Koppal: ಮದುವೆ ದಿಬ್ಬಣದ ಮಿನಿ ಬಸ್ ಪಲ್ಟಿ: 10 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ
ತಾಲ್ಲೂಕಿನ ಶಹಾಪುರ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದುವೆ ದಿಬ್ಬಣದ ಮಿನಿ ಬಸ್ ರಸ್ತೆ ಬದಿಯ ಗುಂಡಿಯಲ್ಲಿ ಉರುಳಿ ಬಿದ್ದಿದ್ದು 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಕೊಪ್ಪಳ (ಅ.22): ತಾಲ್ಲೂಕಿನ ಶಹಾಪುರ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದುವೆ ದಿಬ್ಬಣದ ಮಿನಿ ಬಸ್ ರಸ್ತೆ ಬದಿಯ ಗುಂಡಿಯಲ್ಲಿ ಉರುಳಿ ಬಿದ್ದಿದ್ದು 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಯಾದಗಿರಿ ಜಿಲ್ಲೆಯ ದಂಡಗುಂಡ ಗ್ರಾಮದಿಂದ ಆಗಮಿಸುತ್ತಿದ್ದ ಮಿನಿ ಬಸ್, ತುಮಕೂರಿನ ಸಿದ್ದರಾಮಯ್ಯನ ಪಾಳ್ಯಕ್ಕೆ ಹೊರಟಿತ್ತು. ರಭಸವಾಗಿ ಬಸ್ ಚಲಾಯಿಸುತ್ತಿದ್ದ ವೇಳೆ ಪಲ್ಟಿಯಾದ ಮಿನಿ ಬಸ್‌ನಲ್ಲಿ ನವಜೋಡಿಗಳು ಕೂಡಾ ಇದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಾಗಿಸಲಾಗಿದೆ. ಸದ್ಯ ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳವಿಗೆ ಯತ್ನಿಸಿದ ಆರೋಪಿಗಳ ಪರಾರಿ ಸಂದರ್ಭ ಕಾರು ಪಲ್ಟಿ: ಕಂಬಳಿ ಮಾರುವ ನೆಪದಲ್ಲಿ ಕಾರಿನಲ್ಲಿ ಮನೆಯಂಗಳಕ್ಕೆ ಬಂದು ಮನೆಯೊಡತಿಯ ಸರ ಕಳವಿಗೆ ಯತ್ನಿಸಿ ಪರಾರಿಯಾಗಲು ಹೊರಟಾಗ ಕಾರು ಪಲ್ಟಿಯಾಗಿ ಕಳ್ಳರು ಗಾಯಗೊಂಡ ಘಟನೆ ಗುರುವಾರ ಕಡಬ ತಾಲೂಕಿನ ಕಾಣಿಯೂರು ಬಳಿ ನಡೆದಿದೆ. ಆರೋಪಿಗಳನ್ನು ಮಂಗಳೂರು ಪೊಳಲಿ ಅಟ್ಟೂರು ನಿವಾಸಿಗಳಾದ ರಮೀಶುದ್ದೀನ್ (25) ಹಾಗೂ ರಫೀಕ್ (30) ಎಂದು ಗುರುತಿಸಲಾಗಿದೆ. ಕಂಬಳಿ ಮಾರುವ ನೆಪದಲ್ಲಿ ಕಾರೊಂದರಲ್ಲಿ ದೋಳ್ಪಾಡಿ ಗ್ರಾಮದ ಕಟ್ಟನಿವಾಸಿ ಕಿಟ್ಟಎಂಬವರ ಮನೆಗೆ ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಮನೆಯಲ್ಲಿ ಮನೆಯ ಒಡತಿ ಮಾತ್ರ ಇರುವುದನ್ನು ಗಮನಿಸಿ ಕಂಬಳಿ ಖರೀದಿಸುವಂತೆ ಒತ್ತಾಯಿಸಿದ್ದಾರೆ.
ಯಾದಗಿರಿ: ಕಾಲುವೆಯಲ್ಲಿ ಯುವಕನ ಶವ ಪತ್ತೆ, ಸಂಶಯಾಸ್ಪದ ಸಾವು
ಕಂಬಳಿ ಬೆಡ್ ಶೀಟ್‌ಗಳನ್ನು ಮಹಿಳೆ ನೋಡುತ್ತಿದ್ದಂತೆ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಲು ಕಳ್ಳರು ಕೈ ಹಾಕಿದ್ದಾರೆ. ಇದರಿಂದ ತಪ್ಪಿಸಿಕೊಂಡ ಮಹಿಳೆ ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಆಗಮಿಸಿದಾಗ ಕಳ್ಳರು ತಾವು ಬಂದ ಕಾರಿನಲ್ಲಿ ತೆರಳಿದ್ದಾರೆ. ದೋಳ್ಪಾಡಿಯಿಂದ ಪುಣ್ಚತ್ತಾರು ಕಡೆ ಸಾಗುವಾಗ ಸಾರ್ವಜನಿಕರು ಅಡ್ಡಗಟ್ಟಿದ್ದಾರೆ . ಇಲ್ಲಿಂದ ಯೂಟರ್ನ್ ಹೊಡೆದ ಕಳ್ಳರು ನೇರವಾಗಿ ಕಾಣಿಯೂರು ಕೂಡು ರಸ್ತೆ ದಾರಿಯಲ್ಲಿ ಸಾಗಿದ್ದಾರೆ. ಅಲ್ಲಿ ಕೂಡಾ ಸಾರ್ವಜನಿಕರು ಸೇರಿದ್ದನ್ನು ಗಮನಿಸಿ ವೇಗವಾಗಿ ಕಾರು ಚಲಾಸಿಕೊಂಡು ಹೋಗಿದ್ದಾರೆ ಸಾರ್ವಜನಿಕರು ಬೆನ್ನಟ್ಟುತ್ತಿದ್ದಂತೆ ಕೂಡು ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ಪರಿಣಾಮ ಕಳ್ಳರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದು ಕೊಲೆನಾ? ಅಹಜ ಸಾವಾ? ಅನುಮಾನಕ್ಕೆ ಎಡೆ ಮಾಡಿಕೊಟ್ಟ ಸಿಸಿಟಿವಿ ದೃಶ್ಯಗಳು!
ಟ್ರಾಕ್ಟರ್ ಮುಗುಚಿ ರೈತ ಸಾವು: ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಮುಗುಚಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಧಾರುಣ ಘಟನೆ ಮಂಗಳವಾರ ನಡೆದಿದೆ. ಕೊತ್ತಲವಾಡಿ ಗ್ರಾಮದ ಶಿವಕುಮಾರ್ (30) ಮೃತಪಟ್ಟದುರ್ದೈವಿ. ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ತಕ್ಷಣವೇ ಚಿಕಿತ್ಸೆಗೆ ತೆರಕಣಾಂಬಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರುತ್ತಿದ್ದ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ತಮ್ಮ ಜಮೀನಿನಲ್ಲಿ ಉಳುಮೆ ಮಾಡುವಾಗ ಹೊಲದ ಏರಿಯಿಂದ ಮತ್ತೊಂದು ಜಮೀನಿಗೆ ಎರಡು ಪಲ್ಟಿಹೊಡೆದಿದೆ ಎನ್ನಲಾಗುತ್ತಿದೆ. ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ಶಿವಕುಮಾರ್‌ಗೆ ಪತ್ನಿ, ಆರು ತಿಂಗಳ ಮಗು ಇದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟುವಂತಿತ್ತು. ಈ ಘಟನೆ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ.