Asianet Suvarna News Asianet Suvarna News

Breaking news: ಲೋಕಸಭಾ ಚುನಾವಣೆ ಹೊತ್ತಲ್ಲಿ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷ!

ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಗಡಿಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ. ಏಳೆಂಟು ಜನರಿದ್ದ ನಕ್ಸಲರ ತಂಡ ಅಂಗಡಿಯೊಂದರಲ್ಲಿ ದಿನಸಿ ಖರೀದಿಸಿ ಹೋಗಿದ್ದು, ಕೊಡಗು ಪೊಲೀಸರು ಹೈಅಲರ್ಟ್ ಆಗಿದ್ದಾರೆ.

Lok sabha election 2024 Naxals appeared in Kodagu after 6 yearsk police high alert rav
Author
First Published Mar 17, 2024, 10:51 PM IST

ಕೊಡಗು (ಮಾ.17): ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಈ ನಡುವೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ ಕಡಮಕಲ್ಲು ಬಳಿಯ ಕೂಜಿಮಲೆ ಬಳಿಯ ರಬ್ಬರ್ ಎಸ್ಟೇಟ್‌ನಲ್ಲಿ 8 ಜನರಿದ್ದ ನಕ್ಸಲರ ತಂಡ ಕಾಣಿಸಿಕೊಂಡಿರುವುದರಿಂದ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ..

ನಿನ್ನೆ ಸಂಜೆ ಕಾಲೂರು ಗ್ರಾಮದ  ಕೂಜಿಮಲೆಗೆ ಬಂದು ಅಲ್ಲಿನ ಅಂಗಡಿಯೊಂದರಲ್ಲಿ ಸುಮಾರು 4000 ರುಪಾಯಿಯಷ್ಟು ದಿನಸಿ ವಸ್ತುಗಳನ್ನು ಕೊಂಡೊಯ್ದಿರುವ ನಕ್ಸಲರು. ಡಿಜಿಟಲ್ ಪೇ ಮಾಡದೇ ಅಂಗಡಿಯಲ್ಲಿ ನಗದು ನೀಡಿ ಸಾಮಗ್ರಿ ಖರೀದಿಸಿ ಹೋಗಿದ್ದಾರೆ.

ಮದ್ಯ ಖರೀದಿಗೆ ಅಬಕಾರಿ ಇಲಾಖೆ ಅನುಮತಿ ಕಡ್ಡಾಯ; ಕೊಡಗಿನಲ್ಲಿ ಒಟ್ಟು ಮತದಾರರೆಷ್ಟು? 

6 ವರ್ಷದ ಬಳಿಕ ಮತ್ತೆ ಕೊಡಗಿನಲ್ಲಿ ಕಾಣಿಸಿಕೊಂಡಿರುವ ಕೆಂಪು ಉಗ್ರರು. ಲೋಕಸಭಾ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ನಕ್ಸಲರು ಪ್ರತ್ಯಕ್ಷರಾಗಿರುವುದು ಪೊಲೀಸರು ಹೈಅಲರ್ಟ್‌ ಆಗಿದ್ದಾರೆ.. ಗುತ್ತಿಗಾರು, ಕೊಲ್ಲಮೊಗರು, ಕಲ್ಮಕರ್, ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್. 2012 ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದ ನಕ್ಸಲರು. ಮತ್ತೊಮ್ಮೆ 2012 ರ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ಪ್ರತ್ಯಕ್ಷಗೊಂಡಿದ್ದ ತಂಡ ಇದೀಗ ಆರು ವರ್ಷಗಳ ಬಳಿಕ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. ನಕ್ಸಲರು ಪ್ರತ್ಯಕ್ಷವಾಗಿರುವ ಹಿನ್ನೆಲೆ ಕೊಡಗು ಗಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Follow Us:
Download App:
  • android
  • ios