ಪತಿ ಹಾಗೂ ಅತ್ತೆ-ಮಾವಂದಿರ ಕಪಿಮುಷ್ಠಿಯಿಂದ ಓಡಿಹೋದ ಪತ್ನಿ ಪತಿಯ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ.
ಬರೇಲಿ (ಜೂ. 10): ಉತ್ತರಪ್ರದೇಶದ ಬರೇಲಿಯಲ್ಲಿ ವರದಕ್ಷಿಣೆಗಾಗಿ ಪತ್ನಿಗೆ ಪತಿ ಕಿರುಕುಳ ನೀಡಿರುವ ಭಯಾನಕ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಪತಿ ಹಾಗೂ ಅತ್ತೆ-ಮಾವಂದಿರ ಕಪಿಮುಷ್ಠಿಯಿಂದ ಓಡಿಹೋದ ಪತ್ನಿ ಪತಿಯ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ವರದಕ್ಷಿಣೆಗಾಗಿ ಪತಿ ತನ್ನನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ಬಿಸಿಲಿನಲ್ಲಿ ನಿಲ್ಲಿಸಿ ಪತ್ನಿಗೆ ಕಿರುಕುಳ: ಮಹಿಳೆಯ ದೂರಿನ ಮೇರೆಗೆ ಎಸ್‌ಎಸ್‌ಪಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಜ್ಜತ್‌ನಗರ ಪೊಲೀಸರಿಗೆ ಆದೇಶಿಸಿದ್ದಾರೆ. ಇಜ್ಜತ್‌ನಗರದಲ್ಲಿ ನೆಲೆಸಿರುವ ವಿವಾಹಿತ ಮಹಿಳೆಯೊಬ್ಬರು ಎಸ್‌ಎಸ್‌ಪಿಗೆ ದೂರು ನೀಡಿದ್ದು, ತನಗೆ ಪತಿ ನೀಡುತ್ತಿದ್ದ ಕಿರುಕುಳುದ ಬಗ್ಗೆ ಮಾಹಿತಿ ನೀಡಿದ್ದಾಳೆ. ವರದಕ್ಷಿಣೆಗಾಗಿ ಪತಿ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಪತಿ ಅವಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಆ ನಂತರ ಮೈ ಮೇಲೆ ಇಟ್ಟಿಗೆ ಇಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.
ಖಾಸಗಿ ಅಂಗಕ್ಕೆ ಹಲ್ಲೆ ಆರೋಪ: ತಮ್ಮ ಖಾಸಗಿ ಅಂಗಕ್ಕೆ ನೋವುಂಟು ಮಾಡಿದ್ದಾರೆ ಎಂದು ಪತಿ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದಾಳೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಅತ್ತೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಲು ಯತ್ನಿಸಿದ್ದು, ಹೇಗೋ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದೇನೆ ಎಂದು ಮಹಿಳೆ ತಿಳಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕೇರಳ ವೈದ್ಯ ವಿಸ್ಮಯ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಪ್ರಕರಣದಲ್ಲಿ ಪತಿ ದೋಷಿ: ಕೋರ್ಟ್
ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಗ್ಯಾಂಗ್‌ರೇಪ್: ವಿಡಿಯೋ ಯೂಟ್ಯೂಬ್‌ಗೇ ಅಪ್ಲೋಡ್
