ಹಾಡಹಗಲೇ ಪತ್ನಿಯ ಕೊಲೆ | ಮಾರ್ಕೆಟ್‌ನಲ್ಲೇ ಪತ್ನಿಗೆ 25 ಬಾರಿ ಚುಚ್ಚಿ ಕೊಂದ ಗಂಡ

ನವದೆಹಲಿ(ಎ.11): ದೆಹಲಿಯ ಮಾರುಕಟ್ಟೆಯೊಂದರಲ್ಲಿ ಶನಿವಾರ ಮಧ್ಯಾಹ್ನ 26 ವರ್ಷದ ಯುವತಿಯನ್ನು ಪತಿ ಇರಿದು ಕೊಂದಿರುವ ಘಟನೆ ನಡೆದಿದೆ. ಆಕೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ವ್ಯಕ್ತಿ 25 ಬಾರಿ ಇರಿದಿದ್ದಾನೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಹರೀಶ್ ತನ್ನ ಪತ್ನಿ ನಿಲು ಅವರನ್ನು ದೆಹಲಿಯ ಬುಧ್ ವಿಹಾರ್‌ನಲ್ಲಿ ಸಾರ್ವಜನಿಕವಾಗಿ ಇರಿಯುವುದು ದಾಖಲಾಗಿದೆ. ದಾರಿಹೋಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ.

ರೌಡಿನೇ ಬೇಕೆಂದು ಮದ್ವೆಯಾಗಿ ಪ್ರಿಯಕರನೊಂದಿಗೆ ಚಕ್ಕಂದ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸುಂದರಿ

ಜನ ಮಹಿಳೆಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಂತೆ ವ್ಯಕ್ತಿ ಮುಂದೆ ಬರಲು ಧೈರ್ಯ ಮಾಡಬೇಡ ಎಂದು ಕಿರುಚುತ್ತಿರುವುದನ್ನು ಕೇಳಬಹುದು. ಆರೋಪಿ ಮದುವೆ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದ. ಅವರನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಸಂಶಯವಿದ್ದ ಪತಿ ಹಾಡ ಹಗಲೇ ಎಲ್ಲ ಜನರ ಮಧ್ಯೆಯೇ ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದು, ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದೆ.