ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕ್ತಿಯಾ ಅಂತಾ ಯುವಕನಿಗೆ ಥಳಿತ; ಎಫ್‌ಐಆರ್‌ಗೆ ಪೊಲೀಸರು ಹಿಂದೇಟು?

ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಮುಸ್ಲಿಂ ಯುವಕರಿಂದ ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ನಗರತ್ ಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ.

Miscreants attacked on young man for a trivial reason at halasur gate bengaluru rav

ಬೆಂಗಳೂರು (ಮಾ.17): ಭಕ್ತಿಗೀತೆ ಹಾಡುಗಳನ್ನು ಹಾಕಿದ್ದಕ್ಕೆ ಐದಾರು ಮುಸ್ಲಿಂ ಯುವಕರಿಂದ ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ.

ಮುಖೇಶ್, ಹಲ್ಲೆಗೊಳಗಾಗಿರುವ ಯುವಕ.'ವರ್ಧಮಾನ್ ಟೆಲಿಕಾಮ್' ಎಂಬ ಮೊಬೈಲ್ ಶಾಪ್ ನಡೆಸುತ್ತಿದ್ದ ಮುಖೇಶ್. ಸಂಜೆ ಸಮಯ ಮೊಬೈಲ್ ಶಾಪ್‌ನಲ್ಲಿ ಭಕ್ತಿಗೀತೆ ಹಾಡುಗಳನ್ನು ಹಾಕಿದ್ದ ಯುವಕ. ಈ ವೇಳೆ ಅಂಗಡಿಗೆ ಬಂದಿದ್ದ ನಾಲ್ಕೈದು ಮುಸ್ಲಿಂ ಯುವಕರು. ಸಂಜೆ ನಮಾಜ್ ಟೈಂನಲ್ಲಿ ಹನುಮಾನ್ ಚಾಲೀಸ್ ಹಾಕ್ತಿಯ ಅಂತಾ ಕಿರಿಕ್ ಮಾಡಿರುವ ಪುಂಡರು. ಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿಯಿಂದ ಹೊರ ಎಳೆದು ಯುವಕನ ಮೇಲೆ ಮನಸ್ಸೊ ಇಲ್ಲೆ ಹಲ್ಲೆ ನಡೆಸಿರುವ ಪುಂಡರು. ನೆಲಕ್ಕೆ ಕೆಡವಿ ಕಾಲಿನಿಂದ ಒದ್ದು ಹಲ್ಲೆ ಮಾಡಿ ಹೋಗಿದ್ದಾರೆ.

Breaking news: ಲೋಕಸಭಾ ಚುನಾವಣೆ ಹೊತ್ತಲ್ಲಿ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷ!

ಹಲ್ಲೆಗೊಳಗಾದ ಯುವಕ ಹೇಳೋದೇನು?

ಅಂಗಡಿಯಲ್ಲಿ ಎಂದಿನಂತೆ ಸಂಜೆ ವೇಳೆ ಪೂಜೆ ಮಾಡುವ ಸಮಯದಲ್ಲಿ ಭಜನೆ ಹಾಡು ಹಾಕ್ತಾ ಇದ್ದೆ. ಈ ವೇಳೆ ಅಂಗಡಿಗೆ ಬಂದು, 'ನಮ್ಮ ಆಜಾನ್ ಟೈಂನಲ್ಲಿ ಯಾಕೆ ಹಾಡು ಹಾಕ್ತಾ ಇದ್ದೀಯಾ' ಎಂದು ಪ್ರಶ್ನೆ ಮಾಡಿದ್ರು. ನಂತರ ಹಲ್ಲೆಗೆ ಮುಂದಾದ್ರು, ಆರಂಭದಲ್ಲಿ ತಡೆಯುವ ಪ್ರಯತ್ನ ಮಾಡಿದೆ. ಮೊದಲು ಸ್ಪೀಕರ್ ತೆಗೆದುಕೊಂಡು ನನ್ನ ತಲೆಗೆ  ಹೊಡೆದ್ರು. ಕೈಯಲ್ಲಿ ವೆಪನ್ ಕೂಡ ಇದ್ದ ಹಾಗೆ ಇತ್ತು. ಹಾಗಾಗಿ ಇಷ್ಟು ಗಾಯ ಆಗಿದೆ. ಎರಡು ತಿಂಗಳ ಹಿಂದೆ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ರೋಲ್ ಕಾಲ್ ಮಾಡೋದು ಹಣ ಕೀಳಲು ಗದರಿಸುವ ಪ್ರಯತ್ನ ಮಾಡ್ತಿದ್ರು. ಒಟ್ಟು ಆರು ಜನ‌ ಬಂದಿದ್ರು  ಸದ್ಯ ಕಂಪ್ಲೆಂಟ್ ಕೊಟ್ಟಿದ್ದೀನಿ ಎಫ್ ಐ ಆರ್ ಮಾಡ್ಬೇಕು.

ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು?

ಹಲ್ಲೆಗೊಳಗಾದ ಯುವಕ ಮುಖೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ಮಾಡಲು ಹಿಂದೇಟು ಹಾಕುತ್ತಿದ್ದಾರೆಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಠಾಣೆ ಮುಂದೆ ಜಮಾಯಿಸಿದ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಎಫ್ಐಆರ್ ಮಾಡುವ ವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದ ಬಳಿಕ ಎಫ್‌ಐಅರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿರೋ ಪೊಲೀಸರು.

ಪುಂಡರನ್ನು ಬಂಧಿಸುವಂತೆ ವರ್ತಕರು ಆಗ್ರಹ:

ಕಳೆದ 15 ದಿನಗಳಿಂದ ಅಂಗಡಿ ಮುಂದೆ ಬಂದು ಕಿರುಕುಳ ಕೊಡುತ್ತಿದ್ದ ಪುಂಡರು ಇಂದು ಏಕಾಏಕಿ ಕಿರಿಕ್ ತೆಗೆದು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರ ಬಂಧಿಸುವಂತೆ‌ ಒತ್ತಾಯಿಸಿ ಹಲಸೂರು ಗೇಟ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ವರ್ತಕರು. ಆರೋಪಿಗಳನ್ನು ಬಂಧಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ. ನಾಳೆ ಸಂಜೆಯೊಳಗೆ ಹಲ್ಲೆ ಮಾಡಿದ ಪುಂಡರ ಬಂಧನವಾಗಬೇಕು.  ಬಂಧಿಸದಿದ್ರೆ ಸಂಪೂರ್ಣ ‌ಚಿಕ್ಕಪೇಟೆ ಬಂದ್ ಮಾಡುವ ಎಚ್ಚರಿಕೆ ನೀಡಿದ ವರ್ತಕರು. 

ದಾವಣಗೆರೆ: ಪಾನೀಪೂರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡ ಪ್ರಕರಣ; ಚಿಕಿತ್ಸೆ ಫಲಿಸದೇ ಇಂದು ಓರ್ವ ಬಾಲಕ ಸಾವು!

 ಜನರು ಹೆಚ್ಚು ಜಮಾಯಿಸಿದ ಹಿನ್ನೆಲೆ ಪೊಲೀಸ್ ಠಾಣೆ ಮುಂದೆ ಬಿಗಿ ಬಂದೋಬಸ್ತ್ ಮಾಡಿದ ಪೊಲೀಸರು. ಇಬ್ಬರು ಎಸಿಪಿ, ಒಂದು ಕೆಸಿಆರ್‌ಪಿ ತುಕಡಿ, ಮೂವರು ಇನ್ಸ್‌ಪೆಕ್ಟರ್ ಸೇರಿದಂತೆ ಪೊಲೀಸರು ಸ್ಥಳದಲ್ಲಿ ಮೊಕ್ಕಂ. ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನೆಡದಿರುವ ಪ್ರಕರಣ.

Latest Videos
Follow Us:
Download App:
  • android
  • ios