Police Jeep ಪೊಲೀಸ್ ವಾಹನ ಡ್ರೈವ್ ಬಹು ದಿನದ ಕನಸು, ಧಾರವಾಡ ಠಾಣಾ ಜೀಪ್ ಕದ್ದು 100 ಕಿ.ಮೀ ಡ್ರೈವ್ ಮಾಡಿ ಸಿಕ್ಕಿಬಿದ್ದ!
- ಪೊಲೀಸ್ ಜೀಪ್ ಚಲಾಯಿಸಬೇಕು ಅನ್ನೋದು ಬಹುದಿನಗಳ ಕನಸು
- ಪೊಲೀಸ್ ಇಲಾಖೆ ಸೇರಲು ವಯಸ್ಸು ಮೀರಿದೆ, ಸಾಧ್ಯವೂ ಇಲ್ಲ
- ಕನಸು ಬಿಡದ ಚಾಲಾಕಿ ಪೊಲೀಸ್ ಜೀಪ್ ಕದ್ದು ಆಸೆ ತೀರಿಸಿಕೊಂಡ
ಧಾರವಾಡ(ಫೆ.16): ಕಾರು ಖರೀದಿಸಬೇಕು, ಲಕ್ಸುರಿ ಕಾರು ಓಡಿಸಬೇಕು, ಆಫ್ ರೋಡ್ ಡ್ರೈವ್ ಮಾಡಬೇಕು, ಲಾಂಗ್ ಟ್ರಿಪ್ ಹೋಗಬೇಕು ಸೇರಿದಂತೆ ಹಲವು ಕನಸುಗಳು ಬಹುತೇಕರಿಗಿದೆ. ಸತತ ಪರಿಶ್ರಮದ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸುತ್ತಾರೆ. ಹೀಗೆ ಧಾರಾವಾಡ ಅಣ್ಣಿಗೇರಿಯ ನಾಗಪ್ಪನಿಗೆ ವಿಶೇಷ ಆಸೆ. ಜೀವನದಲ್ಲಿ ಒಂದು ಬಾರಿ ಪೊಲೀಸ್ ಜೀಪ್(Police Jeep) ಚಲಾಯಿಸಬೇಕು ಅನ್ನೋ ಆಸೆ. ವಯಸ್ಸು 45 ದಾಟಿದೆ. ಪೊಲೀಸ್ ಇಲಾಖೆ ಸೇರಬಲ್ಲ ಶಿಕ್ಷಣ, ಅರ್ಹತೆ ಇಲ್ಲ. ಆದರೆ ತನ್ನ ಆಸೆ ಈಡೇರಿಸಲು ಪೊಲೀಸ್ ಜೀಪ್ ಕದ್ದು ಬರೋಬ್ಬರಿ 112 ಕಿಲೋಮೀಟರ್ ಡ್ರೈವಿಂಗ್ ಮಾಡಿದ್ದಾನೆ. ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ಧ ಘಟನೆ ನಡೆದಿದೆ.
ಅಣ್ಣಿಗೇರಿಯ ನಾಗಪ್ಪ ವೈ ಹಡಪದ ಸ್ಥಳೀಯ ಲಾಜಿಸ್ಟಿಕ್ ಕಂಪನಿಯಲ್ಲಿ(logistics company) ಡ್ರೈವರ್ (Driver)ಆಗಿ ಕೆಲಸ ಮಾಡುತ್ತಿದ್ದ. ಲಾಜಿಸ್ಟಿಕ್‌ನಲ್ಲಿ ಕೆಲಸ ಮಾಡುತ್ತಿರುವ ನಾಗಪ್ಪನಿಗೆ ಸಣ್ಣ ಹಾಗೂ ಘನ ವಾಹನಗಳನ್ನು ಡ್ರೈವಿಂಗ್ ಮಾಡಿದ ಅನುಭವವಿದೆ. ಹೀಗೆ ವಾಹನ ಚಲಾಯಿಸುತ್ತಿರುವ ನಾಗಪಪ್ಪನಿಗೆ ಪೊಲೀಸ್ ವಾಹನ ಡ್ರೈವಿಂಗ್ ಮಾಡಬೇಕು ಅನ್ನೋ ಆಸೆ ಹೆಚ್ಚಾಗಿದೆ. ಇದಕ್ಕಾಗಿ ಧಾರವಾಡದ ಅಣ್ಣಿಗೇರಿ(annigeri dharwad) ಪೊಲೀಸ್ ಠಾಣಾ ಬೊಲೆರೋ ಜೀಪ್ ಕದ್ದು ಅಣ್ಣಿಗೇರಿಯಿಂದ ಬ್ಯಾಡಗಿ ತೆರಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ವಿಮಾನದ ಕಾಕ್‌ಪಿಟ್‌ಗೆ ಪ್ರವೇಶಿಸಲು ಯತ್ನಿಸಿದ ಪ್ರಯಾಣಿಕನ ಮೇಲೆ ಕಾಫಿ ಪಾತ್ರೆಯಿಂದ ಹಲ್ಲೆ
ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ತಿರುಗಾಟ ಆರಂಭಿಸಿದ್ದ. ಪೊಲೀಸ್ ಜೀಪ್‌ಗಳನ್ನೇ ಗಮನಿಸುತ್ತಿದ್ದ. ಬಳಿಕ ಮುಂಜಾನೆ 3.30ರ ವೇಳೆಗೆ ಅಣ್ಣಿಗೇರಿ ಪೊಲೀಸ್ ಠಾಣಾಗೆ ಬಂದ ನಾಗಪ್ಪ, ಠಾಣಾ ಆವರಣದಲ್ಲಿ ನಿಲ್ಲಿಸಿದ ಬೊಲೆರೋ ಪೊಲೀಸ್ ಜೀಪ್ ಕದಿಯಲು ಪ್ಲಾನ್ ಹಾಕಿದ್ದಾನೆ. ಸಬ್ ಇನ್ಸ್‌ಪೆಕ್ಟರ್ ಎಲ್‌ಕೆ ಜುಲಕಟ್ಟಿ ಕರ್ತವ್ಯ ಮುಗಿಸಿ ಬೊಲೆರೋ ವಾಹನ ಪೊಲೀಸ್ ರಾಣೆ ಮುಂಭಾಗದಲ್ಲಿ ನಿಲ್ಲಿಸಿದ್ದರು. ಕೀಯನ್ನು ವಾಹನದಲ್ಲೇ ಇಡಲಾಗಿತ್ತು. ಇದರಿಂದ ಪೊಲೀಸ್ ವಾಹನ ಕದಿಯಲು ಬಂದ ನಾಗಪ್ಪನ ಕೆಲಸ ಮತ್ತೂ ಸುಲಭವಾಯಿತು. ಇಬ್ಬರು ಪೊಲೀಸರು ಠಾಣೆ ಒಳಗೆಡೆ ಇದ್ದಾಗ, ನೇರವಾಗಿ ಬೊಲೆರೋ ವಾಹನ ಸ್ಟಾರ್ಟ್ ಮಾಡಿ ಚಲಾಯಿಸಿಕೊಂಡು ಹೋಗಿದ್ದಾನೆ.
