಾ ಅಂತೆಲ್ಲ ಹೀಯಾಳಿಸೋಕೆ ಆರಂಭಿಸಿದ್ದನಂತೆ. ಅಲ್ಲದೆ ಅದಕ್ಕೆ ಸರಿಯಾಗಿ ಶಾಜಿಯಾ ಅತ್ತೆ ಸಹ ಇದೇ ವಿಷಯವಾಗಿ ಆಗಾಗ ಜಗಳ ಮಾಡುತ್ತಾ, ಸೊಸೆಯನ್ನು ತವರಿಗಟ್ಟುತ್ತಿದ್ದಳಂತೆ.
ಇದನ್ನೂ ಓದಿ: Mysuru: ಜಂಗಲ್ ಲಾಡ್ಜಸ್ ವಿರುದ್ಧ ಪತ್ರ ಬರೆದಿಟ್ಟು ಉದ್ಯಮಿ ಆತ್ಮಹತ್ಯೆ
ಅಲ್ಲದೆ ಮಕ್ಕಳನ್ನೂ(Children) ಸಹ ಶಾಜಿಯಾ ಜೊತೆ ಸೇರಲು ಬಿಡುತ್ತಿರಲಿಲ್ಲವಂತೆ. ಇದರಿಂದ ಬೇಸತ್ತು ಹೋಗಿದ್ದ ಶಾಜಿಯಾ ಕಳೆದ ಏ. 20ರಂದು ಮನೆಯಲ್ಲಿದ್ದ ಸ್ಯಾನಿಟೈಜರ್(Sanitizer) ಸುರಿದುಕೊಂಡು ಬೆಂಕಿ(Fire) ಹಚ್ಚಿಕೊಂಡಿದ್ದಳಂತೆ. ಚಿಕಿತ್ಸೆ ಫಲಿಸದೇ ಶಾಜಿಮಾ ಬಾನು ಸಾವನ್ನಪ್ಪಿದ್ದಾಳೆ.