Asianet Suvarna News Asianet Suvarna News

ಜಾರ್ಖಂಡ್‌ ಬುಡಕಟ್ಟು ಬಾಲಕಿ ರೇಪ್‌, ಕೊಲೆ ಬಳಿಕ ಗರ್ಭಿಣಿ ಎಂಬ ವಿಚಾರ ಬೆಳಕಿಗೆ

ಜಾರ್ಖಂಡ್‌ನಲ್ಲಿ ಮತ್ತೊಂದು ಅತ್ಯಾಚಾರ, ಕೊಲೆ- 14 ವರ್ಷದ ದಲಿತ ಬಾಲಕಿ ಹತ್ಯೆ. ಸಾಯುವಾಗ ಈಕೆ ಗರ್ಭಿಣಿ ಎಂದು  ದೃಢ. ಆರೋಪಿ ಅನ್ಸಾರಿ ಬಂಧನ

Jharkhand tribal girl rape and murder  gow
Author
First Published Sep 4, 2022, 10:41 PM IST

ದುಮ್ಕಾ (ಸೆ.4): ಜಾರ್ಖಂಡ್‌ನಲ್ಲಿ ಅತ್ಯಾಚಾರದ ಸರಣಿ ಮುಂದುವರಿದಿದೆ. ಮದುವೆಯಾಗುವುದಾಗಿ ನಂಬಿಸಿದ ವ್ಯಕ್ತಿಯು ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ 14 ವರ್ಷದ ಬುಡಕಟ್ಟು ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಬಳಿಕ ಆಕೆಯ ಶವ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಅರ್ಮಾನ್‌ ಅನ್ಸಾರಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಬಾಲಕಿ 8-10 ವಾರದ ಗರ್ಭಿಣಿಯಾಗಿದ್ದಳು ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಆದರೆ ಬಾಲಕಿಯ ಮರಣೋತ್ತರ ಪರೀಕ್ಷೆ ಬಳಿಕವೇ ಆಕೆಯ ಸಾವನ್ನು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಹತ್ಯೆ ಮಾಡಿ ಬಳಿಕ ಮರಕ್ಕೆ ನೇಣು ಹಾಕಿದ್ದರೇ ಎಂಬ ಬಗ್ಗೆ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕಿಯು ದುಮ್ಕಾದಲ್ಲಿ ತನ್ನ ಚಿಕ್ಕಮ್ಮಳೊಂದಿಗೆ ವಾಸಿಸುತ್ತಿದ್ದಳು. ಅಲ್ಲಿ ಆಕೆ ಅರ್ಮಾನ್‌ ಅನ್ಸಾರಿ ಎಂಬ ಕಟ್ಟಡ ಕಾರ್ಮಿಕನ ಸಂಪರ್ಕಕ್ಕೆ ಬಂದಳು. ಅನ್ಸಾರಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಆಕೆಯ ಹತ್ಯೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಎಸ್ಸಿ ಎಸ್ಟಿಕಾಯ್ದೆಯ ಐಪಿಸಿ ಸೆಕ್ಷನ್‌ 302 ಹಾಗೂ ಪೋಕ್ಸೋ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಾಲಕಿಯ ಸಾವಿಗೆ ಜಾರ್ಖಂಡದ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತ ಬಾಲಕಿಗೆ ನ್ಯಾಯ ಒದಗಿಸಿಕೊಡಲು ಪೊಲೀಸರಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಜಾರ್ಖಂಡದಲ್ಲಿ 26 ವರ್ಷದ ವ್ಯಕ್ತಿಯೊಬ್ಬ ಬಲಪೂರ್ವಕವಾಗಿ ಮನೆಗೆ ನುಗ್ಗಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಅದರ ಬೆನ್ನಲ್ಲೇ ಮತ್ತೊಂದು ಭೀಕರ ಘಟನೆ ವರದಿಯಾಗಿದ್ದು ಕಳವಳ ಸೃಷ್ಟಿಸಿದೆ. 

ಶಬಾನಾ, ನಾಸಿರುದ್ದೀನ್‌, ಟುಕ್ಡೇ ಟುಕ್ಡೇ ಗ್ಯಾಂಗ್‌ ಸ್ಲೀಪರ್‌ ಸೆಲ್‌ ಸದಸ್ಯರು: ಮಿಶ್ರಾ
ಭೋಪಾಲ್‌: ಬಾಲಿವುಡ್‌ನ ಶಬಾನಾ ಆಜ್ಮಿ, ಜಾವೇದ್‌ ಅಖ್ತರ್‌ ಮತ್ತು ನಾಸಿರುದ್ದೀನ್‌ ಶಾ ಅವರು ಟುಕ್ಡೇ ಟುಕ್ಡೇ ಗ್ಯಾಂಗ್‌ನ ಸ್ಲೀಪರ್‌ ಸೆಲ್‌ನ ಸದಸ್ಯರು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಹೇಳಿದ್ದಾರೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಸಾಕ್ಷಿ ಕಲೆಹಾಕಲು ಸ್ಥಳ ಮಹಜರ್, ಫಸ್ಟ್ ಶ್ರೀಗಳ ಬೆಡ್ ರೂಮ್‌ಗೆ ಹೊಕ್ಕಿದ ಪೊಲೀಸ್!

ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ನಟಿ ಶಬಾನಾ ಆಜ್ಮಿ ಇತ್ತೀಚೆಗೆ ಟೀವಿ ಚರ್ಚೆ ಒಂದರ ವೇಳೆ ಕಣ್ಣೀರಿಟ್ಟಿದ್ದರು. ಹೀಗಾಗಿ ಮಿಶ್ರಾ ಈ ರೀತಿಯ ಹೇಳಿಕೆ ನೀಡಿದ್ದಾರೆ.

Murugha Seer Case; ಸರಕಾರ ನಿರ್ಲಕ್ಷ್ಯ ತೋರಿದೆಯೆಂದು ಆರೋಪಿಸಿದ ಎಚ್‌ ವಿಶ್ವನಾಥ್

‘ಶಬಾನಾ ಆಜ್ಮಿ, ಜಾವೇದ್‌ ಅಖ್ತರ್‌ ಮತ್ತು ನಾಸಿರುದ್ದೀನ್‌ ಶಾ ಅವರು ಟುಕ್ಡೇ ಟುಕ್ಡೇ ಗ್ಯಾಂಗ್‌ನ ಸ್ಲೀಪರ್‌ ಸೆಲ್‌ ಸದಸ್ಯರಾಗಿದ್ದಾರೆ. ಇವರು ರಾಜಸ್ಥಾನದಲ್ಲಿ ಕನ್ಹಯ್ಯ ಲಾಲ್‌ ಶಿರಚ್ಚೇದವಾದಾಗ ಏನೂ ಮಾತನಾಡಿಲ್ಲ. ಜಾರ್ಖಂಡ್‌ನಲ್ಲಿ ಬಾಲಕಿಗೆ ಬೆಂಕಿ ಹಚ್ಚಿದಾಗ ಸುಮ್ಮನಿದ್ದರು. ಆದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯದಲ್ಲಿ ಏನಾದರೂ ಆದಾಗ ಮಾತ್ರ ಪ್ರತಿಕ್ರಿಯಿಸುತ್ತಾರೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios