ದಾವಣಗೆರೆ: ಪಾನೀಪೂರಿ ತಿಂದು 19 ಮಕ್ಕಳು ಅಸ್ವಸ್ಥಗೊಂಡ ಪ್ರಕರಣ; ಚಿಕಿತ್ಸೆ ಫಲಿಸದೇ ಇಂದು ಓರ್ವ ಬಾಲಕ ಸಾವು!

ಮಲೇಬೆನ್ನೂರಿನಲ್ಲಿ ಪಾನೀಪೂರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣದ ಇಂದು 6 ವರ್ಷದ ಓರ್ವ ಬಾಲಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

19 children seriously ill after eating panipuri case 1 died today at davanagere rav

ದಾವಣಗೆರೆ (ಮಾ.17): ಮಲೇಬೆನ್ನೂರಿನಲ್ಲಿ ಪಾನೀಪೂರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣದ ಇಂದು 6 ವರ್ಷದ ಓರ್ವ ಬಾಲಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.

ಹಜರತ್ ಬಿಲಾಲ್ ಬಿನ್  ಇರ್ಫಾನ್ (6) ಸಾವನ್ನಪ್ಪಿದ  ಬಾಲಕ. ಇದೇ ಮಾರ್ಚ್  15 ರಂದು ಸಂಜೆ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ಘಟನೆ. ರಂಜಾನ್ ಹಬ್ಬದ ಹಿನ್ನೆಲೆ ಉಪವಾಸ ಇದ್ದ ಮಕ್ಕಳು. ಉಪವಾಸ ಅಂತ್ಯದ ಬಳಿಕ ಜಾಮೀಯಾ ಮಸೀದಿ ಬಳಿ ಮಾರುತ್ತಿದ್ದ ಪಾನೀಪೂರಿ ತಿಂದಿದ್ದ ಮಕ್ಕಳು. ಪಾನೀಪೂರಿ ತಿಂದ ಕೆಲ ಹೊತ್ತಿನಲ್ಲಿ ವಾಂತಿ-ಭೇದಿ, ಹೊಟ್ಟೆ ನೋವಿನಿಂದ ತೀವ್ರ ಅಸ್ವಸ್ಥಗೊಂಡಿದ್ದ 19 ಮಕ್ಕಳು. ಅಸ್ವಸ್ಥಗೊಂಡ ಮಕ್ಕಳ ಪೈಕಿ ನಾಲ್ವರು ಸ್ಥಿತಿ ಚಿಂತಾಜನಕವಾಗಿತ್ತು. ತೀವ್ರ ನಿಗಾಘಟಕದಲ್ಲಿಟ್ಟು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ನಾಲ್ವರು ಮಕ್ಕಳ ಪೈಕಿ ಒಂದು ಮಗು ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದೆ. ಇನ್ನುಳಿದು ಮೂವರು ಮಕ್ಕಳು ಆಸ್ಪತ್ರೆಯಲ್ಲಿದ್ದು  ಚೇತರಿಸಿಕೊಂಡಿದ್ದಾರೆ.

ರಂಜಾನ್ ಉಪವಾಸ ಅಂತ್ಯದ ಬಳಿಕ ಪಾನಿಪುರಿ ತಿಂದು 19 ಮಕ್ಕಳು ತೀವ್ರ ಆಸ್ವಸ್ಥ, ಆಸ್ಪತ್ರೆಗೆ ದಾಖಲು

ಘಟನೆ ಬಳಿಕ ಪಾನೀಪೂರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಆರೋಪಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ.

Latest Videos
Follow Us:
Download App:
  • android
  • ios