Bengaluru: ಸಾಯ್ತೀನಿ ಅಂತ ನಾಟಕ ಮಾಡ್ತಿದ್ದ ಪ್ರೇಯಸಿಯನ್ನು ಕೊಲೆಗೈದ ಆಂಟಿ ಲವರ್
ಬೆಂಗಳೂರಿನಲ್ಲಿ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಸಾಯುವುದಾಗಿ ನಾಟಕ ಮಾಡುತ್ತಿದ್ದಾಗ, ನೈಜವಾಗಿ ನೇಣು ಬಿಗಿದು ಕೊಲೆಯನ್ನೇ ಮಾಡಿದ ಯುವಕ.
ಬೆಂಗಳೂರು (ಏ.27): ಪ್ರೀತಿ ಕುರುಡು, ಕಾಮಕ್ಕೆ ಕಣ್ಣಿಲ್ಲ ಎನ್ನುವುದು ಬೆಂಗಳೂರಿನಲ್ಲಿ ನಡೆದ ದುರಂತ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. 22ರ ಯುವಕನೊಂದಿಗೆ 35 ವರ್ಷದ ಆಂಟಿ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆ. ಆದರೆ, ಯುವಕ ಬೇರೊಬ್ಬರೊಂದಿಗೆ ಸಲುಗೆ ಹೊಂದಿರುವುದನ್ನು ಸಹಿಸಲಾಗದೇ ಸಾಯುವುದಾಗಿ ನಾಟಕ ಮಾಡುತ್ತಿದ್ದ ಆಂಟಿಯನ್ನೇ ಕೊಲೆ ಮಾಡಿ ಪರಾರಿ ಆಗಿದ್ದಾನೆ.
ಕೊಲೆಯಾದ ಮಹಿಳೆಯನ್ನು ಸರವಣಂ w/o ಶಿವಕುಮಾರ್ (35) ಎಂದು ಗುರುತಿಸಲಾಗಿದೆ. ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ ಹಾಗೂ ಆಂಟಿಯ್ನೇ ಕೊಲೆ ಮಾಡಿದ ಯುವಕನನ್ನು ಗಣೇಶ (22) ಎಂದು ಗುರುತಿಸಲಾಗಿದೆ. ಇನ್ನು ಬೆಂಗಳೂರಿನ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ಜೆಸಿ ನಗರದ ಕೊಳೆಗೇರಿಯಲ್ಲಿ ಈ ದುರ್ಘಟನೆ ನಡೆದಿದೆ. ಅನೈತಿಕ ಸಂಬಂಧವನ್ನು ಹೊಂದಿದ್ದ ಮಹಿಳೆ ಯುವಕನಿಗೆ 50 ಸಾವಿರ ರೂಪಾಯಿ ಹಣವನ್ನು ಕೊಟ್ಟಿದ್ದು, ತಮ್ಮದೇ ಏರಿಯಾದ ಪಕ್ಕದಲ್ಲಿ ಯುವಕನ ವಾಸಕ್ಕಾಗಿ ಮನೆಯೊಂದನ್ನು ಮಾಡಿಕೊಟ್ಟಿದ್ದಳು. ಆದರೆ, ಈಗ ಯುವಕನಿಂದೇ ದುರಂತ ಅಂತ್ಯವಾಗಿದ್ದಾಳೆ.
Bengaluru: ಕುಡಿಯಲು ಹಣ ಕೊಡಲಿಲ್ಲವೆಂದು ತಂದೆ ಕೊಲೆಗೈದ ಪಾಪಿ ಪುತ್ರ
ಬೇರೊಬ್ಬರೊಂದಿಗೆ ಸಂಬಂಧ ಬೇಡವೆಂದ ಮಹಿಳೆ: ಅನೈತಿಕ ಸಂಬಂಧವನ್ನು ಹೊಂದಿದ್ದ ಆಂಟಿಯಿಂದ, ಯುವಕ ಗಣೇಶ್‌ಗೆ ಇರಲು ಮನೆ, ಖರ್ಚಿಗೆ ಒಂದಿಷ್ಟು ಹಣ ಸಿಗುತ್ತಿದ್ದ ಹಿನ್ನೆಲೆಯಲ್ಲಿ ದುಡಿಮೆ ಇಲ್ಲದಿದ್ದರೂ ಹಾಯಾಗಿ ಓಡಾಡಿಕೊಂಡಿದ್ದನು. ಈಗ ಆಂಟಿಯ ಜೊತೆಗೆ ಬೇರೆ ಮಹಿಳೆಯರೊಂದಿಗೂ ಸಲುಗೆಯನ್ನು ಬೆಳೆಸಿಕೊಮಡಿದ್ದನು. ಈ ವಿಚಾರವನ್ನು ತಿಳಿದ ಮಹಿಳೆ ನೀನು ಬೇರೆ ಹುಡಿಗಿಯರು ಅಥವಾ ಬೇರೆ ಮಹಿಳೆಯರೊಂದಿಗೆ ಸಲುಗೆ ಹೊಂದುವುದು ಸರಿಯಲ್ಲ. ನಾನು ನಿನಗೆ, ಹಣಕೊಟ್ಟು, ಮನೆಯನ್ನೂ ಮಾಡಿಕೊಟ್ಟು ನೋಡಿಕೊಳ್ಳುತ್ತಿದ್ದೇನೆ. ಆದರೂ, ನೀನು ನನಗೆ ಮೋಸ ಮಾಡಬೇಡ ಎಂದು ಮಹಿಳೆ ಮನವಿ ಮಾಡಿಕೊಂಡಿದ್ದಾಳೆ.
