Asianet Suvarna News Asianet Suvarna News

ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!

ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ ನೀಡಿದ ತಾಯಿ, ತಾಯ್ತನಕ್ಕೆ ಕಳಂಕ ಎಂದು ಹೈಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಈಕೆಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ತನ್ನ ಎದುರಗಲ್ಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಈ ಮಹತಾಯಿ ಅವಕಾಶ ನೀಡಿದ್ದಳು.

Kerala high court reject mother Anticipatory bail who help stepfather to rape her minor daughter ckm
Author
First Published Oct 11, 2023, 4:10 PM IST

ಕೊಚ್ಚಿ(ಅ.11) ಮಕ್ಕಳನ್ನು ಸುರಕ್ಷಿತವಾಗೆ ಬೆಳೆಸುವಲ್ಲಿ ತಾಯಿ ಪಾತ್ರ ಮಹತ್ವದ್ದು. ತನ್ನ ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಾಳೆ. ಹೆಜ್ಜೆ ಹೆಜ್ಜೆಗೂ ತಾಯಿ ತನ್ನ ಕೈಲಾದ ಭದ್ರತೆಯನ್ನು ನೀಡುತ್ತಾ ಬೆಳೆಸುತ್ತಾಳೆ. ಆದರೆ ಈ ತಾಯ್ತಿತನಕ್ಕೆ ಕಳಂಕ ತರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ತನ್ನ ಎದುರಲ್ಲೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮಗಳ ಮಲತಂದೆಗೆ ಅವಕಾಶ ನೀಡಿದ್ದಾಳೆ. ಇಷ್ಟೇ ಅಲ್ಲ ಮಲತಂದೆ ಬೇಡಿಕೆ ಈಡೇರಿಸುವಂತೆ ತನ್ನ ಮಗಳಿಗೆ ತಾಕೀತು ಮಾಡಿದ ವಿಚಿತ್ರ ಹಾಗೂ ಭೀಕರ ಘಟನೆ ನಡೆದಿದೆ. ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಕೇರಳ ಹೈಕೋರ್ಟ್ ಮೋರೆ ಹೋಗಿದ್ದ ತಾಯಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ. ಈ ಆರೋಪ ಸಾಬೀತಾದರೆ ತಾಯ್ತನತಕ್ಕೆ ಕಳಂಕ ಎಂದಿದೆ.

ಮಹಿಳೆಯ ಮೊದಲ ಪತಿ ಮೃತಪಟ್ಟ ಬಳಿಕ ಬೇರೊಬ್ಬನ ಜೊತೆ ಪ್ರೀತಿ ಶುರುವಾಗಿದೆ. ಮಹಿಳೆಗೆ ಅಪ್ರಾಪ್ತ ವಯಸ್ಸಿನ ಮಗಳಿದ್ದಾಳೆ. ತನ್ನ ಲೈಂಗಿಕ ಬಯಕೆ, ಪ್ರೀತಿ ಪ್ರೇಮ ಅನ್ನೋ ಕಾರಣಕ್ಕೆ ಆತನ ಜೊತೆ ಸಂಸಾರ ಶುರುಮಾಡಲು ನಿರ್ಧರಿಸಿದ್ದಾಳೆ. ಏನೂ ಅರಿಯದ ಅಪ್ರಾಪ್ರ ಮಗಳು ಮಲತಂದೆಯ ನಡೆಯಿಂದ ದಿನದಿಂದ ದಿನಕ್ಕೆ ಮಾನಸಿಕವಾಗಿ ಕುಗ್ಗಿದ್ದಾಳೆ. ಕಾರಣ ತಾಯಿ ಜೊತೆಗೆ ಲೈಂಗಿಕ ಬಯಕೆ ಬಳಿಕ ಪ್ರತಿ ದಿನ ಅಪ್ರಾಪ್ತ ಮಗಳನ್ನು ಬಳಸಿಕೊಳ್ಳಲು ಮುಂದಾಗಿದ್ದಾನೆ.

ಇಬ್ಬರು ವ್ಯಕ್ತಿಗಳ ಜೊತೆ ನಗ್ನವಾಗಿದ್ದ ಅಪ್ರಾಪ್ತ ಸಹೋದರಿಯರ ಹಾರೆಯಲ್ಲಿ ಹತ್ಯೆಗೈದ ಅಕ್ಕ!

ಮಲತಂದೆಗೆ ತನ್ನ ಮಗಳ ಮೇಲೆ ಅತ್ಯಾಚಾರ, ಲೈಂಗಿಕ ಬಯಕೆ ತೀರಿಸಿಕೊಳ್ಳಲು ಖುದ್ದು ತಾಯಿಯೇ ಮುಂದೆ ನಿಂತಿದ್ದಾಳೆ. ತನ್ನ ಎದುರಲ್ಲೇ ಮಲತಂದೆ ಮಗಳ ಮೇಲೆ ಲೈಂಗಿಕ ಬಯಕೆ ತೀರಿಸಿಕೊಂಡಿದ್ದಾನೆ. ಈ ವಿಚಾರ ಬಯಲಾದ ಬೆನ್ನಲ್ಲೇ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ. ಇತ್ತ ಮಲತಂದೆ ನಾಪತ್ತೆಯಾಗಿದ್ದರೆ, ಈಕೆ ನಿರೀಕ್ಷಣಾ ಜಾಮೀನಿಗೆ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾಳೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಗೋಪಿನಾಥ್, ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಹೆತ್ತ ತಾಯಿ ಎರಡನೇ ಆರೋಪಿಯಾಗಿದ್ದರೆ, ಮೊದಲ ಆರೋಪಿ ಮಲತಂದೆ. ಹೀಗಾಗಿ ಹೆತ್ತ ತಾಯಿಗೆ ಜಾಮೀನು ನೀಡಿದರೆ, ಈಕೆ ತನ್ನ ಮಗಳ ಮೇಲೆ ಪ್ರಭಾವ ಬೀರಿ ತನಗೆ ಬೇಕಾದ ರೀತಿಯಲ್ಲಿ ಸಾಕ್ಷ್ಯ ಹೇಳಿಸುತ್ತಾಳೆ. ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಹೆತ್ತ ತಾಯಿ ಮೇಲಿನ ಆರೋಪ ಸಾಬೀತಾದರೆ, ಈಕೆ ತಾಯ್ತನಕ್ಕೆ ಕಳಂಕ ಎಂದು ಕೇರಳ ಹೈಕೋರ್ಟ್ ಹೇಳಿದೆ. ಈಗಾಗಲೇ ಸಂತ್ರಸ್ತೆ ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. 

ಅಪ್ರಾಪ್ತೆ ಬಾಲಕಿ ಮದ್ವೆಯಾಗಿ ಗರ್ಭಿಣಿ ಮಾಡಿದ ಯುವಕ, ಪೋಕ್ಸೊ ಕೇಸ್‌ಗೆ ಹೆದರಿ ಆತ್ಮಹತ್ಯೆಗೆ ಶರಣಾದ!

Follow Us:
Download App:
  • android
  • ios