ನೇಣುಬಿಗಿದ ಸ್ಥಿತಿಯಲ್ಲಿ ಎಂಬಿಬಿಎಸ್​ ವಿದ್ಯಾರ್ಥಿಯ ಶವ ಪತ್ತೆ

ಇನ್ನೇನು ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಬೇಕಿದ್ದ ಯುವಕನೊಬ್ಬ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

mbbs final year student commits suicide at Bidar rbj

ಬೀದರ್, (ಮಾ.13): ಕಾಲೇಜಿನ ಹಾಸ್ಟೆಲ್​ನಲ್ಲೇ ಎಂಬಿಬಿಎಸ್​ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಬಸವಕಲ್ಯಾಣ ಮೂಲದ ವಿನೀತ್ ವಿಜಯಕುಮಾರ ‌ಕಾಂಬಳೆ( 24) ಮೃತ ದುರ್ದೈವಿ. ಈತ ಬೀದರ್​ನ ಬ್ರಿಮ್ಸ್​ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್​ ಓದುತ್ತಿದ್ದ. ಬ್ರಿಮ್ಸ್ ಹಾಸ್ಟೆಲ್​ನಲ್ಲೇ ಇದ್ದ.

16ರ ಸುಂದರಿಯ ಸಾವಿನಲ್ಲಿ ತೆರೆದುಕೊಂಡ ಲವ್ ಸ್ಟೋರಿ: ಚಲುವೆಯ ರಹಸ್ಯ...!

ಆದ್ರೆ, ಇಂದು (ಶನಿವಾರ) ಬೆಳಗ್ಗೆ ನೇಣುಬಿಗಿದ ಸ್ಥಿತಿಯಲ್ಲಿ ವಿನೀತ್​ ವಿಜಯಕುಮಾರ ಕಾಂಬಳೆಯ ಶವ ಪತ್ತೆಯಾಗಿದೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿಲ್ಲ.

 ಸ್ಥಳಕ್ಕೆ ಭೇಟಿ ನೀಡಿದ ನ್ಯೂ ಟೌನ್ ಠಾಣೆ ಪಿಎಸ್​ಐ ಸಂತೋಷ ತಟ್ಟೆಪಲ್ಲಿ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.
 

Latest Videos
Follow Us:
Download App:
  • android
  • ios