ಸಾಯುವ ನಾಟಕ ಮಾಡಿ, ಮಹಿಳೆಯನ್ನೇ ಕೊಂದ: ಮಹಿಳೆಯಿಂದ ಯುವಕನಿಗೆ ತರಾಟೆ ತೆಗೆದುಕೊಂಡು ಗಲಾಟೆ ಮಾಡಿದ್ದಾಳೆ. ಈ ವೇಳೆ ಸಾಯುವುದಾಗಿ ಮನೆಯ ಕೋಣೆಯಲ್ಲಿ ಫ್ಯಾನಿಗೆ ಹಗ್ಗವನ್ನು ಹಾಕಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುವಕ ಬೆದರಿಕೆ ಒಡ್ಡಿದ್ದಾನೆ. ಈ ವೇಲೆ ಗಣೇಶನನ್ನು ತಡೆದ ಮಹಿಳೆ, ಆತನನ್ನು ತಡೆದು ಮತ್ತಷ್ಟು ಬುದ್ಧಿ ಹೇಳಿದ್ದಾಳೆ. ನಂತರ, ನೀನು ಬೇರೊಬ್ಬರೊಂದಿಗೆ ಸಂಬಂಧ ಬೆಳೆಸಲು ಮುಂದಾದರೆ ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಫ್ಯಾನಿಗೆ ಹಾಕಿದ್ದ ಹಗ್ಗಕ್ಕೆ ತನ್ನ ಕತ್ತನ್ನು ಸಿಕ್ಕಿಸಿಕೊಂಡು ನಾಟಕ ಮಾಡಲು ಮುಂದಾಗಿದ್ದಾಳೆ. ಈ ವೇಳೆ ನೇಣಿನ ಕುಣಿಕೆ ಹಾಕೊಕೊಂಡಿದ್ದ ಹಗ್ಗವನ್ನು ಎಳೆದು ಮಹಿಳೆ ನಿಂತುಕೊಂಡಿದ್ದ ಚೇರ್ ಅನ್ನು ಕೂಡ ತಳ್ಳಿದ್ದಾನೆ. ಆಗ ಮಹಿಳೆ ಕ್ಷಣಾರ್ಧದಲ್ಲಿ ವಿಲ ವಿಲನೇ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ.
Berngaluru: ರ್ಯಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುವ ಬೈಕ್‌ನಿಂದಲೇ ಜಿಗಿದ ಯುವತಿ
ಜೈಲಿಗೆ ಸೇರಿದ ಆರೋಪಿ ಯುವಕ: ನೇಣು ಕುಣಿಕೆಯಲ್ಲಿ ಮಹಿಳೆ ಒದ್ದಾಡಿ ಸಾಯುತ್ತಿದ್ದರೂ ಆಕೆಯನ್ನು ರಕ್ಷಣೆ ಮಾಡದೇ ಕೊಲೆ ಮಾಡಿದ ಆರೋಪಿ ಯುವಕ, ನಂತರ ಅಲ್ಲಿಂದ ಪರಾರಿ ಆಗಿದ್ದಾನೆ. ಇನ್ನು ಹಲವು ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದ ಮಹಿಳೆಗೆ ಇಬ್ಬರು ಮಕ್ಕಳಿದ್ದರು. ಆದರೆ, ಗಂಡನಿಲ್ಲದ ಹಿನ್ನೆಲೆಯಲ್ಲಿ ಅನೈತಿಕ ಸಂಬಂಧವನ್ನು ಇಟ್ಟುಕೊಂಡು ಕೊನೆ ತಾನೇ ದುರಂತ ಅಂತ್ಯವಾಗಿದ್ದಾಳೆ. ಈ ಕುರಿತು ಮಕ್ಕಳು ಅಳುತ್ತಿರುವುದನ್ನು ಕಂಡು ನೆರೆಹೊರೆ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿ ಮಕ್ಕಳು ಹಾಗೂ ಸ್ಥಳೀಯರನ್ನು ವಿಚಾರಿಸಿದಾಗ ಯುವಕ ಮನೆಗೆ ಬಂದಿದ್ದನ್ನು ತಿಳಿಸಿದ್ದಾರೆ.
ಅನೈತಿಕ ಸಂಬಂಧದಿಂದ ಬೀದಿಗೆ ಬಿದ್ದ ಮಕ್ಕಳು: ಬಸವೇಶ್ವರ ನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಯುವಕನನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾನೆ. ಯುವಕನನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದ ಘಟನೆಯ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ. ಆರೋಪಿ ಗಣೇಶ್ ಜೈಲು ಸೇರಿದ್ದಾನೆ. ಬಡತನದಲ್ಲಿಯೇ ಅಮ್ಮನೊಂದಿಗೆ ಬೆಳೆಯುತ್ತಿದ್ದ ಮಕ್ಕಳು ಅಕ್ಷರಶಃ ಬೀದಿಗೆ ಬಿದ್ದಂತಾಗಿವೆ.