ಬಾಲಕಿ ಮೇಲೆ ಅತ್ಯಾಚಾರ, ಉತ್ತರ ಪ್ರದೇಶ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ!
ಪ್ರಾಸಿಕ್ಯೂಷನ್ ಪ್ರಕಾರ, 2014r ನವೆಂಬರ್ 4 ರ ಸಂಜೆ ರಾಮ್‌ದುಲಾರ್ ಗೊಂಡ್, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನ ಮಾಡಿದ್ದ.
ನವದೆಹಲಿ (ಡಿ.15): ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 25 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಬಿಜೆಪಿ ಶಾಸಕ ರಾಮ್‌ದುಲಾರ್ ಗೊಂಡ್ ಉತ್ತರ ಪ್ರದೇಶದ ವಿಧಾನಸಭೆ ಸದಸ್ಯತ್ವವನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದಾರೆ. ಗೊಂಡ್ ಸೋನ್‌ಭದ್ರಾ ಜಿಲ್ಲೆಯ ದುದ್ದಿ ಕ್ಷೇತ್ರದ ಶಾಸಕರಾಗಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಮೊದಲ ಬಾರಿಗೆ ಶಾಸಕ ಗೊಂಡ್ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಎರಡು ದಿನಗಳ ನಂತರ ಸೋನಭದ್ರದ ಸ್ಥಳೀಯ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ. “ಶುಕ್ರವಾರ, ಬಿಗಿ ಪೊಲೀಸ್ ಭದ್ರತೆಯ ನಡುವೆ ಶಾಸಕ ರಾಮದುಲರ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಲಯ ಆತನಿಗೆ 25 ವರ್ಷಗಳ ಶಿಕ್ಷೆ ಮತ್ತು 10.5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಸಂಪೂರ್ಣ ದಂಡದ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಸೋನಭದ್ರ) ಸತ್ಯ ಪ್ರಕಾಶ್ ತ್ರಿಪಾಠಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಸಾಕ್ಷ್ಯಗಳ ಕಣ್ಮರೆ ಮತ್ತು ತಪ್ಪು ಮಾಹಿತಿ ನೀಡುವಿಕೆ) ಮತ್ತು ಪೋಕ್ಸೋ ಕಾಯ್ದೆಯ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಲಯವು ಶಾಸಕನನ್ನು ತಪ್ಪಿತಸ್ಥನೆಂದು ಪರಿಗಣಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ, 2014ರ ನವೆಂಬರ್ 4ರ ಸಂಜೆ ಬಾಲಕಿಯು ಮೂತ್ರ ವಿಸರ್ಜನೆಗಾಗಿ ಸಮೀಪದ ಹೊಲಕ್ಕೆ ಹೋಗಿದ್ದಾಗ ಆಕೆಗೆ ರಾಮ್‌ದುಲಾರ್ ಗೊಂಡ್ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದ. ಮನೆಗೆ ಹಿಂದಿರುಗಿದ ನಂತರ, ಹುಡುಗಿ ತನ್ನ ಅಣ್ಣನಿಗೆ ಈ ವಿಚಾರವನ್ನು ತಿಳಿಸಿದ್ದಳು. "ಕಳೆದ ಒಂದು ವರ್ಷದಲ್ಲಿ ರಾಮ್‌ದುಲಾರ್ ಗೊಂಡ್ ತನಗೆ ಬೆದರಿಕೆ ಹಾಕುವ ಮೂಲಕ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ತನ್ನ ಸಹೋದರನಿಗೆ ತಿಳಿಸಿದ್ದಾಳೆ" ಎಂದು ಸಂತ್ರಸ್ತೆಯ ವಕೀಲ ವಿಕಾಸ್ ಶಕ್ಯಾ ಹೇಳಿದ್ದಾರೆ.
ಬೆಂಗಳೂರು: ಖಾಸಗಿ ಕಂಪನಿ ಟೆಕ್ಕಿ ಮೇಲೆ ನಡೆದಿದ್ಯಾ ಗ್ಯಾಂಗ್ ರೇಪ್?
ವಿಚಾರಣೆಯ ಸಮಯದಲ್ಲಿ, ಸಂತ್ರಸ್ತೆ ನಾನು 1998ರಲ್ಲಿ ಜನಿಸಿದ ಹುಡುಗಿ ಎಂದು ಹೇಳಿದ್ದಾರೆ. ಆದರೆ, ಶಾಸಕ ಮಾತ್ರ ಆಕೆ 1994ರಲ್ಲಿ ಜನಿಸಿದ ಹುಡುಗಿ ಎನ್ನುವುದಕ್ಕೆ ಆಕೆಯ ಶಾಲೆಯ ದಾಖಲೆಯನ್ನು ಕೋರ್ಟ್‌ಗೆ ನೀಡಿದ್ದ ಎಂದು ತ್ರಿಪಾಠಿ ತಿಳಿಸಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರಾಮ್‌ದುಲಾರ್ ಪರ ವಕೀಲ ರಾಮ್ ಬ್ರಿಕ್ಷ್ ತಿವಾರಿ ಹೇಳಿದ್ದಾರೆ.
ಆ್ಯನಿಮಲ್‌ನಲ್ಲಿ ದಾಂಪತ್ಯ ಅತ್ಯಾಚಾರ, ಸಮಾಜದಲ್ಲಿ ಇರೋದು ಹೌದು: ಬಾಬ್ಬಿ ಡಿಯೋಲ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮ್‌ದುಲಾರ್ ಗೊಂಡ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿಜಯ್ ಸಿಂಗ್ ಅವರನ್ನು ಸೋಲಿಸಿದ್ದರು.