Asianet Suvarna News Asianet Suvarna News

ಪ್ರೇಮಿ ವಿರುದ್ಧ ಸಾಕ್ಷಿ ಹೇಳ್ಲಿಲ್ಲ ಅಂತ 8 ತಿಂಗಳ ಗರ್ಭಿಣಿಯನ್ನೇ ಕತ್ತು ಹಿಸುಕಿ ಕೊಂದ ಪೋಷಕರು

ಮೃತ ಯುವತಿಯ ಪೋಷಕರ ದೂರಿನ ಮೇರೆಗೆ ದಾಖಲಿಸಲಾದ ಪ್ರಕರಣದಲ್ಲಿ ತನ್ನ ಪಾರ್ಟ್‌ನರ್‌ ವಿರುದ್ಧ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ನಿರಾಕರಿಸಿದ್ದರಿಂದ 19ರ ಹರೆಯದ ಯುವತಿಯನ್ನು ಹೆತ್ತವರೇ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

pregnant woman killed in up by parents for not testifying against man in rape case ash
Author
First Published Aug 27, 2023, 10:12 PM IST

ಮುಜಾಫರ್‌ನಗರ (ಆಗಸ್ಟ್‌ 27, 2023): ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಎಂಟು ತಿಂಗಳ ಗರ್ಭಿಣಿಯನ್ನು ಆಕೆಯ ಪೋಷಕರೇ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರ ಬಳಿ ಈ ದಾರುಣ ಘಟನೆ ನಡೆದಿದೆ. 

ಮೃತ ಯುವತಿಯ ಪೋಷಕರ ದೂರಿನ ಮೇರೆಗೆ ದಾಖಲಿಸಲಾದ ಪ್ರಕರಣದಲ್ಲಿ ತನ್ನ ಪಾರ್ಟ್‌ನರ್‌ ವಿರುದ್ಧ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ನಿರಾಕರಿಸಿದ್ದರಿಂದ 19ರ ಹರೆಯದ ಯುವತಿಯನ್ನು ಹೆತ್ತವರೇ ಕೊಂದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 19ರ ಹರೆಯದ ಯುವತಿ ಮತ್ತು ಆಕೆಯ ಪಾರ್ಟ್‌ನರ್‌ ಅಕ್ಟೋಬರ್ 2022 ರಲ್ಲಿ ಓಡಿಹೋಗಿದ್ದರು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ಆಕೆಯನ್ನು ಪತ್ತೆಹಚ್ಚಿದ ನಂತರ, ಆಕೆಯ ಪಾರ್ಟ್‌ನರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಇದನ್ನು ಓದಿ: ನನ್‌ ಜತೆ ಮಲಗು ಬಾ ಅಂತ ಸೊಸೆಗೆ ಒತ್ತಾಯಿಸ್ತಿದ್ದ ಮಾವ: ಕುಡುಗೋಲಿನಿಂದ ಗಂಡನ ಕತ್ತು ಸೀಳಿದ ಅತ್ತೆ

ಇನ್ನೊಂದೆಡೆ, ಈ ಕೊಲೆ ಪ್ರಕರಣ ಸಂಬಂಧ 19 ವರ್ಷದ ಯುವತಿಯ ಪೋಷಕರನ್ನು ಬಂಧಿಸಲಾಗಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಶಹಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಯ್ಲಾ ಗ್ರಾಮದ ನದಿಯಲ್ಲಿ ಶವ ಎಸೆದಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ. 

ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಯುವತಿಯ ಪೋಷಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಗೂ, ಪೋಷಕರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ. ಮೃತ ಯುವತಿ ಶನಿವಾರ ಈ ಪ್ರಕರಣದಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಬೇಕಾಗಿತ್ತು. ಆದರೆ ಅವಳು ಹಾಜರಾಗಲಿಲ್ಲ ಎಂದೂ ಅಧಿಕಾರಿ ಹೇಳಿದರು.

ಇದನ್ನೂ ಓದಿ: ಬಾಲಕಿಯ ಬೆತ್ತಲೆ ಫೋಟೋ ತೆಗೆದು ವೈರಲ್‌ ಮಾಡಿದ ಪಕ್ಕದ ಮನೆ ಯುವಕ: ಜೀವವನ್ನೇ ಕಳ್ಕೊಂಡ ಅಪ್ರಾಪ್ತೆ!

"ಮಹಿಳೆಯ ಪೋಷಕರು ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ಸಾಕ್ಷಿ ಹೇಳಲು ಬಯಸಿದ್ದರು. ಆದರೆ ಆಕೆ ಹಾಗೆ ಮಾಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಯುವತಿಯ ಪೋಷಕರು ಅವಳನ್ನು ಕೊಂದರು" ಎಂದು ಎಸ್‌ಪಿ ಸಂಜೀವ್‌ ಸುಮನ್‌ ಹೇಳಿದರು.

ಇದನ್ನೂ ಓದಿ: ಡೆಲಿವರಿ ಬಾಯ್ಸ್‌ ಜೀವಕ್ಕಿಲ್ವಾ ಬೆಲೆ? ಅಡ್ರೆಸ್‌ ಕೇಳಿದ್ದಕ್ಕೆ ಚಾಕುನಿಂದ ಚುಚ್ಚಿದ ಮಹಿಳೆ!

ಇದನ್ನೂ ಓದಿ: ಮಗಳ ಮೇಲೆ ಕಣ್ಣಾಕಿದ ಲಿವ್ ಇನ್ ಪಾರ್ಟ್‌ನರ್‌, 'ಅದನ್ನೇ' ಕಟ್‌ ಮಾಡಿ ಕೊಲೆ ಮಾಡಿದ ಮಹಿಳೆ!

Follow Us:
Download App:
  • android
  • ios