Asianet Suvarna News Asianet Suvarna News

ಮಹಿಳೆಯ ಹೃದಯ ಬಗೆದು ಅಲೂಗಡ್ಡೆ ಜೊತೆ ಫ್ರೈ : ಸಂಬಂಧಿಗಳಿಗೆ ಬಡಿಸಿದ ಸೈಕೋಪಾತ್

ಅಮೆರಿಕಾದ ನ್ಯಾಯಾಲಯವೂ ಮೂವರನ್ನು ಕೊಲೆಗೈದ ಪ್ರಕರಣವೊಂದರಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ. ಈತ ಮಾಡಿದ ಭೀಕರ ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.  

Man kills woman and cuts out heart and fried it with potatoes, later served it to relatives akb
Author
First Published Mar 17, 2023, 3:19 PM IST

ನ್ಯೂಯಾರ್ಕ್‌:  ಅಮೆರಿಕಾದ ನ್ಯಾಯಾಲಯವೂ ಮೂವರನ್ನು ಕೊಲೆಗೈದ ಪ್ರಕರಣವೊಂದರಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ. ಈತ ಮಾಡಿದ ಭೀಕರ ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.  

ಮಹಿಳೆಯನ್ನು ಕೊಂದು, ಆಕೆಯ ಹೃದಯವನ್ನು ಕತ್ತರಿಸಿ ಬಳಿಕ ಆಲೂಗಡ್ಡೆಯೊಂದಿಗೆ ಅದನ್ನು ಫ್ರೈ ಮಾಡಿ ತನ್ನ ಸಂಬಂಧಿಗಳಿಗೆ ಬಡಿಸಿದ ಆರೋಪಿ ನಂತರ ಅವರನ್ನು ಕೂಡ ಹತ್ಯೆ ಮಾಡಿದ್ದಾನೆ. ಈ ರೀತಿ ಭೀಕರವಾಗಿ ಹತ್ಯೆ ಮಾಡಿದ ಆರೋಪಿಗೆ ಈಗ ಅಮೆರಿಕಾದ ಕೋರ್ಟ್ ಜೀವಮಾನದ ಶಿಕ್ಷೆ ವಿಧಿಸಿದೆ. 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ( Lawrence Paul Anderson) ಎಂಬಾತನೇ ಹೀಗೆ ಭೀಭತ್ಸ ಅಪರಾಧವೆಸಗಿದ ವ್ಯಕ್ತಿ. ಬೇರೆ ಪ್ರಕರಣವೊಂದರಲ್ಲಿ ಜೈಲಿಗೆ ಹೋದ ಈತ ಕೈದಿಗಳ ಮನಪರಿವರ್ತನೆಯ ಭಾಗದ ನಂತರ ಜೈಲಿನಿಂದ ಬಿಡುಗಡೆಗೊಂಡಿದ್ದ. ಇದಾಗಿ ಒಂದು ತಿಂಗಳು ಕಳೆಯುವ ಮುನ್ನವೇ ಈತ ಈ ಭೀಕರ ಹತ್ಯೆಯನ್ನು ಮಾಡಿದ್ದಾನೆ. 2021ರಲ್ಲಿ ಈ ತ್ರಿವಳಿ ಕೊಲೆ ನಡೆದಿದ್ದು, ಈಗ ಆರೋಪಿಗೆ ನ್ಯಾಯಾಲಯ ಜೀವಮಾನವಿಡೀ ಜೈಲಿನಲ್ಲೇ ಕಳೆಯುವ ಶಿಕ್ಷೆ ನೀಡಿದೆ. 

ಜೈಲಿನಿಂದ ಬಿಡುಗಡೆಯಾದ ಈತ ವಾರಗಳ ನಂತರ, ಆಂಡ್ರಿಯಾ ಬ್ಲಾಂಕೆನ್‌ಶಿಪ್ (Andrea Blankenship)ಎಂಬಾಕೆಯನ್ನು ಕೊಂದು ಆಕೆಯ ಹೃದಯವನ್ನು ಬಗೆದು ತೆಗೆದಿದ್ದಾನೆ ಬಳಿಕ ಅದನ್ನು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ಕೊಂಡೊಯ್ದ ಆತ ಅಲ್ಲಿ ಆಲೂಗೆಡ್ಡೆಯೊಂದಿಗೆ ಅದನ್ನು ಬೇಯಿಸಿದ್ದಾನೆ. ನಂತರ ಈ ಕೊಲೆಗಡುಕ ತನ್ನ  ಅಂಕಲ್  67 ವರ್ಷದ ಲಿಯಾನ್ ಪೈ (Leon Pye) ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ್ (Kaeos Yates) ಅವರನ್ನು ಇರಿದು ಕೊಲ್ಲುವ ಮೊದಲು ಲಿಯಾನ್ ಪೈ ಹಾಗೂ ಅವರ ಪತ್ನಿಗೆ ತಾನು ಕೊಲೆ ಮಾಡಿದ ಮಹಿಳೆಯ ಹೃದಯದ ಫ್ರೈ ಅನ್ನು ತಿನ್ನಿಸಲು ಯತ್ನಿಸಿದ್ದ ಎಂಬ ಆಘಾತಕಾರಿ ವಿಚಾರ ತನಿಖೆಯಲ್ಲಿ ಬಯಲಾಗಿದೆ. 

ಹೃದಯ ಬಗೆದು, ಮರ್ಮಾಂಗ ತುಂಡು ತುಂಡಾಗಿ ಕತ್ತರಿಸಿ ಯುವಕನ ಭೀಕರ ಹತ್ಯೆ

ಇದಕ್ಕೂ ಮೊದಲು ಡ್ರಗ್‌ ಕೇಸೊಂದರಲ್ಲಿ ಜೈಲು ಸೇರಿದ್ದ ಲಾರೆನ್ಸ್ ಪಾಲ್ ಆಂಡರ್ಸನ್‌ಗೆ ಆ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಯಾಗಿತ್ತು.  ಆದರೆ ಮನಪರಿವರ್ತನೆಯ ಹಿನ್ನೆಲೆಯಲ್ಲಿ  ಒಕ್ಲಹೋಮಾದ (Oklahoma) ಗವರ್ನರ್ ಕೆವಿನ್ ಸ್ಟಿಟ್ (Kevin Stitt) ಅವರು ಆಂಡರ್ಸನ್‌ಗೆ ನೀಡಿದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದರು.  ಹೀಗಾಗಿ ಡ್ರಗ್‌ ಕೇಸಿನಲ್ಲಿ ಜೈಲಿಗೆ ಹೋಗಿದ್ದ ಈತ 20 ವರ್ಷ ಶಿಕ್ಷೆಯಾದರೂ  ಕೇವಲ 3 ವರ್ಷದಲ್ಲಿ ಹೊರಬಂದಿದ್ದ. ಜೈಲಿನಿಂದ ಹೊರಬಂದರೂ ಬುದ್ಧಿ ಕಲಿಯದ ಈತ ತಿಂಗಳಾಗುವ ಮೊದಲೇ ಭೀಕರವಾಗಿ ಮೂವರನ್ನು ಹತ್ಯೆಗೈದು ಮತ್ತೆ ಜೈಲು ಸೇರಿದ್ದಾನೆ. 

ಆದರೆ ಈತ ತ್ರಿವಳಿ ಕೊಲೆ ಮಾಡುತ್ತಿದ್ದಂತೆ ಈತನ ಬಗ್ಗೆ ತನಿಖೆಗೆ ಮುಂದಾದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಮನಪರಿವರ್ತನೆ (commutation) ಹಿನ್ನೆಲೆಯಲ್ಲಿ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿಯಲ್ಲಿ ಈತ ತಪ್ಪಾಗಿ ಸ್ಥಾನ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.  ಕೊಲೆ, ಆಕ್ರಮಣ ಮತ್ತು ಅಂಗವೈಕಲ್ಯತೆಯನ್ನು ಉಂಟು ಮಾಡಿರುವುದನ್ನು ನ್ಯಾಯಾಲಯದ ಮುಂದೆ ಆಂಡರ್ಸನ್ ಒಪ್ಪಿಕೊಂಡಿದ್ದು,  ಆತನಿಗೆ ಒಟ್ಟು ಐದು ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿದೆ. ಈತನಿಂದ ಭೀಕರವಾಗಿ ದಾಳಿಗೊಳಗಾದ ಈತನ ಚಿಕ್ಕಮ್ಮ, ಹಾಗೂ ಹತ್ಯೆಯಾದ ಮಹಿಳೆಯ ಕುಟುಂಬದವರು ಆರೋಪಿಯನ್ನು ಮನ ಪರಿವರ್ತನೆಯ ಮೇಲೆ ಬಿಡುಗಡೆಗೊಳಿಸಿದ ಜೈಲು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Mysuru: ದಶಕದ ದಾಂಪತ್ಯಕ್ಕೆ ಅಡ್ಡ ಬಂದವನ ರುಂಡ ತುಂಡರಿಸಿದ ಗಂಡ!

Follow Us:
Download App:
  • android
  • ios