ಸುಖವಾದ ನಿದ್ರೆಯಲ್ಲಿದ್ದ ತನ್ನನ್ನು ಏಳಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಒಬ್ಬನನ್ನು ಇಂಟರ್‌ಲಾಕ್‌ನಿಂದ ಬಡಿದು ಸಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಆರೋಪಿಯಿಉ ಒಬ್ಬ ವ್ಯಕ್ತಿಯನ್ನು ಸಾಯಿಸಿದ್ದರರೆ, ಇನ್ನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ.
ಮುಂಬೈ (ಏ.27): ಆಘಾತಕಾರಿ ಘಟನೆಯಲ್ಲಿ ದಾದಾರ್ ಪೂರ್ವ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿಯೊಬ್ಬ ತನನ್ನು ನಿದ್ರೆಯಿಂದ ಏಳಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬನ್ನು ಕೊಲೆ ಮಾಡಿದ್ದಲ್ಲದೆ, ಇನ್ನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ ಬಗ್ಗೆ ವರದಿಯಾಗಿದೆ. ಆರೋಪಿಯನ್ನು ಕೆಲ ಗಂಟೆಗಳಲ್ಲಿಯೇ ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಬುಧವಾರ ತಿಳಿಸಿದ್ದಾರೆ. ಪೊಲೀಸರುವ ನೀಡಿರುವ ಮಾಹಿತಿಯ ಪ್ರಕಾರ, ಮೃತ ವ್ಯಕ್ತಿ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಆತನ ಸ್ನೇಹಿತ ಇಬ್ಬರೂ ಪುಟ್‌ಪಾತ್‌ನ ನಿವಾಸಿಗಳಾಗಿದ್ದಾರೆ. ಬುಧವಾರ ಬೆಳಗಿನ ಜಾವ ಬಹಳ ಹೊತ್ತಿನವೆಗೂ ಆರೋಪಿ ಒಂದೇ ಸ್ಥಳದಲ್ಲಿ ಮಲಗಿರುವುದನ್ನು ಕಂಡು ಏಳಿಸಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಆತನನ್ನು ಮುಟ್ಟಿ ಏಳಿಸಲು ಪ್ರಯತ್ನಿಸಿದಾಗ, ಆರೋಪಿ ಸಿಟ್ಟಿನಿಂದ ಬೈಯ್ಯಲು ಆರಂಭಿಸಿದ್ದಾನೆ. ಸಿಟ್ಟಿನ ಭರದಲ್ಲಿ ಅಲ್ಲಿಯೇ ಕೈಗೆ ಸಿಕ್ಕ ಇಂಟರ್‌ಲಾಕ್‌ನಿಂದ ವ್ಯಕ್ತಿಗೆ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಬುಧವಾರ ಬೆಳಗ್ಗೆ 8.30ರ ವೇಳೆಗೆ ಆರೋಪಿ ಹಾಗೂ ಹಲ್ಲೆಗೆ ಒಳಗಾದ ವ್ಯಕ್ಯಿಗಳ ದಾದರ್ ಪೂರ್ವದಲ್ಲಿದ್ದ ಕೋಹಿನೂರ್ ಹೋಟೆಲ್ ಬಳಿ ಇದ್ದರು. ನಾನು ಮತ್ತು ಆಕಾಶ್ ಠಾಕೂರ್ (30) ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಅಡುಗೆ ಸೇವೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಗಾಯಗೊಂಡ ಅನಿಲ್ ಕುಮಾರ್ ಗುಪ್ತಾ (35) ಪೊಲೀಸರಿಗೆ ತಿಳಿಸಿದ್ದಾರೆ. ಪ್ರತಿದಿನದಂತೆ ರಾತ್ರಿ 10 ಗಂಟೆ ಸುಮಾರಿಗೆ ಮಲಗಲು ಹೋದಾಗ ಆರೋಪಿಯು ಫುಟ್ ಪಾತ್ ಮೇಲೆ ಮಲಗಿರುವುದು ಕಂಡು ಬಂದಿದೆ. ಬುಧವಾರ ಬೆಳಗ್ಗೆ 8.30ರ ಸುಮಾರಿಗೆ ನಾವಿಬ್ಬರೂ ಎದ್ದಾಗ, ಈ ವ್ಯಕ್ತಿ ಇನ್ನೂ ಮಲಗಿರುವುದನ್ನು ನೋಡಿದ್ದೆವು. ಅವನ ಬಳಿ ಹೋಗುವ ಸಮಯದಲ್ಲಿ ಆಕಾಶ್ ಅವನನ್ನು ಎಬ್ಬಿಸಲು ಪ್ರಯತ್ನಿಸಿದ್ದ ಎಂದು ಅನಿಲ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿರುವ ಅನಿಲ್, ನಿದ್ರೆಯಿಂದ ಎದ್ದ ಬಳಿಕ ಆ ವ್ಯಕ್ತ ನನಗೂ ಹಾಗೂ ಅಕಾಶ್‌ಗೂ ನಿರಂತರವಾಗಿ ಬೈಯ್ಯಲು ಆರಂಭ ಮಾಡಿದ್ದ. ಸಿಟ್ಟಿನ ಭರದಲ್ಲಿ ಆತ ಆಕಾಶ್‌ಗೆ 10 ರಿಂದ 12 ಬಾರಿ ಇಂಟರ್‌ಲಾಕ್‌ನಿಂದ ಹೊಡೆದಿದ್ದ. ಈ ವೇಳೆ ಆಕಾಶ್‌ನನ್ನು ಬಚಾವ್ ಮಾಡಲು ಹೋದಾಗ ಆತ ನನ್ನ ಮೇಲೂ ಹಲ್ಲೆ ಮಾಡಿದ ಎಂದು ತಿಳಿಸಿದ್ದಾರೆ.
Bengaluru: ಸಾಯ್ತೀನಿ ಅಂತ ನಾಟಕ ಮಾಡ್ತಿದ್ದ ಪ್ರೇಯಸಿಯನ್ನು ಕೊಲೆಗೈದ ಆಂಟಿ ಲವರ್
ದಾರಿಹೋಕರು ಮಧ್ಯಪ್ರವೇಶಿಸಿ ಆಕಾಶ್ ಮತ್ತು ಅನಿಲ್ ಅವರನ್ನು ಸಿಯಾನ್ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಆಕಾಶ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಮತ್ತು ಅನಿಲ್ ಅವರ ತಲೆಗೆ ಹೊಲಿಗೆ ಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟರಲ್ಲಿ ದಾದರ್ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರತ ಪೊಲೀಸರನ್ನು ಕರೆಸಿದ ಸ್ಥಳೀಯ ಜನರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ತನ್ನನ್ನು ಸೇನಾಪತಿ ಬಾಪತ್ ಮಾರ್ಗದ ಕೊಳೆಗೇರಿ ನಿವಾಸಿ ರಾಜು ಡಿಯೋಲೇಕರ್ (50) ಎಂದು ಹೇಳಿಕೊಂಡಿದ್ದಾನೆ.
Bengaluru: ಕುಡಿಯಲು ಹಣ ಕೊಡಲಿಲ್ಲವೆಂದು ತಂದೆ ಕೊಲೆಗೈದ ಪಾಪಿ ಪುತ್ರ: ಶವದೊಂದಿಗೆ 15 ದಿನ ಕಳೆದ
"ನಾವು ಆರೋಪಿಯನ್ನು ಐಪಿಸಿ ಸೆಕ್ಷನ್ 302 (ಕೊಲೆ), 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ತೀವ್ರವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಮತ್ತು ಅವರನ್ನು ಬಂಧಿಸಿದ್ದೇವೆ" ಎಂದು ಮಾಟುಂಗಾ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದೀಪಕ್ ಚವ್ಹಾನ್ ಹೇಳಿದ್ದಾರೆ.
