ಕೊನೆಯ ಆಸೆ ಎಂದು ರಸಗುಲ್ಲಾ ಕೊಟ್ಟು ಬಾಲಕನನ್ನು ಕೊಂದ ಮೂವರು ಅಪ್ರಾಪ್ತರು!
ಗೇಮ್‌ಗಳನ್ನು ಆಡಲು ಕಂಪ್ಯೂಟರ್ ಖರೀದಿಸಲು" ಮೂವರು ಅಪ್ರಾಪ್ತ ಬಾಲಕರು ಮತ್ತೊಬ್ಬ ಬಾಲಕನನ್ನು ಅಪಹರಣ ಮಾಡಿ 3 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ವಿಧವೆ ಬಡ ತಾಯಿ ಬಳಿ ಹಣವಿರದ ಕಾರಣ ಅವರು ದುಡ್ಡು ಕೊಡಲಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಕೊಲೆ ಮಾಡಿದ್ದಾರೆ.
ಕೋಲ್ಕತ್ತಾ (ಆಗಸ್ಟ್ 28, 2023): ಮೂರು ಅಪ್ರಾಪ್ತ ವಯಸ್ಕರು 14 ವರ್ಷ ವಯಸ್ಸಿನ ಬಾಲಕನನ್ನು ಕೊಲೆ ಮಾಡಿದ್ದಾರೆ. ಅಲ್ಲದೆ, ಆತನ ಕೊನೆಯಾಸೆ ಎಂದು ರಸಗುಲ್ಲಾ ಹಾಗೂ ತಂಪು ಪಾನೀಯ ನೀಡಿ ಕೊಲೆ ಮಾಡಿರುವ ಘಟನೆ ದಾರುಣ ಘಟನೆ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಬಾಲಕನನ್ನು ಕಿಡ್ನ್ಯಾಪ್ ಮಾಡಿದ್ದ ಇವರು ಬಾಲಕನ ತಾಯಿಗೆ 3 ಲಕ್ಷ ರೂ. ಡಿಮ್ಯಾಂಡ್ ಇಟ್ಟಿದ್ದರು. ಹಣ ಕೊಡದ ಹಿನ್ನೆಲೆ ಸಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂವರು ಅಪಹರಣಕಾರರ ಕೈಯಲ್ಲಿ ಆಗಸ್ಟ್ 25 ರಂದು 8ನೇ ತರಗತಿಯ ವಿದ್ಯಾರ್ಥಿಯು ಮೃತಪಟ್ಟ ಬಗ್ಗೆ ನಾಡಿಯಾದ ಕೃಷ್ಣನಗರದಲ್ಲಿ ಭಾನುವಾರ ಬಾಲನ್ಯಾಯ ಮಂಡಳಿಗೆ ಪೊಲೀಸರು ವರದಿ ಮಾಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. "ಗೇಮ್‌ಗಳನ್ನು ಆಡಲು ಕಂಪ್ಯೂಟರ್ ಖರೀದಿಸಲು" ಮೂವರು ಅಪ್ರಾಪ್ತ ಬಾಲಕರು ಮತ್ತೊಬ್ಬ ಬಾಲಕನನ್ನು ಅಪಹರಣ ಮಾಡಿ 3 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಾರೆ. ಆದರೆ, ವಿಧವೆ ಬಡ ತಾಯಿ ಬಳಿ ಹಣವಿರದ ಕಾರಣ ಅವರು ದುಡ್ಡು ಕೊಡಲಿಲ್ಲ ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಕೊಲೆ ಮಾಡಿದ್ದಾರೆ.
ಇದನ್ನು ಓದಿ: ಪ್ರೇಮಿ ವಿರುದ್ಧ ಸಾಕ್ಷಿ ಹೇಳ್ಲಿಲ್ಲ ಅಂತ 8 ತಿಂಗಳ ಗರ್ಭಿಣಿಯನ್ನೇ ಕತ್ತು ಹಿಸುಕಿ ಕೊಂದ ಪೋಷಕರು
ಬಾಲಕನ ತಂದೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಕೃಷ್ಣನಗರದ ಘುರ್ನಿಯಲ್ಲಿರುವ ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ಮನೆ ಸಹಾಯಕರಾಗಿ ಕೆಲಸ ಮಾಡುವ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದರು ಎಂದೂ ತಿಳಿದುಬಂದಿದೆ. ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿ ನಾಪತ್ತೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ''ಅವನು ಅಂಗಡಿಗೆ ಹೋಗಿದ್ದನು, ಆದರೆ ರಾತ್ರಿ ಹಿಂತಿರುಗಲಿಲ್ಲ. ನಾನು ಶನಿವಾರ ಮುಂಜಾನೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ’’ ಎಂದು ನಾಪತ್ತೆಯಾದ ಬಗ್ಗೆ ಬಾಲಕನ ತಾಯಿ ದೂರು ಕೊಟ್ಟಿದ್ದರು.
ಇನ್ನು, ಬಾಲಕನನ್ನು ಕೃಷ್ಣಾನಗರದ ಹೊರವಲಯಕ್ಕೆ ಕರೆದೊಯ್ದು ಕತ್ತು ಹಿಸುಕಿ, ದೇಹವನ್ನು ಗೋಣಿಚೀಲದಲ್ಲಿ ತುಂಬಿ ಕೆರೆಗೆ ಎಸೆದಿರುವುದಾಗಿ ಮೂವರು ಅಪ್ರಾಪ್ತರು ತಮ್ಮ ಅಪರಾಧ ಒಪ್ಪಿಕೊಂಡು ಪೊಲೀಸರಿಗೆ ಬಾಯ್ಬಿಟ್ಟಿದ್ದಾರೆ. ಬಳಿಕ, ಪೊಲೀಸ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು, ಮೃತದೇಹವನ್ನು ಸಹ ಪತ್ತೆಹಚ್ಚಿದ್ದು, ಅಪಹರಣಕಾರರು 14 ವರ್ಷ ವಯಸ್ಸಿನವರು ಎಂದು ಶಂಕಿಸಿದ್ದಾರೆ.
ಇದನ್ನೂ ಓದಿ: ನನ್ ಜತೆ ಮಲಗು ಬಾ ಅಂತ ಸೊಸೆಗೆ ಒತ್ತಾಯಿಸ್ತಿದ್ದ ಮಾವ: ಕುಡುಗೋಲಿನಿಂದ ಗಂಡನ ಕತ್ತು ಸೀಳಿದ ಅತ್ತೆ