ಬಾಲಕಿಗೆ ತಿಂಡಿ ಕೊಡಿಸುತ್ತೇನೆಂದು ಪುಸಲಾಯಿಸಿ ತೋಟಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ 72 ವರ್ಷದ ವೃದ್ಧನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಪ್ರಕರಣ ದಾಖಲಾಗಿದೆ. ಹೆಗ್ಗಾರದ ಕೃಷ್ಣ ಶಿವರಾಮ ಭಟ್ಟ ಬಂಧಿತ ಆರೋಪಿ

ಅಂಕೋಲಾ (ಮೇ.16): ಬಾಲಕಿಗೆ ತಿಂಡಿ ಕೊಡಿಸುತ್ತೇನೆಂದು ಪುಸಲಾಯಿಸಿ ತೋಟಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ 72 ವರ್ಷದ ವೃದ್ಧನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಫೋಕ್ಸೊ ಪ್ರಕರಣ ದಾಖಲಾಗಿದೆ. 

Add Asianetnews Kannada as a Preferred SourcegooglePreferred

ಹೆಗ್ಗಾರದ ಕೃಷ್ಣ ಶಿವರಾಮ ಭಟ್ಟ ಬಂಧಿತ ಆರೋಪಿ. ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಸಿಪಿಐ ಶ್ರೀಕಾಂತ ತೋಟಗಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸುಹಾಸ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.ಎವರೆಸ್ಟ್ ಚಿಕನ್ ಮಸಾಲ ಬಳಕೆ: ಅಧಿಕಾರಿಗಳ ಸೂಚನೆ

ಎವರೆಸ್ಟ್ ಚಿಕನ್ ಮಸಾಲ ಬಳಕೆ: ಅಧಿಕಾರಿಗಳ ಸೂಚನೆ

ಕಾರವಾರ: ಕುಮಟಾ ತಾಲೂಕಿನ ಹೊನಮಾವುನ ವಿಜಯ ಸ್ಟೋರ್‌ನಲ್ಲಿನ ಎವರೆಸ್ಟ್‌ ಚಿಕನ್‌ ಮಸಾಲ ಬಳಕೆ ಅಸುರಕ್ಷಿತ ಎಂಬ ವರದಿ ಬಂದಿದೆ ಎಂದು ಆಹಾರ ಸುರಕ್ಷತಾಧಿಕಾರಿಗಳು ತಿಳಿಸಿದ್ದಾರೆ.

14ರ ಅಣ್ಣನಿಂದಲೇ ಅತ್ಯಾಚಾರ: 12 ವರ್ಷದ ಬಾಲಕಿ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್
ಈ ಚಿಕನ್‌ ಮಸಾಲ ಪದಾರ್ಥವನ್ನು ಸಂಗ್ರಹಿಸಿ ಬೆಂಗಳೂರಿನ ಯುರೇಕಾ ಅನಾಲಿಟಿಕಲ್‌ ಸರ್ವಿಸಸ್‌ ಪ್ರೈ. ಲಿ.ನ ಪ್ರಯೋಗಾಲಯದಲ್ಲಿ ಪರೀಕ್ಷಗೆ ಒಳಪಡಿಸಲಾಗಿತ್ತು. ಅದರಲ್ಲಿ ಎವರೆಸ್ಟ್‌ ಚಿಕನ್‌ ಮಸಾಲ 500 ಗ್ರಾಂ (MFG: Mar-2024 Exp: May- 2025 Batch No: E180D504062) FSSAI License No: 10012022000526 ಉತ್ಪನ್ನವು ಅಸುರಕ್ಷಿತ ವೆಂದು ವರದಿ ಬಂದಿದೆ ಎಂದು ಆಹಾರ ಸುರಕ್ಷತಾಧಿಕಾರಿಗಳು ತಿಳಿಸಿದ್ದಾರೆ. 

ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೇ ಸಿಬ್ಬಂದಿಯ ಖುಲ್ಲಂ ಖುಲ್ಲಾ ಕಿಸ್ಸಿಂಗ್; ದಾಖಲಾಯ್ತು ಕೇಸ್

ಅಲ್ಲದೇ ಉತ್ತರ ಕನ್ನಡ ಜಿಲ್ಲೆಯ ಆಹಾರ ಪದಾರ್ಥ ಮಾರಾಟಗಾರರು ಸಾರ್ವಜನಿಕರಿಗೆ ಮೇಲೆ ತಿಳಿಸಿದ ಬ್ಯಾಚ್‌ ನಂಬರ್‌ ಉತ್ಪನ್ನ ಮಾರಾಟವಾಗದಂತೆ ಅಗತ್ಯ ಕ್ರಮವಹಿಸಲು ಸೂಚಿಸಲಾಗಿದೆ.ಸಾರ್ವಜನಿಕರು ಈ ಬ್ಯಾಚ್‌ನ ಎವರೆಸ್ಟ್‌ ಚಿಕನ್‌ ಮಸಾಲ ಖರೀದಿಸಿದ್ದರೆ ಕೂಡಲೇ ಸೇವನೆ ಮಾಡದೇ, ಖರೀದಿಸಿದ ಅಂಗಡಿಗಳಿಗೆ ನಿಯಮಾನುಸಾರ ಹಿಂದಿರುಗಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.