ಈಜುವ ಬೆಟ್ಟಿಂಗ್ ಕಟ್ಟಿ ಇಹಲೋಕ ತ್ಯಜಿಸಿದ ಆಸಾಮಿ: ಬೆಟ್ಟಿಂಗ್ ನೆಪದಲ್ಲಿ ಕೊಂದೆ ಬಿಟ್ಟರಾ ಗೆಳೆಯರು?
ಆತನಿಗೆ ಕುಡಿತದ ಚಟವಿತ್ತು, ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ, ಅದೇ ಕುಡಿದ ಮತ್ತಿನಲ್ಲಿ ಗ್ರಾಮದ ಕೆರೆಯಲ್ಲಿ ಈಜಿ ದಡ ಸೇರುವ ಜಿದ್ದು ಕಟ್ಟಿದ್ದಾನೆ. ಕುಡಿದ ಮತ್ತಿನಲ್ಲಿ ಕೆರೆ ಈಜಲು ಹೋದ ಆಸಾಮಿ ಹೆಣವಾಗಿದ್ದಾನೆ.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್.
ವಿಜಯಪುರ (ಮೇ.10): ಆತನಿಗೆ ಕುಡಿತದ ಚಟವಿತ್ತು, ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದಾನೆ, ಅದೇ ಕುಡಿದ ಮತ್ತಿನಲ್ಲಿ ಗ್ರಾಮದ ಕೆರೆಯಲ್ಲಿ ಈಜಿ ದಡ ಸೇರುವ ಜಿದ್ದು ಕಟ್ಟಿದ್ದಾನೆ. ಕುಡಿದ ಮತ್ತಿನಲ್ಲಿ ಕೆರೆ ಈಜಲು ಹೋದ ಆಸಾಮಿ ಹೆಣವಾಗಿದ್ದಾನೆ. ಆದರೆ ಆತನ ಪುಟ್ಟ ನಾಲ್ಕು ಮಕ್ಕಳು, ಪತ್ನಿ ಹಾಗೂ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಬೆಟ್ಟಿಂಗ್ ನೆಪದಲ್ಲಿ ಸ್ನೇಹಿತರು ಕೊಲೆಗೆ ಸ್ಕೆಚ್ ಹಾಕಿದ್ರಾ ಅನ್ನೋ ಅನುಮಾನ ಮೂಡಿಸಿದೆ.
ಜಿದ್ದಿಗೆ ಹೋಯ್ತು ಜೀವ: ಕುಡಿದ ಮತ್ತಿನಲ್ಲಿ ಜಿದ್ದಿಗೆ ಬಿದ್ದ ಆಸಾಮಿಯೊಬ್ಬ ಹೆಣವಾಗಿದ್ದಾನೆ. ಹೆಸರು ಪ್ರಕಾಶ್ ಮೋರೆ ಅಂತ ವಯಸ್ಸು ಕೇವಲ 45. ನಿನ್ನೆ ಊರ ಹೊರಗೆ ಗೆಳೆಯರಾದ ಗಣಪತಿ ಧನವಡೆ, ಸಂತೋಷ ಕಂಬಾರ,ಬಾಹುಸಾಬ್ ಸಿಂಧೆ, ಬಸವರಾಜ ನಾಟಿಕಾರ ಅನ್ನೋ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದಾನೆ. ಕೇವಲ ಪಾರ್ಟಿಯಲ್ಲ, ಎಲ್ಲರು ಸೇರಿ ಗುಂಡು ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲೆ ಸ್ನೇಹಿತರಲ್ಲಿ ಬೆಟ್ಟಿಂಗ್ ಶುರುವಾಗಿದೆ. ಯಾರು ಕೆರೆಯನ್ನ ಈಜಿ ಪಾರಾಗುತ್ತಾರೋ ಅವರು ಬೆಟ್ಟಿಂಗ್ ನಲ್ಲಿ ಗೆದ್ದಂತೆ ಅಂತಾ ಜಿದ್ದು ಕಟ್ಟಿದ್ದಾರೆ. ಜಿದ್ದಿಗೆ ಬಿದ್ದ ಈ ಕುಡುಕ ಆಸಾಮಿ ಕೆರೆಗೆ ಹಾರಿದ್ದಾನೆ. ಈಜುತ್ತಾ ನಡುಮಧ್ಯೆ ಹೋಗಿ ನಾಪತ್ತೆಯಾಗಿದ್ದಾನಂತೆ. ಹೀಗಂತೆ ಆತನ ಸ್ನೇಹಿತರು ಕುಟುಂಬಸ್ಥರಿಗೆ ತಿಳಸಿದ್ದಾರೆ.
Gadag: 'ಎಸಿಬಿ ರೇಡ್' ನಾಟಕ ಮಾಡಿ ಹಣ ಕಿತ್ತಲು ಮುಂದಾದ ಖದೀಮರ ಟೀಮ್!
