Asianet Suvarna News Asianet Suvarna News

ತಂಗಿ ಮೀಟ್ ಆಗಿದ್ದಕ್ಕೆ ಹೆಂಡತಿಯನ್ನು ಬೈಕ್‌ಗೆ ಕಟ್ಟಿ ದರದರನೆ ಎಳೆದೊಯ್ದ ಗಂಡ!

ಪತಿ ವಿರೋಧದ ನಡುವೆ ತಂಗಿ ಭೇಟಿಯಾದ ಪತಿಗೆ ಗಂಡ ನೀಡಿದ ಶಿಕ್ಷೆ ಮನು ಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಪತ್ನಿಯನ್ನು ಬೈಕ್ ಹಿಂದೆ ಕಟ್ಟಿದ ದರದರನೇ ಎಳೆದೊಯ್ದಿದ್ದಾನೆ. 

Man tied wife legs behind bike and drags for punishment in Rajasthan ckm
Author
First Published Aug 13, 2024, 3:58 PM IST | Last Updated Aug 13, 2024, 4:02 PM IST

ಜೈಪುರ(ಆ.13) ಇವನೆಂತಾ ಗಂಡ? ಹೆಂಡತಿಯನ್ನು ತನ್ನ ಬೈಕ್ ಹಿಂದೆ ಕಟ್ಟಿ ಕಲ್ಲು ಮಣ್ಣುಗಳ ಪ್ರದೇಶದಲ್ಲಿ ದರದರನೆ ಎಳೆದೊಯ್ದು ವಿಕೃತಿ ಮರೆದಿದ್ದಾನೆ. ಪತಿ ವಿರೋಧದ ನಡುವೆ ತಂಗಿಯನ್ನು ಭೇಟಿಯಾಗಿದ್ದಾಳೆ ಅನ್ನೋ ಕಾರಣಕ್ಕೆ ಈ ರೀತಿ ಶಿಕ್ಷೆ ನೀಡಿದ್ದಾರೆ. ತೀವ್ರ ನೋವು, ಗಾಯಗಳಿಂದ ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಈತ ಕ್ರೂರಿಯನ್ನು ಪತ್ತೆ ಹಚ್ಚಿ ಬಂಧಿಸಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ 

32 ವರ್ಷದ ಪತಿ ಪ್ರೇಮರಾಮ್ ಮೇಘ್ವಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಪ್ರೇಮರಾಮ್ ತನ್ನ ಪತ್ನಿಯ ಕಾಲುಗಳನ್ನು ಬೈಕ್ ಹಿಂಭಾಗಕ್ಕೆ ಕಟ್ಟಿದ್ದಾನೆ. ಇದಕ್ಕೂ ಮೊದಲು ತೀವ್ರವಾಗಿ ಥಳಿಸಿದ್ದಾನೆ. ಬಳಿಕ ಪತ್ನಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದಿದ್ದಾನೆ. ಈತ ಎಳೆದೊಯ್ದು ದಾರಿಯಲ್ಲಿ ಕೆಲವರು ಸಾಗಿದ್ದಾರೆ. ಇತ್ತ ಮಹಿಳೆ ಚೀರಾಡುತ್ತಾ ಕಾಪಾಡಲು ಅಂಗಲಾಚಿದ್ದಾಳೆ. ಈ ವಿಡಿಯೋ ಮಾಡುತ್ತಿದ್ದಾತ ಸೇರಿದಂತೆ ಇತರ ಕೆಲವರು ಪ್ರೇಮರಾಮ್ ತಡೆದಿದ್ದಾರೆ. ಬಳಿಕ ಮಹಿಳೆಯನ್ನು ರಕ್ಷಿಸಿದ್ದಾರೆ.

BMW ಕಾರಿನಲ್ಲಿ ಯುವಕನ ಫೋಟೋ ನೋಡಿ ಹುಟ್ಟಿತು ಪ್ರೀತಿ, ಮದ್ವೆ ಬೆನ್ನಲ್ಲೇ ಮುಳ್ಳಾಗಿ ಚುಚ್ಚಿತು ಅದೇ ಕಾರು!

ಘಟನೆ ಕುರಿತು ನಾಗೌರ್ ಸೂಪರಿಡೆಂಟ್ ಪೊಲೀಸ್ ನಾರಾಯಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ತಂಗಿ ಭೇಟಿಯಾಗಲು ಪತಿ ಬಳಿ ಮನವಿ ಮಾಡಿದ್ದಾಳೆ. ಆದರೆ ಪತಿ ನಿರಾಕರಿಸಿದ್ದಾನೆ. ಪತಿ ನಿರಾಕರಣೆ ಕುರಿತು ಅರಿತ ಪತ್ನಿಯ ತಂಗಿ ನೇರವಾಗಿ ಭೇಟಿಯಾಗಲು ಆಗಮಿಸಿದ್ದಾಳೆ. ತನ್ನ ಮಾತು ಧಿಕ್ಕರಿಸಿ ತಂಗಿಯನ್ನು ಭೇಟಿಯಾಗಿದ್ದಿ ಎಂದು ಥಳಿಸಿದ್ದಾನೆ. ಬಳಿಕ ಬೈಕ್‌ಗೆ ಕಟ್ಟಿ ಎಳೆದಿದ್ದಾನೆ ಎಂದು ನಾರಾಯಣ್ ಸಿಂಗ್ ಹೇಳಿದ್ದಾರೆ.

ಘಟನೆ ಬಳಿಕ ಮಹಿಳೆ ತನ್ನ ಆಪ್ತ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಈ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಪತಿಯ ಭಯದಿಂದ ದೂರು ನೀಡಲು ನಿರಾಕರಿಸಿದ್ದಾಳೆ. ಆದರೆ ಈ ವಿಡಿಯೋ ಗಮನಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಳಿಕ ಪ್ರೇಮರಾಮ್ ಮೇಘ್ವಾಲ್ ಪತ್ತೆ ಹಚ್ಚಿದ ಪೊಲೀಸರು, ಅರೆಸ್ಟ್ ಮಾಡಿದ್ದಾರೆ. 

ಡಿವೋರ್ಸ್ ಬಳಿಕ ಅರಿವಾಯಿತು ತಪ್ಪು:ಆದೇಶ ರದ್ದುಗೊಳಿಸಲು ಮನವಿ ಮಾಡಿದ ಜೋಡಿಗೆ ಕೋರ್ಟ್ ಶಾಕ್!

ಪ್ರೇಮರಾಮ್ ಕುರಿತು ಗ್ರಾಮಸ್ಥರು ಹಲವು ದೂರು ನೀಡಿದ್ದಾರೆ. ಕುಡಿತದ ದಾಸನಾಗಿರುವ ಪ್ರೇಮರಾಮ್, ಪತ್ನಿಗೆ ಪ್ರತಿ ದಿನ ಥಳಿಸುತ್ತಿದ್ದ. ಭಯದಿಂದ ಪತ್ನಿ ದೂರು ನೀಡುತ್ತಿರಲಿಲ್ಲ. ಪತಿಯ ವಿರುದ್ಧ ಈತನ ಕ್ರೌರ್ಯ ಹೆಚ್ಚಾಗಿತ್ತು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೌರ್ಯದ ಪರಮಾವಧಿಯ ಈ ವಿಡಿಯೋವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಹಂಚಿಕೊಳ್ಳುತ್ತಿಲ್ಲ.  
 

Latest Videos
Follow Us:
Download App:
  • android
  • ios