ಶಾಸಕ ಮುನಿರತ್ನ ಹನಿಟ್ರ್ಯಾಪ್‌ಗೆ ಬಿಬಿಎಂಪಿ ಆಯುಕ್ತೆ ತುಳಸಿ ಮದ್ದಿನೇನಿ ಪತಿಯೇ ಕಾರಣ: ವಿದ್ಯಾ ಹಿರೇಮಠ ಆರೋಪ
ಶಾಸಕ ಮುನಿರತ್ನ ಅವರಿಂದ ಹನಿಟ್ರ್ಯಾಪ್‌ಗೆ ಒಳಗಾಗುವುದಕ್ಕೆ ಬಿಬಿಎಂಪಿ ಮಾಜಿ ಹಣಕಾಸು ಆಯುಕ್ತೆ ತುಳಸಿ ಮದ್ದಿನೇನಿ ಅವರ ಪತಿ ರವಿಶಂಕರ್ ಕಾರಣವೆಂದು ವಿದ್ಯಾ ಹಿರೇಮಠ್ ಆರೋಪಿಸಿದ್ದಾರೆ.
ಬೆಂಗಳೂರು (ಅ.11): ರಾಜ್ಯ ರಾಜಧಾನಿಯ ಸ್ಥಳೀಯ ಆಡಳಿತ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಿಂದಿನ ಹಣಕಾಸು ವಿಭಾಗದ ಆಯುಕ್ತೆ ತುಳಸಿ ಮದ್ದಿನೇನಿ ಅವರ ಪತಿ ರವಿಶಂಕರ್ ಅವರ ಮೋಸದ ವಿರುದ್ಧ ನಾನು ದೂರು ಕೊಟ್ಟಿದ್ದರಿಂದಲೇ, ಶಾಸಕ ಮುನಿರತ್ನ ಅವರು ನನಗೆ ವಂಚನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ವಿದ್ಯಾ ಹಿರೇಮಠ್ ಹೇಳಿಕೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಮುನಿರತ್ನ ಅವರು ನನಗೆ ಹ್ಯಾನಿಟ್ರ್ಯಾಪ್ ಮಾಡಿಸಿದ್ದಾರೆ. ರಾಜ್ಯದ ಹಿರಿಯ ಐಎಎಸ್ (IAS) ಅಧಿಕಾರಿ ತುಳಸಿ ಮದ್ದಿನೇನಿ ಅವರ ಪತಿ ವಿರುದ್ದ ನಾನು ಕೇಸ್ ದಾಖಲು ಮಾಡಿದ್ದೆನು. ಅವರ ಪತಿ ಐಎಫ್‌ಎಸ್ (IFS)ಅಧಿಕಾರಿ ರವಿಶಂಕರ್ ನನ್ನನ್ನು ಮದುವೆ ಆಗುತ್ತೇನೆಂದು ಮೋಸ ಮಾಡಿದ್ದಾರೆ. ರವಿಶಂಕರ್ ಬಹಳ ವರ್ಷಗಳಿಂದ ನನಗೆ ಪರಿಚಯ. ಮದುವೆಯಾಗುತ್ತೇನೆಂದು ನನಗೆ ಮೋಸ ಮಾಡಿದ್ದರು.
ಶಾಸಕ ಮುನಿರತ್ನಗೆ ಡಬಲ್ ಟ್ರಬಲ್: ಸರ್ಕಾರದ ಅನುದಾನವೂ ಇಲ್ಲ, ವಿದ್ಯಾ ಹಿರೇಮಠ್‌ಳಿಂದ ಮರ್ಯಾದೆಯೂ ಇಲ್ಲ
ರವಿಶಂಕರ್ ವಿರುದ್ದ ನಾನುಕೇಸ್ ದಾಖಲು ಮಾಡಿದ್ದೆನು. ಬಳಿಕ ನನಗೆ ಮೂವರು ಮಹಿಳೆಯರು, ಪುರುಷರು ಪರಿಚಯ ಆದರು. ನಾನು ಪರಿಚಯವಾದ ಸ್ನೇಹಿತರೊಂದಿಗೆ ಕನಕಪುರ ಬಳಿ ರೆಸಾರ್ಟ್‌ಗೆ ಹೋಗಿದ್ದೆವು. ಆಗ ನನ್ನೊಂದಿಗೆ ರೆಸಾರ್ಟ್‌ಗೆ ಬಂದಿದ್ದ ಮಹಿಳಾ ಸ್ನೆಹಿತರು ನನಗೆ ಜ್ಯೂಸ್ ತಂದುಕೊಟ್ಟರು. ಅವರೊಂದಿಗೆ ನಾನು ಜ್ಯೂಸ್ ಕುಡಿದೆನು. ಆದರೆ, ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಕೊಟ್ಟಿರುವುದು ನನಗೆ ಗೊತ್ತೇ ಇರಲಿಲ್ಲ. ನಾನು ಮತ್ತಿನಲ್ಲಿ ಬಿದ್ದಿರುವಾಗ ಬೇರೊಬ್ಬ ವ್ಯಕ್ತಿಯ ಜತೆ ಮಲಗಿರುವ ಹಾಗೆ ಪೊಟೊಸ್ ತೆಗೆದಿದ್ದಾರೆ. ನನ್ನನ್ನು ಹನಿಟ್ರ್ಯಾಪ್ ಪ್ರಕರಣಕ್ಕೆ ಬಳಸಿಕೊಂಡಿದ್ದಾರೆ.
