Asianet Suvarna News Asianet Suvarna News

ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ; ತಡೆಯಲು ಹೋದ ಪತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾದ ಕಾಮುಕ!

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಮುಕನೋರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸ ಕಡಜಟ್ಟಿ ಗ್ರಾಮದಲ್ಲಿ ನಡೆದಿದೆ. ನವೀನ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ

Miscreants tried to rape a married woman while she was working on the farm at nanjanagudu at mysuru rav
Author
First Published Dec 18, 2023, 10:29 AM IST

ಮೈಸೂರು (ಡಿ.18) : ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಮುಕನೋರ್ವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೊಸ ಕಡಜಟ್ಟಿ ಗ್ರಾಮದಲ್ಲಿ ನಡೆದಿದೆ.

ನವೀನ್ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ. ಈ ವೇಳೆ ಮಹಿಳೆಯ ಚೀರಾಟ ಕೇಳಿ ಸ್ಥಳಕ್ಕಾಗಮಿಸಿದ ಪತಿ ಮಹಾದೇವಪ್ಪ. ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ತಡೆದಿದ್ದಕ್ಕೆ ಪತಿಯಮೇಲೂ ಹಲ್ಲೆ ನಡೆಸಿ ಪರಾರಿಯದ ಆರೋಪಿ.

ಹೊಸ ಕಡಜಟ್ಟಿ ಗ್ರಾಮದಲ್ಲಿರುವ ಮೈಸೂರು ಮೂಲದ ವ್ಯಕ್ತಿಯ ತೋಟ ಒಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ದಂಪತಿ. ಕೆಲಸ ಮಾಡುವ ತೋಟದ ಒಳಭಾಗದಲ್ಲಿ ವಿದ್ಯುತ್ ಫ್ಯೂಸ್ ಹಾಕಲು ತೆರಳಿದ್ದ ಪತಿ. ಪತಿ ಮಹದೇವಸ್ವಾಮಿ ಇಲ್ಲದೆ ಇರುವ ಸಮಯವನ್ನೇ ನೋಡಿ ತೋಟದ ಮನೆಯ ಬಳಿ ಒಬ್ಬಂಟಿ ಮಹಿಳೆ ಇರುವುದನ್ನೇ ಗಮನಿಸಿದ ಕಾಮುಕ ನವೀನ. ತಂತಿ ಬೇಲಿಯನ್ನು ಜಿಗಿದು  ಬಾಯಿಗೆ ಬಟ್ಟೆಯನ್ನು ತುರುಕಿ ಬಲತ್ಕಾರಕ್ಕೆ ಯತ್ನಿಸಿರುವ ದುರುಳ. ಈ ವೇಳೆ ಪತ್ನಿಯ ಚೀರಾಟ ಕೇಳಿ ಓಡಿ ಬಂದಿರುವ ಪತಿ ಪತ್ನಿಯನ್ನು ರಕ್ಷಿಸಲು ಮುಂದಾಗಿದ್ದಾನೆ.

ಬಾಲಕಿ ಮೇಲೆ ಅತ್ಯಾಚಾರ, ಉತ್ತರ ಪ್ರದೇಶ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ!

ಈ ವೇಳೆ ಪತಿಯ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಿರುವ ಕಾಮುಕ ನವೀನ್. ಮಚ್ಚಿನೇಟಿನಿಂದ ಗಾಯಗೊಂಡಿರುವ ಮಹದೇವಪ್ಪ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿಕಟ್ಟಿ, ದಫೆದರ್ ದೊಡ್ಡಯ್ಯ ಸ್ಥಳ ಪರಿಶೀಲನೆ ನಡೆಸಿದರು. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನಿಗೆ ಶೋಧಕಾರ್ಯ ಮುಂದುವರಿಸಿದ್ದಾರೆ.

ಜ್ಯೂವೆಲ್ಲರ್ಸ್ ಮಾಲೀಕನ ಮನೆ ಮೇಲೆ ಐಟಿ ದಾಳಿ; ಬಿಹಾರ ಮೂಲದ ಅಪ್ರಾಪ್ತ ಬಾಲಕಿಯರು ಪತ್ತೆ!

Follow Us:
Download App:
  • android
  • ios