ವ್ಯಕ್ತಿಯೊಬ್ಬ ಹಿರಿಯ ಮಹಿಳೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯ ಆಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ವ್ಯಕ್ತಿಯ ಮೊಬೈಲ್ ಫೋನ್ ಸಂಖ್ಯೆಯ ಟ್ರೇಸ್‌ ಮಾಡಿ ಅಪರಾಧ ಮಾಡಿದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಗುಜರಾತ್ (ಜೂ. 10): ಆಘಾತಕಾರಿ ಘಟನೆಯೊಂದರಲ್ಲಿ ವಿಧವಾ ವೇತನ ಪಡೆಯಲು ಸಹಾಯ ಮಾಡುವ ನೆಪದಲ್ಲಿ ವ್ಯಕ್ತಿಯೊಬ್ಬ 75 ವರ್ಷದ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಮತ್ತು ದರೋಡೆ ನಡೆಸಿದ್ದಾನೆ. ಆರೋಪಿಯನ್ನು ಹಸ್ಮುಖ್ ದೇವಿಪೂಜಕ್ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ ಆಕೆಯ ಆಭರಣಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೋಟಾಡ್ ಪೊಲೀಸರು ವ್ಯಕ್ತಿಯ ಮೊಬೈಲ್ ಫೋನ್ ಸಂಖ್ಯೆಯನ್ನು ಟ್ರೇಸ್‌ ಮಾಡಿ ಅಪರಾಧ ಮಾಡಿದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ಜೆ.ವಿ. ಚೌಧರಿ ಮಾತನಾಡಿ, “ಸಂತ್ರಸ್ತ ರಮಿಲಾಬೆನ್ (ಹೆಸರು ಬದಲಾಯಿಸಲಾಗಿದೆ) ಅವರನ್ನು ಬುಧವಾರ ಮಧ್ಯಾಹ್ನ ಆರೋಪಿ ಸಂಪರ್ಕಿಸಿದ್ದ, ಅವರು ಅವರ ಫೋನ್ ಸಂಖ್ಯೆಯನ್ನು ತೆಗೆದುಕೊಂಡು ವಿಧವಾ ಪಿಂಚಣಿ ಫಾರ್ಮ್ ಭರ್ತಿ ಮಾಡಲು ಸಹಾಯ ಮಾಡುವುದಾಗಿ ಭರವಸೆ ನೀಡಿ, ಮತ್ತೆ ಕರೆ ಮಾಡುವುದಾಗಿ ತಿಳಿಸಿದ್ದ" ಎಂದು ಹೇಳಿದ್ದಾರೆ.

"ಒಂದು ಗಂಟೆಯ ನಂತರ ಆರೋಪಿಯು ರಮಿಲಾಬೆನ್ ಅವರನ್ನು ಆಕೆಯ ನಿವಾಸದಿಂದ ನಿರ್ಜನ ಸ್ಥಳವಾಗಿರುವ ಬೋಟಾಡ್ ಕಲೆಕ್ಟರ್ ಕಚೇರಿಯ ಹಿಂದೆ ಕರೆದುಕೊಂಡು ಹೋಗಿದ್ದ. ಬಳಿಕ ಆಕೆಯ ಆಭರಣಗಳನ್ನು ಕಸಿದುಕೊಂಡು ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ." ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಆಕೆಯನ್ನು ಕೊಂದು ಕುಟುಂಬಸ್ಥರಿಗೆ ಹಾನಿ ಮಾಡುವುದಾಗಿ ರಮಿಲಾಬೆನ್‌ಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಮನೆಗೆ ಬರಲು 100 ರೂಪಾಯಿ ನೀಡಿ ಆರೋಪಿ ಪರಾರಿಯಾಗಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಇದುವರೆಗೆ ಭೇಟಿಯಾಗಿಲ್ಲ, ಆತನ ಹೆಸರು ಗೊತ್ತಿರಲಿಲ್ಲ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಗೆ ಬೈಕ್ ನೋಂದಣಿ ಸಂಖ್ಯೆ ಅಥವಾ ಅದರ ಬಣ್ಣ ನೆನಪಿಲ್ಲ ಮತ್ತು ಅವನ ವಯಸ್ಸು ಸುಮಾರು 30 ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರಿಗೆ ಸಿಕ್ಕಿದ್ದು ಆತ ಸಂತ್ರಸ್ತೆಗೆ ಕರೆ ಮಾಡಿದ್ದ ಫೋನ್ ಸಂಖ್ಯೆ ಮಾತ್ರ. ಪೊಲೀಸ್ ಇಲಾಖೆಯು ಆರೋಪಿಯ ನಂಬರ್‌ನ ಮೇಲೆ ನಿಗಾ ಇರಿಸಿ 24 ಗಂಟೆಗಳ ಒಳಗೆ ದೇವಿಪೂಜಕನನ್ನು ಬಂಧಿಸಿದೆ. ನಂತರ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಇದನ್ನೂ ಓದಿ:ವರದಕ್ಷಿಣೆಗಾಗಿ ಕಿರುಕುಳ: ಪತ್ನಿಯ ಖಾಸಗಿ ಅಂಗಕ್ಕೆ ಹಲ್ಲೆ

ಇದನ್ನೂ ಓದಿ:ಮಂಗಳಮುಖಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್