ಶಿಕ್ಷಣ ಸಚಿವರ ಸೊಸೆ ನೇಣಿಗೆ ಶರಣು, 1 ದಿನದ ಹಿಂದಷ್ಟೇ ತವರು ಮನೆಯಿಂದ ಮರಳಿದ್ದರು!
* ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಸೊಸೆ ಆತ್ಮಹತ್ಯೆ
* ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ
* ಆತ್ಮಹತ್ಯೆ ವಿಚಾರ ಹತ್ತಿಕ್ಕುವ ಯತ್ನ
ಭೋಪಾಲ್(ಮೇ.11): ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಸವಿತಾ ಪರ್ಮಾರ್ (22) ಮಂಗಳವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಕುಟುಂಬಸ್ಥರು ಕೊಠಡಿಗೆ ಹೋಗಿ ನೋಡಿದಾಗ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೈ ಪ್ರೊಫೈಲ್ ಪ್ರಕರಣವಾಗಿರುವುದರಿಂದ ಪೊಲೀಸರು ಈ ವಿಷಯದಲ್ಲಿ ಏನನ್ನೂ ಹೇಳಲು ನಿರಾಕರಿಸಿದ್ದಾರೆ.
1 ದಿನದ ಹಿಂದೆ ಅಪ್ಪನ ಮನೆಯಿಂದ ಮರಳಿದ್ದ ಸಚಿವರ ಸೊಸೆ
ಸಚಿವ ಪರ್ಮಾರ್ ಅವರ ಸೊಸೆ ಸವಿತಾ ಪರ್ಮಾರ್ ಶಾಜಾಪುರ ಜಿಲ್ಲೆಯ ಪೋಚನೇರ್ ಗ್ರಾಮದ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಒಂದು ದಿನ ಮುಂಚಿತವಾಗಿ ತನ್ನ ತಂದೆಯ ಮನೆಯಿಂದ ಅಂದರೆ ತವರು ಮನೆಯಿಂದ ಹಿಂದಿರುಗಿದ್ದರು ಎಂಬುವುದು ಉಲ್ಲೇಖನೀಯ ವಿಚಾರ. ಅವರ ತವರು ಮನೆ ಅಕೋಡಿಯಾದ ಹಡ್ಲೇ ಗ್ರಾಮದಲ್ಲಿತ್ತು. ಈ ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸ್ ಇಲಾಖೆ ಹಾಗೂ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದೇ ವೇಳೆ ಘಟನೆಯನ್ನು ಹತ್ತಿಕ್ಕುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಕೆಲವರು ಹೇಳುತ್ತಾರೆ.
ಗಂಡ-ಹೆಂಡತಿ ನಡುವೆ ಮನಸ್ತಾಪ ನಡೆಯುತ್ತಿತ್ತು
ಮೃತ ಸವಿತಾ ಮೂರು ವರ್ಷಗಳ ಹಿಂದೆ ಶಾಲಾ ಶಿಕ್ಷಣ ಸಚಿವ ಪರ್ಮಾರ್ ಅವರ ಪುತ್ರ ದೇವರಾಜ್ ಅವರೊಂದಿಗೆ ವಿವಾಹವಾಗಿದ್ದರು. ಆದರೆ ಕಳೆದ ಒಂದು ವರ್ಷದಿಂದ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಇದರಿಂದಾಗಿ ಸವಿತಾ ಕೂಡ ತನ್ನ ತಾಯಿಯ ಮನೆಗೆ ಹೋಗಿದ್ದಳು. ಆದರೆ ಒಂದು ದಿನ ಮೊದಲು ಅವಳು ತನ್ನ ಅತ್ತೆಯ ಮನೆಗೆ ಮರಳಿದ್ದಳು. ಆದರೆ ಮಂಗಳವಾರ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸವಿತಾ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೌಟುಂಬಿಕ ಸಮಸ್ಯೆಯಿಂದ ಈ ಹೆಜ್ಜೆ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆ ವಿಚಾರ ಹತ್ತಿಕ್ಕುವ ಯತ್ನ
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಅವಂತಿಪುರ ಬರೋಡಿಯಾ ಪೊಲೀಸ್ ಠಾಣೆಯ ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದೆ ಎಂದು ಸ್ಥಳೀಯರು ಹೇಳುತ್ತಾರೆ. ಬಹಳ ಹೊತ್ತಿನವರೆಗೆ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದರು. ಅಷ್ಟೇ ಅಲ್ಲ, ವಿಷಯವನ್ನು ಹತ್ತಿಕ್ಕುವ ಪ್ರಯತ್ನವೂ ನಡೆದಿದೆ. ಆದರೆ ಹೇಗೋ ಈ ಸುದ್ದಿ ಹರಡಿ ಸ್ಥಳದಲ್ಲೇ ಜನ ಜಮಾಯಿಸಿದರು. ನಂತರ ಶಾಜಾಪುರ ಎಸ್ಪಿ ಪಂಕಜ್ ಶ್ರೀವಾಸ್ತವ ರಾತ್ರಿ ಘಟನೆಯನ್ನು ಖಚಿತಪಡಿಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವೇ ಏನಾದರೂ ಹೇಳಬಹುದು. ಆದರೆ ಈ ಇಡೀ ಪ್ರಕರಣದಲ್ಲಿ ಏನನ್ನೂ ಹೇಳಲು ಪೊಲೀಸರು ಸಿದ್ಧರಿಲ್ಲ.