ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮೇಲೆ ಗುಂಡಿನ ದಾಳಿ: ಗರ್ಭಪಾತ
ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮಹಿಳೆಗೆ ಗರ್ಭಪಾತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ದೆಹಲಿ: ಡಿಜೆ ಸದ್ದು ಕಡಿಮೆ ಮಾಡು ಎಂದ ಗರ್ಭಿಣಿ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಮಹಿಳೆಗೆ ಗರ್ಭಪಾತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ವಾಯುವ್ಯ ದೆಹಲಿಯ ಸಿರ್ಸಾಪುರದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಪಕ್ಕದ ಮನೆಯಲ್ಲಿ ಪಾರ್ಟಿ ನಡೆಯುತ್ತಿದ್ದು, ಕಿವಿಗಡಚಿಕ್ಕುವ ಡಿಜೆ ಸದ್ದಿನಿಂದ ಕಿರಿಕಿರಿಗೊಳಗಾದ ಮಹಿಳೆ ಡಿಜೆ ಸದ್ದು ಸ್ವಲ್ಪ ಕಡಿಮೆ ಮಾಡುವಂತೆ ಹೇಳಿದ್ದಾಳೆ. ಅಷ್ಟಕ್ಕೆ ಸಿಟ್ಟಿಗೆದ್ದ ಹರೀಶ್ ಎಂಬಾತ ತನ್ನ ಸ್ನೇಹಿತ ಅಮಿತ್ ಎಂಬಾತನ ಗನ್‌ನಿಂದ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಗುಂಡಿನ ದಾಳಿಗೊಳಗಾದ ಮಹಿಳೆಯನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ 12.15ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆಯೊಂದು ಬಂದಿದ್ದು, ವಾಯುವ್ಯ ದೆಹಲಿಯ ಸಿರ್ಸಾಪುರದಲ್ಲಿ (Siraspur) ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ತೆರಳಿದಾಗ ಸಿರ್ಸಾಪುರದ ರಂಜು ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದು ಬಂದಿದೆ.
ಕಚೇರಿಯಲ್ಲಿ ಕುರ್ಚಿಗಾಗಿ ಕದನ: ಸಹೋದ್ಯೋಗಿಯ ಮೇಲೆ ಗುಂಡಿನ ದಾಳಿ
ನಂತರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಮಹಿಳೆಯ ಕುತ್ತಿಗೆಗೆ ಗುಂಡು ಬಿದ್ದಿರುವುದರಿಂದ ಆಕೆಯ ಸ್ಥಿತಿ ಗಂಭೀರವಾಗಿದ್ದು, ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಉಪ ಪೊಲೀಸ್ ಕಮೀಷನರ್ ರವಿಕುಮಾರ್ ಸಿಂಗ್ (Ravi Kumar Singh) ಹೇಳಿದ್ದಾರೆ.
ಅಮೆರಿಕಾದ ಗುರುದ್ವಾರದಲ್ಲಿ ಗುಂಡಿನ ದಾಳಿ: NRI ಸೇರಿ ಇಬ್ಬರಿಗೆ ಗಾಯ