Latest Crime News: ಆರೋಪಿಯನ್ನು ರಾಜಸ್ಥಾನದ ಅಲ್ವಾರ್ ನಿವಾಸಿ ಅಫ್ಸರ್ ಖಾನ್ ಎಂದು ಗುರುತಿಸಲಾಗಿದೆ 

ನವದೆಹಲಿ (ಜೂ. 13): ನೈಋತ್ಯ ದೆಹಲಿ ಪೊಲೀಸರ ಸೈಬರ್ ಸೆಲ್ ಪೋಲಿಸರು 20 ವರ್ಷದ ಬಿಎಸ್‌ಸಿ ವಿದ್ಯಾರ್ಥಿಯೊಬ್ಬನನ್ನು ಸೆಕ್ಸ್‌ಟರ್ಶನ್‌ನಲ್ಲಿ (Sextortion) ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಿದ್ದಾರೆ. ಆರೋಪಿಯನ್ನು ರಾಜಸ್ಥಾನದ ಅಲ್ವಾರ್ ನಿವಾಸಿ ಅಫ್ಸರ್ ಖಾನ್ ಎಂದು ಗುರುತಿಸಲಾಗಿದೆ. ಸೆಕ್ಸ್‌ಟಾರ್ಶನ್ ಎಂಬುದ ಗಂಭೀರ ಅಪರಾಧವಾಗಿದ್ದು, ಹಣ ಅಥವಾ ಹೆಚ್ಚುವರಿ ವಿಡಿಯೋ/ಫೋಟೋಗಳನ್ನು ನೀಡದಿದ್ದರೆ, ವಂಚಕರು ಲೈಂಗಿಕ ಚಿತ್ರಗಳನ್ನು ಅಥವಾ ವೀಡಿಯೊಗಳನ್ನು ಇತರರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ. 

ಆರೋಪಿ ಅಮಾಯಕರ ಸ್ನೇಹಕ್ಕಾಗಿ ನಕಲಿ ಫೇಸ್‌ಬುಕ್ ಐಡಿಗಳನ್ನು ಸೃಷ್ಟಿಸಿ ಅವರ ನಗ್ನ ವೀಡಿಯೋಗಳನ್ನು ರೆಕಾರ್ಡ್ ಮಾಡಿದ ನಂತರ ಹಣ ಸುಲಿಗೆ ಮಾಡುತ್ತಿದ್ದ. ಆರೋಪಿಯಿಂದ ಅಪರಾಧಕ್ಕೆ ಬಳಸಿದ್ದ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗ್ನ ವಿಡಿಯೋ ರೆಕಾರ್ಡ್: ಮಾರ್ಚ್ 5, 2022 ರಂದು, ಅಮಿತ್ ಕುಮಾರ್, ಅಂಜಲಿ ಶರ್ಮಾ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಐಡಿಯಿಂದ ಫ್ರೆಂಡ್‌ ರಿಕ್ಚೆಸ್ಟ್ ಪಡೆದಿದ್ದಾರೆ ಎಂದು ಸೈಬರ್ ಸೆಲ್‌ಗೆ ದೂರು ಸಲ್ಲಿಸಿದ್ದರು. ಆರೋಪಿಯು ಮೆಸೆಂಜರ್ ಮೂಲಕ ತನ್ನೊಂದಿಗೆ ಮಾತನಾಡುವಾಗ ತನ್ನ ನಗ್ನ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಅಮಿತ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. 

ವಿಡಿಯೋ ರೆಕಾರ್ಡ್ ಮಾಡಿದ ನಂತರ ಆರೋಪಿ ಎರಡು ಅಪರಿಚಿತ ವಾಟ್ಸಾಪ್ ಸಂಖ್ಯೆಗಳ ಮೂಲಕ ವಿಡಿಯೋಗಳನ್ನು ಕಳುಹಿಸಿದ್ದ. ಅಲ್ಲದೇ ತನಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬಂದಿದ್ದು, 20,000 ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ಅಮಿತ್‌ ತಿಳಿಸಿದ್ದಾರೆ. 

ಒಂದು ವೇಳೆ ಹಣ ಪಾವತಿಸಲು ವಿಫಲವಾದಲ್ಲಿ ಆರೋಪಿ ತನ್ನ ವಿಡಿಯೋವನ್ನು ಸಂಬಂಧಿಕರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ. ಆರೋಪಿಗಳು ಗೂಗಲ್‌ ಪೇ ಮೂಲಕ 1000 ರೂ. ಪಡೆದಿರುವುದಾಗಿ ಅಮಿತ್‌ ಆರೋಪಿಸಿದ್ದಾರೆ. 

ಆರೋಪಿ ಅರೆಸ್ಟ್:‌  ಈ ಕುರಿತು ಸೈಬರ್ ಸೆಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಾಥಮಿಕ ತನಿಖೆ ಆಧಾರದ ಮೇಲೆ, ಅಪರಾಧದಲ್ಲಿ ಭಾಗಿಯಾದ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಒಂದು ವರ್ಷದಿಂದ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ವಂಚನೆಗೊಳಗಾದ ಮೂವರನ್ನು ಪೊಲೀಸರ ಗುರುತಿಸಿದ್ದು, ಉಳಿದ ಗುರುತನ್ನು ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ:ವೈದ್ಯಕೀಯ ತಪಾಸಣೆ ಹೆಸರಲ್ಲಿ ನಗ್ನ ವೀಡಿಯೋ ಪಡೆದು ನಿರುದ್ಯೋಗಿಗೆ ಬ್ಲಾಕ್‌ಮೇಲ್

ಇದನ್ನೂ ಓದಿ: ಮನೆಗೆ ಫೋನ್ ಮಾಡಲು ಬಿಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