Asianet Suvarna News Asianet Suvarna News

ಮದ್ವೆಯಾಗಿದ್ರೂ ಲಿವ್ ಇನ್ ರಿಲೇಶನ್‌ಶಿಪ್; ಹಾಲಿ ಗೆಳತಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಂದು ಜೈಲುಪಾಲು

ವಿವಾಹಿತ ವಿಕಾಸ್ ಮಾನ್, ಹನುಮಾನಗಢ ನಿವಾಸಿ ಸಂಗೀತಾ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದನು. ಇದಕ್ಕೂ ಮೊದಲು ನಾಗ್ಪುರದ ಪಾಲಿ ನಿವಾಸಿ ಮುಸ್ಕಾನ್ (34) ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದನು.

Married man and woman arrested for killing former live in partner mrq
Author
First Published Jun 23, 2024, 4:32 PM IST

ಜೈಪುರ: ಲಿವ್ ಇನ್ ಪಾರ್ಟನರ್ (Live in Partner) ಜೊತೆ ಸೇರಿ ಮಾಜಿ ಗೆಳತಿಯನ್ನು ಕೊಲೆಗೈದು (Murder) ಜೈಲು ಸೇರಿದ್ದಾರೆ. ವಿಕಾಸ್ ಮಾನ್ (39) ಮತ್ತು ಸಂಗೀತಾ (35) ಇಬ್ಬರು ಜೊತೆಯಾಗಿ ಮುಸ್ಕಾನ್ ಎಂಬ ಮಹಿಳೆಯನ್ನು ಕೊಂದು ಜೈಲುಪಾಲಾಗಿದ್ದಾರೆ. ಮುಸ್ಕಾನ್ ಮೃತದೇಹವನ್ನು ತುಂಡರಿಸಿ ಜೈಪುರ (Jaipur) ಮತ್ತು ಬಿಕಾನೇರ್ (Bikaner) ಭಾಗದಲ್ಲಿ ಎಸೆಯಲಾಗಿತ್ತು. ಜೂನ್ 15ರಂದು ಬಿಕಾನೇರ್ ನಗರದ ಜ್ಞಾನನಾರಾಯಣ ವ್ಯಾಸ ಕಾಲೋನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುಂಡ ಮತ್ತು ಕೈ ಕಾಲುಗಳಿಲ್ಲದ ಮಹಿಳೆಯ ಶವ ಕಸದ ಗುಂಡಿ ಬಳಿ ಪತ್ತೆಯಾಗಿತ್ತು. ಆನಂತರ ಜೈಪುರ ಬಳಿ ಮಹಿಳೆಯ ರುಂಡ ಮತ್ತು ಕೈಕಾಲುಗಳು ಪತ್ತೆಯಾಗಿದ್ದವು. 

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಜೋಧಪುರ ಮೂಲದ ವಿವಾಹಿತ ವಿಕಾಸ್ ಮಾನ್, ಹನುಮಾನಗಢ ನಿವಾಸಿ ಸಂಗೀತಾ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದನು. ಇದಕ್ಕೂ ಮೊದಲು ನಾಗ್ಪುರದ ಪಾಲಿ ನಿವಾಸಿ ಮುಸ್ಕಾನ್ (34) ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದನು.  ಮುಸ್ಕಾನ್ ಕೊಲೆಗೆ ಸಂಬಂಧಿಸಿದಂತೆ ವಿಕಾಸ್ ಮತ್ತು ಸಂಗೀತಾಳನ್ನು ಬಂಧಿಸಲಾಗಿದೆ ಎಂದು ಬಿಕಾನೇರ್ ಐಜಿ ಓಂ ಪ್ರಕಾಶ್ ಹೇಳಿದ್ದಾರೆ. 

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸಾಕ್ಷಿ ಕೊಡಲು ಬಂದು ಪೊಲೀಸರಿಗೆ ತಾನಾಗಿಯೇ  ಸಿಕ್ಕಿಬಿದ್ದ ಸೂರಜ್ ರೇವಣ್ಣ!

ಕೊಲೆಗೆ ಕಾರಣ ಏನು?
 
ಸಂಗೀತಾಳ ಸಹವಾಸ ಬಿಟ್ಟು ತನ್ನೊಂದಿಗೆ ಇರುವಂತೆ ವಿಕಾಸ್‌ಗೆ ಮುಸ್ಕಾನ್ ಒತ್ತಡ ಹಾಕುತ್ತಿದ್ದನು. ವಿಕಾಸ್ ಈ ವಿಷಯವನ್ನು ಸಂಗೀತಾ ಬಳಿ ಹೇಳಿಕೊಂಡಿದ್ದನು. ಮಾಜಿ ಗೆಳತಿಯ ಕಿರುಕುಳಕ್ಕೆ ಬೇಸತ್ತ ವಿಕಾಸ್ ಹಾಲಿ  ಗೆಳತಿಯೊಂದಿಗೆ ಸೇರಿ ಮುಸ್ಕಾಳನ್ನು ಕೊಲೆ ಮಾಡಿದ್ದಾರೆ. ನಂತರ ದೇಹವನ್ನು ತುಂಡರಿಸಿ ಬೇರೆ ಬೇರೆ ಸ್ಥಳದಲ್ಲಿ ಎಸೆದಿದ್ದರು ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲ ತಿಳಿದು ಬಂದಿದೆ.

ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನ

ಜೂನ್‌ 15ರಂದು ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯಲ್ಲಿ ಮೃತ ಮಹಿಳೆಯನ್ನು ಪಾಲಿ ನಿವಾಸಿ ಮುಸ್ಕಾನ್ ಎಂದು ಗುರುತಿಸಲಾಗಿದೆ ಎಂದು ಬಿಕಾನೇರ್ ಎಸ್‌ಪಿ ತೇಜಸ್ವಿನಿ ಗೌತಮ್ ಹೇಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿಗಳ ಸಂಚಲನ ದೃಶ್ಯದ ಸೆರೆಯಾಗಿತ್ತು. ಪೊಲೀಸರ ವಿಚಾರಣೆ ವೇಳೆ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಂಡ್ಯ: ಅನೈತಿಕ ಸಂಬಂಧ ಶಂಕೆ, 80 ವರ್ಷದ ದೊಡ್ಡಮ್ಮನನ್ನೇ ಕೊಂದ ಮಗ..!

Latest Videos
Follow Us:
Download App:
  • android
  • ios