Asianet Suvarna News Asianet Suvarna News

ಜ್ಯೂವೆಲ್ಲರ್ಸ್ ಮಾಲೀಕನ ಮನೆ ಮೇಲೆ ಐಟಿ ದಾಳಿ; ಬಿಹಾರ ಮೂಲದ ಅಪ್ರಾಪ್ತ ಬಾಲಕಿಯರು ಪತ್ತೆ!

ತೆರಿಗೆ ವಂಚನೆ ಪ್ರಕರಣ ಸಂಬಂಧ ಜ್ಯುವೆಲ್ಲರ್ಸ್ ಮಾಲೀಕನ ಮನೆ ಮೇಲೆ ನಡೆದ ಐಟಿ ದಾಳಿ ವೇಳೆ ಇಬ್ಬರು ಆಪ್ರಾಪ್ತ ಬಾಲಕಿಯರು ಪತ್ತೆಯಾಗಿದ್ದಾರೆ. ಬಿಹಾರ ಮೂಲದ ಮಕ್ಕಳನ್ನು ಕಾನೂನುಬಾಹಿರವಾಗಿ ಮನೆಯಲ್ಲಿಟ್ಟುಕೊಂಡಿರುವ ಮಾಲೀಕ. ಮಕ್ಕಳು ಪತ್ತೆಯಾಗ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಅಧಿಕಾರಿಗಳು. ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ.

Underage girls were found in the house during an IT raid on the jewelers owner's house rav
Author
First Published Dec 18, 2023, 9:10 AM IST

ಬೆಂಗಳೂರು (ಡಿ.18): ತೆರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಭೂಷಣ್ ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆಮೇಲೆ ದಾಳಿ ನಡೆಸಿದ ವೇಳೆ ಮನೆಯಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಪತ್ತೆಯಾಗಿದ್ದಾರೆ. ಕಳೆದೆರಡು ದಿನಗಳಿಂದ  ಜ್ಯುವೆಲ್ಲರಿ ಶಾಪ್ ಲೆಕ್ಕ ಪತ್ರ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು. ನಿವಾಸದ ಮೇಲೂ ದಾಳಿ ನಡೆಸಿ ಮನೆಯಲ್ಲಿ ಶೋಧ ನಡೆಸುವಾಗ ಕಾನೂನುಬಾಹಿರವಾಗಿ ಇಬ್ಬರು ಅಪ್ರಾಪ್ತ ಬಾಲಕಿಯರನ್ನಿರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಭೂಷಣ್ ಮೇಲೆ ಮತ್ತೊಂದು ಎಫ್‌ಐಆರ್ ದಾಖಲು ಮಾಡಿರುವ ಅಧಿಕಾರಿಗಳು.

10 ಹಾಗೂ 8 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಮನೆಯಲ್ಲಿಟ್ಟುಕೊಂಡಿರುವ ಮಾಲೀಕ. ಯಡಿಯೂರಿನ ಸಾಕಮ್ಮ ಗಾರ್ಡನ್ ನಲ್ಲಿರುವ ಮನೆ. ಮನೆಯಲ್ಲಿ ಅಪ್ರಾಪ್ತ ಮಕ್ಕಳಿರುವುದು ಪತ್ತೆಯಾಗುತ್ತಿದ್ದಂತೆ ಹಿರಿಯ ಪೊಲೀಸರಿಗೆ ಮಾಹಿತಿ ನೀಡಿದ ಅಧಿಕಾರಿಗಳು. ಮಾಲಿಕರಾದ ಅಶೋಕ್ ಕುಮಾರ್, ಶ್ರೇಯಸ್ ಮತ್ತು ಗೌರವ್ ಎಂಬುವವರ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಜೆಜೆ ಆ್ಯಕ್ಟ್ ಸೆಕ್ಷನ್ 79 & ಚೈಲ್ಡ್ ಲೇಬರ್ ಆ್ಯಕ್ಟ್ ಸೆಕ್ಷನ್ 3 ಮತ್ತು 14 ಅಡಿ ಎಫ್ಐಆರ್ ದಾಖಲಿಸಿದ ಪೊಲೀಸರು. ಸದ್ಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿದ ಐಟಿ ಅಧಿಕಾರಿಗಳು. ಬಳಿಕ ಪ್ರಾಪ್ತ ಮಕ್ಕಳು ಸಿದ್ದಾಪುರದ ಬಾಲ ರಕ್ಷಣಾ ಕೇಂದ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ ಅಧಿಕಾರಿಗಳು.

ರೈಲ್ವೆ ಶೌಚಾಲಯದಲ್ಲಿ ಪಿಸ್ತೂಲ್ ಬಿಟ್ಟು ಹೋದ ಪೊಲೀಸಪ್ಪ! ದುಷ್ಕರ್ಮಿಗಳ ಕೈಗೆ ಸಿಕ್ಕಿದ್ರೆ ಏನು ಗತಿ?

ಬಿಹಾರದ ಗಾಯಾ ಜಿಲ್ಲೆ ಮೂಲದ ಇಬ್ಬರು ಮಕ್ಕಳನ್ನು ಕಾನೂನುಬಾಹಿರವಾಗಿ ಕರೆತಂದು ಕಾನೂನು ಮನೆಯಲ್ಲಿಟ್ಟುಕೊಳ್ಳಲಾಗಿದೆ. ಮನೆಯ ಮಾಲಕೀ ಪಿಂಕಿ ಜೈನ್ ಆನಾರೋಗ್ಯದಲ್ಲಿದ್ದು ಅವರ ಆರೈಕೆಗೆ ಕರೆತಂದಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿರುವ ಆರೋಪಿಗಳು. ಪ್ರಕರಣ ಸಂಬಂಧ ಜಯನಗರ ಪೊಲೀಸರಿಂದ ಮುಂದುವರಿದ ವಿಚಾರಣೆ. 

Follow Us:
Download App:
  • android
  • ios