ಕುಡಿದ ಅಮಲಿನಲ್ಲಿ ಕ್ರಿಮಿನಾಶಕ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಪತಿಯ ಸಾವಿನಿಂದ ಮನನೊಂದು ಒಂದೂವರೆ ವರ್ಷದ ಮಗಳ ಹತ್ಯೆಗೈದು ಪತ್ನಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟ‌ನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ (ಅ.22): ಕುಡಿದ ಅಮಲಿನಲ್ಲಿ ಕ್ರಿಮಿನಾಶಕ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಪತಿಯ ಸಾವಿನಿಂದ ಮನನೊಂದು ಒಂದೂವರೆ ವರ್ಷದ ಮಗಳ ಹತ್ಯೆಗೈದು ಪತ್ನಿ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟ‌ನೆ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 20ರ ಮಧ್ಯಾಹ್ನ ಮಲ್ಲಹೋಳ ಗ್ರಾಮದ ಮನೆಯಲ್ಲಿ ವಿಷ ಸೇವಿಸಿದ್ದ ಹೊಳೆಪ್ಪ ಮಸ್ತಿಯನ್ನು ಚಿಕಿತ್ಸೆಗಾಗಿ ಯಮಕನಮರಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. 

ಆದರೆ ಚಿಕಿತ್ಸೆ ಫಲಿಸದೇ ಹೊಳೆಪ್ಪ (25) ಮೃತಪಟ್ಟಿದ್ದ. ಮಾರನೇ ದಿನ ತವರು ಮನೆ ವಂಟಮೂರಿಗೆ ಬಂದಿದ್ದ ಹೊಳೆಪ್ಪ ಪತ್ನಿ ವಾಸಂತಿ (20) ಅಲ್ಲಿನ ಹೊರವಲಯದ ಗದ್ದೆಗೆ ಎರಡನೇ ಮಗಳನ್ನು ಕರೆದೊಯ್ದಿದ್ದಳು. ಮೊದಲು ಕತ್ತು ಹಿಸುಕಿ ಒಂದೂವರೆ ವರ್ಷದ ಮಗಳು ಮಾನಸಳನ್ನು ಹತ್ಯೆಗೈದ ವಾಸಂತಿ, ಬಳಿಕ ಅಲ್ಲಿಯೇ ಇದ್ದ ಮರಕ್ಕೆ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Koppal: ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿ: 10 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ

ಪತಿಗೆ 6 ವರ್ಷ ಜೈಲು ಶಿಕ್ಷೆ: ಪತ್ನಿ ಸಾಯಲು ಪ್ರಚೋದನೆ ನೀಡಿದ ಪತಿಗೆ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು 6 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ನಂಜನಗೂಡು ತಾಲೂಕು ಹಲ್ಲರೆ ಗ್ರಾಮದ ಮಹದೇವನಾಯಕ ಅವರ ಪುತ್ರ ಮಹೇಶ ಶಿಕ್ಷೆಗೆ ಗುರಿಯಾದವ. ಅದೇ ಗ್ರಾಮದ ಮಣಿ ಜೊತೆ ಮಹೇಶ್‌ ಮದುವೆಯಾಗಿದ್ದು, ಕುಡಿತದ ಚಟಕ್ಕೆ ಬಿದ್ದಿದ್ದ ಮಹೇಶ, ಪ್ರತಿನಿತ್ಯ ಕುಡಿದು ಬಂದು ಪತ್ನಿಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಅಲ್ಲದೆ, ಕುಡಿಯಲು ಹಣ ನೀಡುವಂತೆ ಪೀಡಿಸಿ, ‘ನೀನು ಇರುವುದಕ್ಕಿಂತ ಸಾಯುವುದೇ ಮೇಲೂ, ಎಲ್ಲದರೂ ಹೋಗಿ ಸಾಯಿ’ ಎಂದು ದುಷ್ಪೇರಣೆ ಮಾಡುತ್ತಿದ್ದ. ಇದರಿಂದ ಮನನೊಂದ ಮಣಿ 2017ರ ಫೆ.1 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. 

Belagavi: ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾದ ವೃದ್ಧ ಪತಿ

ಈ ಸಂಬಂಧ ಮಹೇಶನ ವಿರುದ್ಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಪೊಲೀಸರು, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು, ಸಾಕ್ಷ್ಯಾಧಾರಗಳಿಂದ ಮಹೇಶನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 6 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್‌ ವಾದ ಮಂಡಿಸಿದ್ದರು.