ಒಳಗಿದ್ದ ಇಬ್ಬರು ಪೊಲೀಸ್ ಪೇದೆಗಳು ತಕ್ಷಣ ಹೊರಬಂದಿದ್ದಾರೆ. ಅಷ್ಟರಲ್ಲೇ ನಾಗಪ್ಪ ಅತೀ ವೇಗದಲ್ಲಿ ಪೊಲೀಸ್ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ. ತನ್ನ ಬಹುದಿನಗಳ ಕನಸು ಈಡೇರಿಸಲು ನಾಗಪ್ಪ ಹೆದ್ದಾರಿ ಮೂಲಕ ಸಾಗಿದ್ದಾನೆ. ಅಣ್ಣಿಗೇರಿಯಿಂದ ನೇರವಾಗಿ ಬೆಳಗ್ಗೆ ಬ್ಯಾಡಗಿ ತಲುಪಿದ್ದಾನೆ. ಇದರ ನಡುವೆ ಕೆಲ ಭಾಗಗಳಲ್ಲಿ, ಸಣ್ಣ ಚಹಾ ಅಂಗಡಿ ಮುಂದೆ ಪೊಲೀಸ್ ವಾಹನ ನಿಲ್ಲಿಸಿ ತಾನೋರ್ವ ಪೊಲೀಸ್ ರೀತಿ ಪೋಸ್ ಕೊಟ್ಟಿದ್ದಾನೆ.
Bike Theft: ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಕದ್ದ ಕ್ಲಾಸಿಕ್ ಕಳ್ಳ.. ವಿಡಿಯೋ
112 ಕಿಲೋಮೀಟರ್ ಡ್ರೈವಿಂಗ್ ಮಾಡಿದ ನಾಗಪ್ಪ, ಬ್ಯಾಡಗಿಯಲ್ಲಿ ಬೊಲೆರೋ ನಿಲ್ಲಿಸಿ ಮುಂದೇನು ಮಾಡುವುದು ಅಂತಾ ಯೋಚಿಸ ತೊಡಗಿದ್ದಾನೆ. ಪೊಲೀಸ್ ವಾಹನ ಚಲಾಯಿಸುವ ಸಾಹಸ ಬೇಡವಾಗಿತ್ತು ಎಂದು ಎನಿಸಿದೆ. ದಿಕ್ಕೆ ತೋಚದ ನಾಗಪ್ಪ ಬೊಲೆರೋ ವಾಹನದಲ್ಲೇ ಕುಳಿತಿದ್ದಾನೆ. ಧಾರವಾಡದ ರಿಜಿಸ್ಟ್ರೇಶನ್ ಪೊಲೀಸ್ ವಾಹನ, ಯಾವುದೇ ಖಾಕಿ ಹಾಕಿದ ಪೊಲೀಸರು ಕಾಣುತ್ತಿಲ್ಲ. ಹೀಗಾಗಿ ಅನಮಾನಗೊಂಡ ಸ್ಥಳೀಯರು ಬ್ಯಾಡಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಬ್ಯಾಡಗಿ ಪೊಲೀಸರು ನಾಗಪ್ಪ ಹಾಗೂ ಪೊಲೀಸ್ ವಾಹನ ವಶಕ್ಕೆ ಪಡೆದಿದ್ದಾರೆ.
ಇತ್ತ ಧಾರವಾಡಾ ಪೊಲೀಸರು ಬ್ಯಾಡಗಿಗೆ ಆಗಮಿಸಿ ನಾಗಪ್ಪ ಹಾಗೂ ಪೊಲೀಸ್ ವಾಹನವನ್ನು ವಶಕ್ಕೆ ಪಡೆದು ಅಣ್ಣಿಗೇರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ತನಗೆ ಪೊಲೀಸ್ ವಾಹನ ಚಲಾಯಿಸಬೇಕೆಂಬ ಹಂಬಲ. ಇದಕ್ಕಾಗಿ ಹೀಗೆ ಮಾಡಿದೆ. ಬೇರೆ ಯಾವುದೇ ಉದ್ದೇಶ ಇರಲಿಲ್ಲ ಎಂದಿದ್ದಾನೆ. ಇದೀಗ ನಾಗಪ್ಪನ ಮೇಲೆ ಐಪಿಎಲ್ 379ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.