ಆರೋಪಿ ಬಾಲಕಿಯ ಶವವನ್ನು ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಜಂತ್ರಖಾಡಿ ಗ್ರಾಮದ ಹೊರವಲಯದಲ್ಲಿ ಎಸೆದಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಭಾನುವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‌ (ಜೂ. 13): ವಿವಾಹಿತ ವ್ಯಕ್ತಿ, ಇಬ್ಬರು ಮಕ್ಕಳ ತಂದೆ, ಎಂಟು ವರ್ಷದ ಬಾಲಕಿಯನ್ನು ಅಪಹರಿಸಿದ ಆರೋಪಿ. ತನ್ನ ನಿವಾಸದಲ್ಲಿಯೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ್ದಾನೆ ಎಂಬ ಆರೋಪ ಈ ವ್ಯಕ್ತಿ ಮೇಲಿದೆ. ನಂತರ ಆತ ಬಾಲಕಿಯ ಶವವನ್ನು ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಜಂತ್ರಖಾಡಿ ಗ್ರಾಮದ ಹೊರವಲಯದಲ್ಲಿ ಎಸೆದಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಭಾನುವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ. 

ಪೊಲೀಸರು ಸೋಮವಾರ ಸಂಜೆಯೊಳಗೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಆರೋಪಿಗೆ ಆದಷ್ಟು ಬೇಗ ದೋಷಿ ಎಂದು ಘೋಷಿಸಿ ಮತ್ತು ಗರಿಷ್ಠ ಶಿಕ್ಷೆ ನೀಡಲು, ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ. 

"ಭಾನುವಾರ ಬೆಳಗ್ಗೆ ಏನಾದರು ಖರೀದಿಗೆಂದು ಮಾರುಕಟ್ಟೆಗೆ ನಡೆದುಕೊಂಡು ಹೋಗುತ್ತಿದ್ದ ಆಕೆಯನ್ನು ಆರೋಪಿ ಅಪಹರಿಸಿ ತನ್ನ ಕೋಣೆಗೆ ಕರೆತಂದು ಅತ್ಯಾಚಾರವೆಸಗಿದ್ದಾನೆ. ಆಕೆಯ ಕಿರುಚಾಟವನ್ನು ನೆರೆಹೊರೆಯವರಗೆ ಕೇಳಿಸದಂತೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ ಹೀಗಾಗಿ ಉಸಿರುಗಟ್ಟುವಿಕೆಯಿಂದ ಬಾಕಲಿ ಸಾವನ್ನಪ್ಪಿದ್ದಾಳೆ" ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ವಿದೇಶಕ್ಕೆ ಹಾರಿದ ಯುವಕ, ದೂರು ದಾಖಲು

ಬಳಿಕ ಆರೋಪಿ ಶವವನ್ನು ಗೋಣಿಚೀಲದಲ್ಲಿ ಹಾಕಿ ಗ್ರಾಮದ ಹೊರವಲಯದಲ್ಲಿ ಎಸೆದಿದ್ದ. ಜನರು ಬಾಲಕಿಯನ್ನು ಹುಡುಕಲು ಹೋದಾಗ ಆಕೆಯ ಶವ ಪತ್ತೆಯಾಗಿದೆ. “ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ, ನನ್ನೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರಸಿಂಹ ಜಡೇಜಾ ಮತ್ತು ಇಡೀ ತಂಡವು ಗ್ರಾಮಕ್ಕೆ ತಲುಪಿ ಆರೋಪಿಯನ್ನು ಹುಡುಕಲು ಪ್ರಾರಂಭಿಸಿತು ಮತ್ತು ತಡರಾತ್ರಿಯ ಹೊತ್ತಿಗೆ ಆರೋಪಿಯನ್ನು ಬಂಧಿಸಲಾಯಿತು." ಎಂದು ಸಹಾಯಕ ಪೊಲೀಸ್ ಅಧೀಕ್ಷಕ ಓಂ ಪ್ರಕಾಶ್ ಜಾಟ್ ಹೇಳಿದ್ದಾರೆ. 

"ವಿಧಿವಿಜ್ಞಾನ ತಂಡವು ಆರೋಪಿಯ ನಿವಾಸದಿಂದ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದೆ. ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆರೋಪಿಯನ್ನು ವೈದ್ಯರಿಂದಲೂ ತಪಾಸಣೆ ನಡೆಸಲಾಗುವುದು." ಎಂದು ಅವರು ತಿಳಿಸಿದ್ದಾರೆ. 

ಇದನ್ನೂ ಓದಿನಗ್ನ ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ ಮೇಲ್: 20 ವರ್ಷದ ವಿದ್ಯಾರ್ಥಿ ಬಂಧನ