ನನ್ನೊಂದಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆ ವ್ಯಕ್ತಿ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಹನಿಟ್ರ್ಯಾಪ್ ಬಗ್ಗೆ ನನ್ನ ವಿರುದ್ದ ಆ ವ್ಯಕ್ತಿ ದೂರು ನೀಡಿದ್ದನು. ಬಳಿಕ ಅನ್ನಪೂರ್ಣೇಶ್ವರಿ ನಗರ ಇನ್ಸ್ಪೆಕ್ಟರ್ ಲೋಹಿತ್ ಅವರು, ನನ್ನನ್ನು ಅರೆಸ್ಟ್ ಮಾಡಿದರು. ನನ್ನನ್ನು ಬಂಧನ ಮಾಡಿದ ಬಳಿಕ ನ್ಯಾಯಲಯಕ್ಕೆ ಹಾಜರುಪಡಿಸದೆ, ಸೀದಾ ಪೊಲೀಸರು ಅಂದಿನ ತೋಟಗಾರಿಕಾ ಸಚಿವ ಮುನಿರತ್ನ ಮನೆಗೆ ಕರೆದುಕೊಂಡು ಹೋದರು.
ಡಿ.ಕೆ.ಶಿವಕುಮಾರ್ ಕಾಲಿಗೆ ಬಿದ್ದ ಶಾಸಕ ಮುನಿರತ್ನ: ಅನುದಾನ ಬಿಡುಗಡೆಗೆ ಮನವಿ ಸಲ್ಲಿಕೆ
ಮುನಿರತ್ನ ಅವರ ಮನೆಯಲ್ಲಿ ನಾನು IFS ಅಧಿಕಾರಿ ವಿರುದ್ದ ದಾಖಲು ಮಾಡಿರುವ ಕೇಸ್ ವಾಪಸ್ಸು ಪಡೆಯುವಂತೆ ಆಮಿಷ ಒಡ್ಡಿದರು. ಆಗ ಒಂದು ಫ್ಲ್ಯಾಟ್, ಹಣ ಹಾಗೂ ವಿಧಾನ ಪರಿಷತ್ ಟಿಕೆಟ್ ನೀಡುಬವ ಆಫರ್ ನೀಡಿದರು. ಆದರೆ, ಇದ್ಯಾವುದಕ್ಕೂ ನಾನು ರಾಜಿಯಾಗಿಲ್ಲ. ಬಳಿಕ ಮುನಿರತ್ನ ಅವರು ವಿಕಾಸಸೌಧದ ತಮ್ಮ ಕಚೇರಿಗೆ ಕರೆಸಿಕೊಂಡರು. ಅಲ್ಲಿ ಚಿನ್ನ, ರನ್ನ, ಸ್ಪೀಟ್ ಹಾರ್ಟ್ ಎಂದು ಹೇಳುತ್ತಾ ಕೇಸ್ ವಾಪಸ್ ಪಡೆಯಲು ತಿಳಿಸಿದರು. ಆದರೂ ನಾನು, ಈ ಪ್ರಕರಣ ತನಿಖೆ ನಡೆಸುವಂತೆ ಮುನಿರತ್ನ ವಿರುದ್ಧ ಜನಪತ್ರಿನಿಧಿಗಳ ವಿಶೇಷ ಕೋರ್ಟ್‌ಗೆ ದೂರು ಕೊಟ್ಟಿದ್ದೆನು. ಆಗ ಮುನಿರತ್ನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಬಾರದು ಅಂತ ಮಿಡಿಯಾ ಇಂಜೆಕ್ಷನ್ ತಂದರು.