Asianet Suvarna News Asianet Suvarna News

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸಾಕ್ಷಿ ಕೊಡಲು ಬಂದು ಪೊಲೀಸರಿಗೆ ತಾನಾಗಿಯೇ  ಸಿಕ್ಕಿಬಿದ್ದ ಸೂರಜ್ ರೇವಣ್ಣ!

ಅಸಹಜ ಲೈಂಗಿಕ ದೌರ್ಜನ್ಯದಡಿ ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 377,342,506 ಅಡಿ ಕೇಸ್ ದಾಖಲು ಮಾಡಲಾಗಿದೆ. ಬಂಧನ ಬಳಿಕ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆಯಿದೆ.

homosexuality case jds mlc suraj revanna arrested by hassan SEN police rav
Author
First Published Jun 23, 2024, 9:17 AM IST | Last Updated Jun 23, 2024, 9:17 AM IST

ಬೆಂಗಳೂರು(ಜೂ.23): ಯುವಕನೋರ್ವನಿಗೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಡಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ಅರೆಸ್ಟ್ ಮಾಡಲಾಗಿದೆ. ಕಳೆದ ರಾತ್ರಿ ಸೂರಜ್ ರೇವಣ್ಣ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಸೆನ್ ಠಾಣಾ ಪೊಲೀಸರು. ಸಂತ್ರಸ್ತನ ದೂರು ಆಧಾರಿಸಿ ನಿನ್ನೆ ರಾತ್ರಿ ಪೊಲೀಸರು ಸೂರಜ್ ರೇವಣ್ಣ ವಶಕ್ಕೆ ಪಡೆದಿದ್ದರು. ಮುಂಜಾನೆ ನಾಲ್ಕು ಗಂಟೆ ವರೆಗೂ ಸೂರಜ್ ರೇವಣ್ಣ ವಿಚಾರಣೆ ಮಾಡಿದ ಪೊಲೀಸರು ಇಂದು ಬೆಳಗ್ಗೆ ಬಂಧನ ಖಚಿತಪಡಿಸಿದ್ದಾರೆ. 

ತಾನಾಗೇ ಸಿಕ್ಕಿಬಿದ್ದ ಸೂರಜ್!

ತಮ್ಮನ್ನು ಐದು ಕೋಟಿಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಅನ್ನೋ ಕೇಸ್ ನಲ್ಲಿ ಸಾಕ್ಷಿ ನೀಡಲು ಬಂದಿದ್ದ ಸೂರಜ್. ಆಡಿಯೋ ರೆಕಾರ್ಡ್, ಫೋಟೋ ಹಾಗೂ ಇತರೆ ದಾಖಲೆ ನೀಡುವ ಸಲುವಾಗಿ ಸೆನ್ ಪೊಲೀಸ್ ಠಾಣೆಗೆ ಬಂದಿದ್ದರು.  ಬಂಧನ ಸಾಧ್ಯತೆ ನಿರೀಕ್ಷೆ ಮಾಡದೇ ತಗ್ಲಾಕಿಕೊಂಡ ಸೂರಜ್ ರೇವಣ್ಣ.  ಪ್ರಕರಣ ಸಂಬಂಧ ಮುಂಜಾನೆ ನಾಲ್ಕು ಗಂಟೆವರೆಗೆ ವಿಚಾರಣೆ ನಡೆಸಿದ್ದ ಪೊಲೀಸರು. ವಿಚಾರಣೆ ಬಳಿಕ ಹೊಳೆನರಸೀಪುರ ಗ್ರಾಮಾಂತರ ಪೊಲೀಸರಿಂದ ಸೂರಜ್ ರೇವಣ್ಣರನ್ನ ಬಂಧನವಾಗಿದೆ. ಪ್ರಕರಣದ ವಿಚಾರಣೆಗೆ ಸಕಲೇಶಪುರ ಡಿವೈಎಸ್ಪಿ ನೇಮಿಸಿದ್ದ ಎಸ್ಪಿ. ವಿಚಾರಣೆ ಬಳಿಕ ಸೂರಜ್ ರನ್ನ ಬಂಧಿಸಿದ ತನಿಖಾಧಿಕಾರಿ ಪ್ರಮೋದ್ ಕುಮಾರ್.

13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ; ತಡರಾತ್ರಿವರೆಗೆ ಮಂಕಾಗಿ ಕುಳಿತ ದರ್ಶನ್!

ಅಸಹಜ ಲೈಂಗಿಕ ದೌರ್ಜನ್ಯದಡಿ ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 377,342,506 ಅಡಿ ಕೇಸ್ ದಾಖಲು ಮಾಡಲಾಗಿದೆ. ಬಂಧನ ಬಳಿಕ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ. ಸೂರಜ್ ವಿಧಾನಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ  ಜನಪ್ರತಿನಿಧಿ ಕೋರ್ಟ್ ನಲ್ಲಿ ನಡೆಯೋ ಸಾಧ್ಯತೆಯಿದೆ. ಅದೇ ರೀತಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗುವ ಸಾಧ್ಯತೆ. ಒಂದು ವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆಯುವ ಸಾಧ್ಯತೆಯಿದೆ. ಸದ್ಯ ಕೇಸ್ ವರ್ಗಾವಣೆ ವಿಚಾರವಾಗಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿರುವ ಪೊಲೀಸರು.

Latest Videos
Follow Us:
Download App:
  • android
  • ios