ಮಂಗಳೂರು(ಜ.21): ಹಣೆಗೆ ಗನ್‌ ಇಟ್ಟುಕೊಂಡು ಮೊಬೈಲ್, ಹಣ ಸೇರಿ ಕಾರನ್ನೇ ದೋಚಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಹಣೆಯ ಮೇಲೆ ಗನ್ ಇಟ್ಟು ಕೊಲ್ಲುವುದಾಗಿ ಬೆದರಿಸಿ ರಾತ್ರೋ ರಾತ್ರಿ ವ್ಯಕ್ತಿಯನ್ನು ದರೋಡೆ ಮಾಡಲಾಗಿದೆ.

ಗನ್ ಇಟ್ಟು ಶೂಟ್ ಮಾಡುವುದಾಗಿ ಹೆದರಿಸಿ ಕಾರು, ಮೊಬೈಲ್, ಪರ್ಸ್‌ನಲ್ಲಿದ್ದ ಹದಿನಾರುವರೆ ಸಾವಿರ ರೂಪಾಯಿ ಕಿತ್ತುಕೊಳ್ಳಲಾಗಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡರಾತ್ರಿ ಹನ್ನೆರಡುವರೆ ಸುಮಾರಿಗೆ ದರೋಡೆ ನಡೆದಿದೆ.

ಬೆಳೆಗೆ ಬೆಂಕಿ: ನಂದಿಸಲು ಹೋದ ರೈತ ಸಜೀವ ದಹನ

ಅಮೇಜಾನ್‌ನಲ್ಲಿ ಕೆಲಸ  ಮಾಡುತಿದ್ದ ಗಿರೀಶ್ ಎಂಬಾತನನ್ನ ಅಡ್ಡಗಟ್ಟಿ ದರೋಡೆ ಮಾಡಲಾಗಿದೆ. ದುಶ್ಕರ್ಮಿಗಳು ಇಟಿಯೋಸ್ ಕಾರಿನಲ್ಲಿ ಬಂದಿದ್ದರು. ಹಂಪ್ ಬಳಿ ಗಿರೀಶ್ ಕಾರು ಸ್ಲೋ ಮಾಡಿದಾಗ ಕಾರಿನಲ್ಲಿದ್ದ ದರೋಡೆಕೋರರು ಗಿರೀಶ್ ಚಲಿಸಿದ ಕಾರು ಅಡ್ಡಗಟ್ಟಿದ್ದಾರೆ. ನಂತರ ಸುತ್ತುವರೆದು ಗಿರೀಶ್ ತಲೆಗೆ ಗನ್ ಇಟ್ಟು ಹಲ್ಲೆ ಮಾಡಲಾಗಿದೆ.

ಕಾರಿನಿಂದ ಕೆಳಗೆ ಇಳಿಸಿ ಪರ್ಸ್ ಮೊಬೈಲ್ ಮತ್ತು ಕಾರು ಸಹಿತ ಎಸ್ಕೇಪ್ ಅಗಿದ್ದಾರೆ. ಗಿರೀಶ್ ಸ್ಥಳೀಯರ ಸಹಾಯದಿಂದ ಪೊಲೀಸರಿಗೆ ಕರೆಮಾಡಿದ್ದಾರೆ. ರಾಜಗೋಪಾಲ ನಗರ ಪೊಲೀಸರಿಂದ ರಾಬರಿ ಮಾಡಿದ್ದ ಕಾರು ಚೇಸ್ ಮಾಡಿದ್ದು, ಸೋಲದೇವನಹಳ್ಳಿ ಬಳಿ ರಾಬರಿಯಾಗಿದ್ದ ಕಾರು ಪತ್ತೆಯಾಗಿದೆ.

ಈ ವೇಳೆ ರಾಬರಿ ಮಾಡಿದ್ದ ಗ್ಯಾಂಗ್ ಕಾರು  ಬಿಟ್ಟು ಪರಾರಿಯಾಗಿದ್ದಾರೆ. ದುಶ್ಕರ್ಮಿಗಳು ಎರಡು ದಿನದ ಹಿಮದೆ ಇಟಿಯೋಸ್ ಕಾರನ್ನು ಕೂಡಾ ರಾಬರಿ ಮಾಡಿ ಕದ್ದಿದ್ದರು. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಿಸಲಾಗಿದೆ.

ರೈಲಿಗೆ ಸಿಲುಕಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು