ಹಳೇ ದ್ವೇಷ ಹಿನ್ನೆಲೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ 12 ದಿನದ ಬಳಿಕ ಯುವಕನ ಮೆದುಳು ನಿಷ್ಕ್ರಿಯಗೊಂಡ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ.
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್,
ಮಂಡ್ಯ (ಅ.22): ಹಳೇ ದ್ವೇಷ ಹಿನ್ನೆಲೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ 12 ದಿನದ ಬಳಿಕ ಯುವಕನ ಮೆದುಳು ನಿಷ್ಕ್ರಿಯ ಗೊಂಡ ಹೃದಯ ವಿದ್ರಾವಕ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಸಚಿನ್ ಹಲ್ಲೆಗೆ ಒಳಗಾಗಿದ್ದರು. ಬೆಂಗಳೂರಿನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಸಚಿನ್ ಊರ ಹಬ್ಬಕ್ಕಾಗಿ ಮಲ್ಲನಾಯಕನಹಳ್ಳಿ ಗ್ರಾಮಕ್ಕೆ ಕೆಲ ದಿನಗಳ ಹಿಂದೆ ಬಂದಿದ್ದಾರೆ. ಅಕ್ಟೋಬರ್ 10 ರಂದು ಸಚಿನ್ ಅಣ್ಣನ ಬಾಮೈದ ರಾಜು ಮತ್ತು ಸ್ನೇಹಿತರು ಸಚಿನ್ ಹತ್ಯೆಗೆ ಯತ್ನಿಸಿದ್ದಾರೆ. ರಾಜು ಹಾಗೂ ಆತನ ಸ್ನೇಹಿತರಾದ ಆಕಾಶ್, ನಿತಿನ್ ಎಂಬುವರು ರಾತ್ರಿ ವೇಳೆ ಅಟ್ಯಾಕ್ ಮಾಡಿ ಸಚಿನ್ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದರು. ಹಲ್ಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಶಂಕಿಸಲಾಗಿದೆ. ಸ್ಥಳೀಯರ ನೆರವಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮೂರು ದಿನ ಚಿಕಿತ್ಸೆ ಬಳಿಕ ಸಚಿನ್‌ರನ್ನು ಮಂಡ್ಯ ಮಿಮ್ಸ್ ಗೆ ರವಾನೆ ಮಾಡಲಾಗಿತ್ತು. 12 ದಿನದ ಬಳಿಕ ಹಲ್ಲೆಗೊಳಗಾದ ಸಚಿನ್ ಮೆದುಳು ನಿಷ್ಕ್ರಿಯ ವಾಗಿದೆ.
ನೋವಿನಲ್ಲೂ ಸಾರ್ಥಕ ಕಾರ್ಯಕ್ಕೆ ಮುಂದಾದ ಪೋಷಕರು: ಹಲ್ಲೆಗೊಳಗಾಗಿದ್ದ ಸಚಿನ್ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಘಟನೆ ನಡೆದ 12 ದಿನಗಳ ಬಳಿಕ ಸಚಿನ್ ಮೆದುಳು ನಿಷ್ಕ್ರಿಯಗೊಂಡಿದೆ. ಬ್ರೈನ್ ಡೆಡ್ ಬಳಿಕ ಮಗನ ಅಂಗಾಂಗ ದಾನಕ್ಕೆ ನಿರ್ದಾರ ಮಾಡಿದ ತಂದೆ ಲಿಂಗರಾಜು. ದೇಹ ಸುಟ್ಟು ಬೂದಿಯಾಗುವ ಬದಲು ನಾಲ್ಕು ಜನಕ್ಕೆ ಅನುಕೂಲವಾಗಲಿ ಎಂದು ಈ ನಿರ್ಧಾರ ಮಾಡಿದ್ದಾರೆ. ಅಂಗಾಂಗ ದಾನ ಮಾಡಲು ಮಿಮ್ಸ್ ನಿಂದ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳು ಸಚಿನ್‌ರನ್ನು ರವಾನೆ ಮಾಡಲಾಗಿದೆ.
Belagavi: ಪತಿ ಸಾವಿನಿಂದ ಮನನೊಂದು ಒಂದೂವರೆ ವರ್ಷದ ಮಗಳ ಹತ್ಯೆಗೈದು ಪತ್ನಿ ನೇಣಿಗೆ
ಘಟನೆ ನಡೆದು 12 ದಿನ ಕಳೆದ್ರೂ ಆರೋಪಿಗಳನ್ನ ಬಂಧಿಸದ ಪೊಲೀಸರು: ಸಚಿನ್ ದುಷ್ಕರ್ಮಿಗಳಿಂದ ಚಾಕು ಇರಿತಕ್ಕೊಳಗಾದ ಬಳಿಕ ಮಂಡ್ಯದ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಆರೋಪಿಗಳ ಫೋಟೋ ಸಹಿತ ಮಾಹಿತಿ ನೀಡಿದ್ರು ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಘಟನೆ ನಡೆದು 12 ದಿನ ಕಳೆದರೂ ಆರೋಪಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಪೊಲೀಸರ ನಿರ್ಲಕ್ಷ್ಯತೆಗೆ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದು, ಮಗ ದುಸ್ಥಿತಿಗೆ ಕಾರಣವಾದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Koppal: ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿ: 10 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
