Asianet Suvarna News Asianet Suvarna News

ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ, ಚಾಕು ಇರಿದ ವ್ಯಕ್ತಿ!

ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ  ನಡೆದಿದೆ.

man who stabbed a woman in Belagavi gow
Author
First Published Oct 12, 2023, 9:40 AM IST

ಬೆಳಗಾವಿ (ಅ.12): ತನ್ನ ಬಳಿ ನಾನು ಸಾಲ ತಗೊಳಲ್ಲ ಎಂದ ಮಹಿಳೆಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ  ನಡೆದಿದೆ. ಚಾಕು ಇರಿದ ವ್ಯಕ್ತಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ನಯನಾ ಪ್ರವೀಣ ಶೆಟ್ಟಿ(34) ಚಾಕು ಇರಿತಕ್ಕೊಳಗಾದ ಮಹಿಳೆಯಾಗಿದ್ದಾರೆ. ಮಲ್ಲಿಕಾರ್ಜುನ ಕುಂಬಾರ ಚಾಕು ಇರಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ.

ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!

ಕಳೆದ ವರ್ಷ ನಯನಾ ಪತಿಗೆ ಆರೋಪಿ ಮಲ್ಲಿಕಾರ್ಜುನ್ 1 ಲಕ್ಷ ಸಾಲ ನೀಡಿದ್ದ, ನಯನಾ ಪತಿ ಪ್ರವೀಣ್ ಸಾಲ ಪಡೆದ ಹಣವನ್ನು ಮತ್ತೆ ಮರಳಿ ತೀರಿಸಿದ್ದರು. ಮತ್ತೆ ಎನಾದರೂ ಸಾಲ ಬೇಕಾದರೆ ತೆಗೆದುಕೊಳ್ಳಿ ಎಂದು ಆರೋಪಿ ಮಲ್ಲಿಕಾರ್ಜುನ್ ತಿಳಿಸಿದ್ದ. ನೀವು ಕೊಟ್ಟ ಹಣಕ್ಕೆ ಜಾಸ್ತಿ ಬಡ್ಡಿ ತೆಗೆದುಕೊಳ್ತಿರಿ, ನಮಗೆ ಸಾಲ ಬೇಡ ಎಂದು  ನಯನಾ ಹೇಳಿದ್ದರು.

ಶಾಸಕ ಮುನಿರತ್ನ ಹನಿಟ್ರ್ಯಾಪ್‌ಗೆ ಬಿಬಿಎಂಪಿ ಆಯುಕ್ತೆ ತುಳಸಿ

ಇದೇ ಕಾರಣಕ್ಕೆ ನಯನಾ ಮೇಲೆ ಸಿಟ್ಟಾಗಿದ್ದ ಆರೋಪಿ ಮಲ್ಲಿಕಾರ್ಜುನ್ ಕಳೆದ 2 ದಿನಗಳ ಹಿಂದೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಮನೆಗೆ ಬಂದು ವಿಷ ಸೇವಿಸಿದ್ದನು. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Follow Us:
Download App:
  • android
  • ios