ಬೆಂಗಳೂರು: ಮಂಗಳಮುಖಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಮಂಗಳಮುಖಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು  ಮಡಿವಾಳ ಪೊಲೀಸರು ಬಂಧಿಸಿದ್ದಾರೆ

Bengaluru man arrested for allegedly Killing Transgender mnj

ಬೆಂಗಳೂರು (ಜೂ. 10): ಮಂಗಳಮುಖಿಯನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು  ಮಡಿವಾಳ ಪೊಲೀಸರು ಬಂಧಿಸಿದ್ದಾರೆ. 
ರಕ್ಷಿತ್ ಗೌಡ ಬಂಧಿತ ಆರೋಪಿ. ಪ್ರದೀಪ್ ಎಂಬ ಮಂಗಳಮುಖಿಯನ್ನು ಆರೋಪಿ ರಕ್ಷಿತ್ ಕೊಲೆಗೈದಿದ್ದ. ಮೇ 30 ರಂದು ಮಾರುತಿ ನಗರ ಸ್ವರಾಜ್ ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ಕೊಲೆಗೈದು ಆರೋಪಿ ಎಸ್ಕೇಪ್ ಆಗಿದ್ದ.  ಹಲವು ವರ್ಷಗಳಿಂದ ಮಂಗಳಮುಖಿ ಪ್ರದೀಪ್ ಜೊತೆ ರಕ್ಷಿತ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. 

ಮೇ 30 ರಂದು ಮಂಗಳಮುಖಿ ಪ್ರದೀಪನ ಜೊತೆ ರಕ್ಷಿತ್ ತೆರಳಿದ್ದ.  ಈ ವೇಳೆ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿತ್ತು.  ಜಗಳ  ಅತಿರೇಖಕ್ಕೆ ಹೋಗಿ ರಕ್ಷಿತ್ ಗೌಡ ಮಂಗಳಮುಖಿಗೆ ಚಾಕು ಇರಿದು ಕೊಲೆ ಮಾಡಿದ್ದ.  ತೀವ್ರ ರಕ್ತಸ್ರಾವದಿಂದ ಮಂಗಳಮುಖಿ ಪ್ರದೀಪ್ ಸಾವನ್ನಪ್ಪಿದ್ದರು.  ಪ್ರಕರಣ ಸಂಬಂಧ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿನಿಯೊಂದಿಗೆ ಕಳೆದ ಮಧುರ ಕ್ಷಣಗಳ ಫೋಟೊ ವೈರಲ್‌: ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ..!

ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ: ಪ್ರೀತಿಸುತ್ತಿದ್ದ ಹುಡುಗಿ ಪೋಷಕರ ಮಾತು ಕೇಳಿ ತನ್ನಿಂದ ಅಂತರ ಕಾಯ್ದುಕೊಂಡಳು ಎಂಬ ಕಾರಣಕ್ಕೆ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯದ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ. ವೈ.ಯರಹಳ್ಳಿ ಗ್ರಾಮದ ಸಂಪತ್ ಕುಮಾರ್ (20) ರಿಪಿಸ್ ಪಟ್ಟಿಯಿಂದ ಯುವತಿ ತಲೆಗೆ ಮನಸ್ಸೋ ಇಚ್ಛೆ ಥಳಿಸಿದ್ದು. ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ ಗಿರಿಜಾ (20)(ಹೆಸರು ಬದಲಾಯಿಸಲಾಗಿದೆ) ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆಗೆ ಮುಂದಾದ ಪ್ರೇಮಿಗಳು: ಕೊನೆ ಕ್ಷಣದಲ್ಲಿ ಕಹಾನಿ ಮೇ ಟ್ವಿಸ್ಟ್: ದೂರು ದಾಖಲು

Latest Videos
Follow Us:
Download App:
  • android
  • ios