Crime News: ಹುಡುಗಿ ಅತ್ಯಾಚಾರ ಮಾಡಿ ಮತ್ತೆ ಮಾಡುವುದಾಗಿ ಹೆದರಿಸಿದ ಕಾಮುಕ, ಯುವತಿ ಆತ್ಮಹತ್ಯೆ

Crime News today: ಯುವತಿಯನ್ನು ಅತ್ಯಾಚಾರ ಮಾಡಿದ್ದಲ್ಲದೇ ಹೇಗೆ ಅತ್ಯಾಚಾರ ಮಾಡಿದೆ ಎಂಬುದರ ವಿಶ್ಲೇಷಣೆಯನ್ನು ಸ್ನೇಹಿತನೊಂದಿಗೆ ಹಂಚಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ಧಾರೆ. ಆದರೆ ಘಟನೆಯಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

man rapes girl in bareily and talks about his crime with friend booked

ಬರೇಲಿ: ಭಾರತದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ಕೇಳಿ ಬರುತ್ತವೆ. ಸಾಕಷ್ಟು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಮುರುಘಾ ಮಠದ ಶಿವಯೋಗಿ ಶಿವಾಚಾರ್ಯ ಶರಣರನ್ನು ಪೊಲೀಸರು ಬಂಧಿಸಿದ್ದರು. ಮಠದ ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ ಆರೋಪ ಶ್ರೀಗಳ ಮೇಲಿದೆ. ಘಟನೆ ನಡೆದು ಒಂದು ವಾರದ ನಂತರ ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಇದೇ ರೀತಿ ಹಲವು ಪ್ರಕರಣಗಳು ದಿನನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಇಂಥದ್ದೇ ಒಂದು ಘಟನೆ ಬರೇಲಿಯಲ್ಲಿ ನಡೆದಿದೆ. ಆರೋಪಿ ಯುವತಿಯನ್ನು ಅತ್ಯಾಚಾರ ಮಾಡಿದ್ದಲ್ಲದೇ ಹೇಗೆ ಅತ್ಯಾಚಾರ ಮಾಡಿದೆ ಎಂಬುದನ್ನು ಇನ್ನೊಬ್ಬನೊಂದಿದೆ ಹೇಳಿಕೊಂಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಂತ್ರಸ್ತೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಇದನ್ನೂ ಓದಿ: ಜಾರ್ಖಂಡ್‌ ಬುಡಕಟ್ಟು ಬಾಲಕಿ ರೇಪ್‌, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ

ಬರೇಲಿಯ ಸೋನಕ್‌ಪುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆಗಸ್ಟ್‌ 23ರಂದು ಆರೋಪಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರ ಮಾಡಿದ ನಂತರ ಆಕೆ ಮನೆಯವರಿಗೆ ವಿಚಾರ ತಿಳಿಸಿದ್ದಾರೆ. ಆದರೆ ಪೊಲೀಸರಿಗೆ ದೂರು ನೀಡಲು ಯುವತಿ ಮತ್ತವರ ಕುಟುಂಬದವರು ಹೆದರಿದ್ದಾರೆ. ಸಂತ್ರಸ್ಥೆ ಮತ್ತು ಆರೋಪಿ ಇಬ್ಬರೂ ಒಂದೇ ಹಳ್ಳಿಯವರು. ಆಕೆ ಸಗಣಿ ಬರಣಿ ತಟ್ಟುತ್ತಿರುವ ವೇಳೆ ಯುವಕ ಬಂದು ಬಲವಂತವಾಗಿ ಆಕೆಯನ್ನು ಎಳೆದೊಯ್ದಿದ್ದಾನೆ. ನಂತರ ಅತ್ಯಾಚಾರ ಮಾಡಿದ ನಂತರ ಹೆದರಿಸಿ ಕಳಿಸಿದ್ದಾನೆ. ನಂತರ ಸಂಜೆ ಯುವತಿಯ ಅಣ್ಣ ಕೆಲಸ ಮುಗಿಸಿ ಮನೆಗೆ ಬಂದಾಗ ಯುವತಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಆದರೆ ಪೊಲೀಸರಿಗೆ ದೂರು ನೀಡಲು ಭಯ ಪಟ್ಟಿದ್ದಾರೆ. 

ಇದನ್ನೂ ಓದಿ: Bengaluru Crime: ಪ್ರೇಯಸಿಗಾಗಿ ಸ್ನೇಹಿತನನ್ನೇ ಕೊಂದ ಬಾಲ್ಯಸ್ನೇಹಿತ

ಅತ್ಯಾಚಾರದ ಬಳಿಕ ಆರೋಪಿ ಹಳ್ಳಿಯ ಇನ್ನೊಬ್ಬರ ಜೊತೆ ಹೇಗೆ ಅತ್ಯಾಚಾರ ಮಾಡಿದೆ ಎಂಬ ಬಗ್ಗೆ ಮಾತನಾಡಿದ್ದಾನೆ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೊದಲೇ ಅತ್ಯಾಚಾರಕ್ಕೊಳಗಾಗಿ ನೋವಿನಲ್ಲಿದ್ದ ಯುವತಿಗೆ ಈ ಆಡಿಯೋದಿಂದ ಇನ್ನಷ್ಟು ಭೀತಿ ಹುಟ್ಟಿದೆ. ಅತ್ಯಾಚಾರ ಮಾಡಿದ್ದಲ್ಲದೇ ರಾಜಾರೋಷವಾಗಿ ಮಾಡಿದ ಅಪರಾಧದ ಬಗ್ಗೆ ಯುವಕ ಮಾತನಾಡಿದ್ದಾನೆ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಯ ಬಳಿಕ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ಸಿಕ್ಕಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಅತ್ಯಾಚಾರ ಮತ್ತು ಆತ್ಮಹತ್ಯೆಗೆ ತಳ್ಳಿದ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದಿದ್ದು, ಇದೇ ರೀತಿ ಇನ್ಯಾವುದಾದರೂ ಹೆಣ್ಣು ಮಕ್ಕಳ ಮೇಲೂ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ: ಲಾಡ್ಜ್‌ನಲ್ಲಿ BCA ವಿದ್ಯಾರ್ಥಿನಿಗೂಢ ಸಾವು ಕೇಸ್: ಸ್ನೇಹ ಬೆಳೆಸಿದ್ದಕ್ಕೆ ಕೊಲೆ

Latest Videos
Follow Us:
Download App:
  • android
  • ios