ಪ್ರಕಾಶನ ಜಿದ್ದಿಗೆ ಹೆಂಡತಿ, ಮಕ್ಕಳು ಅನಾಥ: ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದ ನಿವಾಸಿಯಾದ ಪ್ರಕಾಶ್ಗೆ ಓರ್ವ ಪತ್ನಿ, ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಕುಡಿತ ಚಟಕ್ಕೆ ಬಿದ್ದಿದ್ದ ಪ್ರಕಾಶ ಗೆಳೆಯರ ಜೊತೆಗೆ ನಶೆಯಲ್ಲಿ ಪಾರ್ಟಿ ಅಂತ ಹೋಗಿ ಜೀವ ಕಳೆದುಕೊಂಡಿದ್ದಾನೆ. ಕೇವಲ ಪಾರ್ಟಿ ಮಾಡಿ ಸುಮ್ಮನೆ ಮನೆಗೆ ಬಂದಿದರೆ ಈಗ ಗತಿಯಾಗ್ತಿರಲಿಲ್ಲ. ಬದಲಿಗೆ ಪ್ರಕಾಶ ಜಿದ್ದು, ಬೆಟ್ಟಿಂಗ್ ಅಂತಾ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಹೆಂಡತಿ, ಮಕ್ಕಳನ್ನ ಅನಾಥ ಮಾಡಿದ್ದಾನೆ.
20 ಸಾವಿರಕ್ಕಾಗಿ ನಡೆದಿದ್ದ ಈಜುವ ಬೆಟ್ಟಿಂಗ್: ಕೆರೆ ದಂಡೆಯಲ್ಲಿ ನಡೆದ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತರ ಮಧ್ಯೆ ಏನಾಗಿದೆ ಗೊತ್ತಿಲ್ಲ. ಆದ್ರೆ ದ್ಯಾಬೇರಿ ಕೆರೆಯಲ್ಲಿ ಕುಡಿದ ಮತ್ತಿನಲ್ಲಿ ಈಜುವ ಜಿದ್ದು (ಬೆಟ್ಟಿಂಗ್) ಕಟ್ಟಿದ್ದಾರೆ. ಒಂದು ದಡದಿಂದ ಮತ್ತೊಂದು ದಡಕ್ಕೆ ಹೋದ್ರೆ 20ಸಾವಿರ ಅಂತ ಬೆಟ್ಟಿಂಗ್ ಫಿಕ್ಸ್ ಮಾಡಿದ್ದಾರೆ. ಪ್ರಕಾಶ್ ಬೆಟ್ಟಿಂಗ್ ಆಸೆಗಾಗಿ ಕುಡಿದ ಮತ್ತಿನಲ್ಲಿ ಕೆರೆಯಲ್ಲಿ ಈಜೋಕೆ ಹೋಗಿದ್ದಾನೆ. ಕೆರೆ ಮಧ್ಯೆ ಕೈ ಸೋತು ಪ್ರಕಾಶ್ ನೀರಲ್ಲಿ ಮುಳುಗಿದ್ದಾನೆ. ಇದನ್ನು ಕಂಡು ನಾಲ್ವರು ಸ್ನೇಹಿತರು ಅಲ್ಲಿಂದ ನಾಪತ್ತೆಯಾಗಿದ್ದಾರೆ.
ಒಂದು ದಿನ ಕಳೆದ ಬಳಿಕ ಸಿಕ್ಕ ಶವ: ಜಿದ್ದಿಗಾಗಿ ಪ್ರಕಾಶ ನೀರಲ್ಲಿ ಕಣ್ಮರೆಯಾಗಿದ್ದಾನೆ ಎನ್ನವ ವಿಷಯ ಪತ್ನಿ, ಕುಟುಂಬಸ್ಥರಿಗೆ ತಿಳಿಯುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಶವಕ್ಕಾಗಿ ಹುಡುಕಾಟ ನಡೆಸಿದ್ರು, ಶವ ಸೋಮವಾರ ಮಧ್ಯಾಹ್ನ 12ಕ್ಕೆ ಸಿಕ್ಕಿದೆ. ಶವದ ಮುಂದೆ ಪತ್ನಿ , ಮಕ್ಕಳು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ನೆಪಕ್ಕೆ ಬೆಟ್ಟಿಂಗ್, ನಡೆದದ್ದು ಕೊಲೆಯಾ?: ಈ ಜಿದ್ದಿನ ಸಾವಿನ ನಡುವೆ ನೂರೆಂಟು ಅನುಮಾನಗಳು ಕಾಡಲಾರಂಭಿಸಿದೆ. ನಿಜಕ್ಕು ಗೆಳೆಯರ ಮಧ್ಯೆ ಬೆಟ್ಟಿಂಗ್ ನಡೆದಿತ್ತಾ ಅನ್ನೋದೆ ಇಲ್ಲಿ ಅಸಲಿಗೆ ಪ್ರಶ್ನೆಯಾಗಿದೆ. ಅಥವಾ ಬೆಟ್ಟಿಂಗ್ ನೆಪದಲ್ಲಿ ಪಕ್ಕಾ ಸ್ಕೆಚ್ ಹಾಕಿ ಪ್ರಕಾಶ ಕಥೆ ಮುಗಿದ್ದಾರಾ ಎನ್ನುವ ಅನುಮಾನಗಳು ಕುಟುಂಬಸ್ಥರನ್ನ ಕಾಡ್ತಿವೆ. ಕೊಲೆ ಮಾಡಲೆಂದು ಈ ರೀತಿ ಮಾಡಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ ಅಂತ ಪ್ರಕಾಶ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮನೆಗೆ ಆಸರೆಯಾಗಿದ್ದವ ನಿಗೂಢ ಸಾವು: ಪ್ರಕಾಶ್ ಮೋರೆ ಡಾಬಾವೊಂದರಲ್ಲಿ ಕೆಲಸ ಮಾಡುತ್ತಿದ್ದರೆ ಆತನ ಪತ್ನಿ ಸುನೀತಾ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ರು. ಕುಟುಂಬಕ್ಕೆ ಪ್ರಕಾಶ್ ನೇ ಆಸರೆಯಾಗಿದ್ದ, ಸೌಮ್ಯ ಸ್ವಭಾವದವ. ಆದ್ರೆ ಸ್ನೇಹಿತರು ಯಾಕೆ ಬೆಟ್ಟಿಂಗ್ ಕಟ್ಟುವ ಮೂಲಕ ಜೀವ ತೆಗೆಯೋದಕ್ಕೆ ಪ್ಲ್ಯಾನ್ ಮಾಡಿದ್ರು ಅನ್ನೋ ಕಾರಣ ಮಾತ್ರ ಇನ್ನೂ ನಿಗೂಢವಾಗಿದೆ. ರವಿವಾರದಂದು ಮಧ್ಯಾಹ್ನದ ಹೊತ್ತಿಗೆ ಮನೆಗೆ ಬಂದಿರೋ ಪ್ರಕಾಶ ಮನೆಯಲ್ಲಿನ 15 ಸಾವಿರ ಹಣ ತೆಗೆದುಕೊಂಡು ಹೋಗಿದ್ದನಂತೆ. ಆ ಹಣ ಬೆಟ್ಟಿಂಗ್ ಗಾಗಿ ತೆಗೆದುಕೊಂಡು ಹೋದನಾ ಅನ್ನೋ ಅನುಮಾನ ಕೂಡಾ ವ್ಯಕ್ತವಾಗ್ತಿದೆ. ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ. ಜಿದ್ದಿಗೆ ಬಿದ್ದು ತನ್ನ ಪ್ರಾಣವನ್ನೇ ಕಳೆದುಕೊಂಡು ಕುಟುಂಬಸ್ಥರನ್ನು ಅನಾಥರನ್ನಾಗಿ ಮಾಡಿದ್ದಾನೆ.
Chamarajanagar: ತಾಯಿಯ ಜೊತೆಗೆ ಅಕ್ರಮ ಸಂಬಂಧ: ದೊಣ್ಣೆಯಲ್ಲಿ ಹೊಡೆದು ವ್ಯಕ್ತಿಯ ಕೊಲೆ
ಪೊಲೀಸರು ತನಿಖೆ ನಡೆಸಲಿ: ಪೊಲೀಸರು ಆರೋಪಿಗಳನ್ನು ಸೆರೆಹಿಡಿದಾಗ ದುರ್ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ. ಇದು ಬೆಟ್ಟಿಂಗ್ ನೆಪದಲ್ಲಿ ಕೊಲೆ ಮಾಡಲಾಗಿದೆಯಾ? ಬೆಟ್ಟಿಂಗ್ ಸಾವಿಗೆ ಕಾರಣವಾಯ್ತಾ? ಅನ್ನೋ ಕುರಿತಾಗಿ ಪೊಲೀಸರು ತನಿಖೆ ನಡೆಸಬೇಕಿದೆ. ಇನ್ನು ಪೊಲೀಸರೆ ನಮಗೆ ನ್ಯಾಯ ಕೊಡಿಸಬೇಕು ಅಂತಿದ್ದಾರೆ ಪ್ರಕಾಶ್ ಸಹೋದರ ವಿಠ್ಠಲ.
ಜಿದ್ದಿಗೆ ಆದ ಸಾವಾ? ಕೊಲೆಯಾ?: ಬೆಟ್ಟಿಂಗ್ ನೆಪದಲ್ಲಿ ಸ್ನೇಹಿತರು ಕೊಲೆಗೆ ಪ್ಲ್ಯಾನ್ ರೂಪಿಸಿದ್ರಾ? ಅಮಾಯಕ ಜೀವ ಬೆಟ್ಟಿಂಗ್ಗೆ ಬಲಿಯಾಯಿತಾ.? ಅಥವಾ ಬೇರೆ ಕಾರಣಕ್ಕೆ ಕೊಂದು ಬೀಸಾಕಿದ್ದಾರಾ ಅನ್ನೋದು ಪೋಲಿಸ್ ತನಿಖೆಯಿಂದಲೇ ಸತ್ಯಾಸತ್ಯತೆ ಹೊರ ಬರಬೇಕಿದೆ.